ಸ್ವಉದ್ಯೋಗ ಆರ್ಥಿಕ ಸಬಲತೆಗೆ ದಾರಿ: ಬೋಗಾವಿ
ಹಿರೇಕೆರೂರು: ಮಹಿಳೆಯರು ಸ್ವಉದ್ಯೋಗ ಮಾಡುವ ಮೂಲಕ ಅರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಂಸಬಾವಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಿ ಭೋಗಾವಿ ಕರೆ ನೀಡಿದರು. ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಸಾಕ್ಷರ ಭಾರತ ಹಾಗೂ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರದ ವತಿಯಿಂದ ಜರುಗಿದ ನವ ಸಾಕ್ಷರರಿಗೆ ವೃತ್ತಿ ಕೌಶಲ್ಯ ತರಬೇತಿ ಶಿಬಿರ ಉದ್ಘಾಟಿಸಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ವೃತ್ತಿಯಲ್ಲಿ ತೊಡಗುವುದು ಅನಿವಾರ್ಯ. ವೃತ್ತಿ ಆರಂಭಿಸಲು ಸರ್ಕಾರ ಸಾಲ ಸೌಲಭ್ಯ ಕಲ್ಪಿಸುತ್ತಿದೆ. ಮಹಿಳೆಯರು ಸಂಘಟಿತರಾಗಿ ಉದ್ಯೋಗ ಆರಂಭಿಸಬೇಕು. ವೃತ್ತಿ ಕೌಶಲ್ಯ ಹೆಚ್ಚಿಸಿಕೊಂಡು ಅರ್ಥಿಕವಾಗಿ ಸಬಲರಾಗಬೇಕು. ಈ ಮೂಲಕ ಸ್ವಾವಲಂಬಿ ಜೀವನ ಮಾಡಬೇಕು. ಸರ್ಕಾರದ ವಿವಿಧ ಸಂಸ್ಥೆಗಳು ನೀಡುವ ವೃತ್ತಿ ಕೌಶಲ ತರಬೇತಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತರಬೇತಿ ಪಡೆದು ಪರಿಪೂರ್ಣರಾಗಬೇಕು ಎಂದರು. ತಾಲೂಕು ಸಂಯೋಜಕ ಎಂ. ಮಾಲತೇಶ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ತಳವಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಅನ್ನಪೂರ್ಣಾ ಗಾಳಿ, ಗ್ರಾಪಂ ಉಪಾಧ್ಯಕ್ಷೆ ರೇಖಾ ಉಪ್ಪಾರ, ಸದಸ್ಯರಾದ ಶೇಖಪ್ಪ ಬಾರ್ಕಿ, ಅಶೋಕ ಎಲಿವಾಲ, ಸೋಮಪ್ಪ ಬಣಕಾರ, ಮುಖ್ಯೋಪಾಧ್ಯಾಯ ಜಿ.ಎಂ. ಎಣ್ಣೇರ, ಪಿಡಿಒ ಎಂ.ಟಿ. ಹಳ್ಳೂರ, ಪ್ರೇರಕರಾದ ಶಕುಂತಲಾ ಪಿ., ವಿನೋದ, ದೇವರಾಜ ಮಾನೇರ, ರೇಖಾ ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

