ವಿಶ್ವ ಮುನ್ನಡೆಸುವ ಶಕ್ತಿ ನಮಗಿದೆ: ಶಿವಬಸವ ಶ್ರೀ
ಹಾನಗಲ್ಲ: ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವುಗಳ ಸದ್ಬಳಕೆಗೆ ಅವಕಾಶ ಒದಗಿಸಿದರೆ ಭಾರತ ಜಗತ್ತನ್ನೇ ಮುನ್ನಡೆಸುವ ಶಕ್ತಿ ಸಂಪಾದಿಸಬಲ್ಲದು ಎಂದು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಕ್ಕಿಆಲೂರು ನರಸಿಂಗರಾವ್ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ಹುಬ್ಬಳ್ಳಿಯ ಆರ್.ಆರ್. ಲ್ಯಾಂಡ್ಮಾರ್ಕ್ಸ್ ಪ್ರತಿಷ್ಠಾನ, ಅಗಸ್ತ್ಯ ಅಂತಾರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನ ಹಾಗೂ ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಮೇಳ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಯುಗದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ಹೆಚ್ಚು ಜನರಿಗೆ ಲಾಭವಾಗುವ ಯೋಜನೆಗಳನ್ನು ರೂಪಿಸಲು ವಿಜ್ಞಾನಿಗಳು ಕಾಳಜಿ ವಹಿಸಬೇಕಿದೆ. ವೈಜ್ಞಾನಿಕ ಸಂಶೋಧನೆಗಳು ಫಲಪ್ರದವಾದರೆ ದೇಶ ಬೆಳವಣಿಗೆ ಹೊಂದುತ್ತದೆ. ಜಗತ್ತಿನ ಎಲ್ಲ ಬೆಳವಣಿಗೆಗಳನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಲು ನೆರವಾಗುವ ಮೊಬೈಲ್, ಅಂತರ್ಜಾಲ ಇತ್ಯಾದಿ ಸಾಧನಗಳೇ ವಿಧ್ವಂಸಕ ಕೃತ್ಯಗಳಿಗೂ ಬಳಕೆಯಾಗುತ್ತಿವೆ. ವಿಜ್ಞಾನ-ತಂತ್ರಜ್ಞಾನಗಳು ದೇಶದ ಹಿತಕ್ಕೆ ಬಳಕೆಯಾಗಬೇಕೆಂದರು.
ವಿಜ್ಞಾನದಲ್ಲಿ ಆಸಕ್ತಿಯಿರಲಿ
ಆರ್.ಆರ್. ಲ್ಯಾಂಡ್ಮಾರ್ಕ್ಸ್ ಪ್ರತಿಷ್ಠಾನದ ಸಂಚಾಲಕ ವಾಸುದೇವ ಪಾಟೀಲ ಮಾತನಾಡಿ, ವೈಜ್ಞಾನಿಕ ಕ್ಷೇತ್ರದ ಸುಧಾರಣೆಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳೋಣ. ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವಲ್ಲಿ ನಾವು ಎಡವಿದ್ದೇವೆ. ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರ್ಬನ್ ಬ್ಯಾಂಕ್ ಅಧ್ಯಕ್ಷ ನಾಗರಾಜ ಪಾವಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನದ ಕೊರತೆ ಕಾಡುತ್ತಿದೆ. ಅವರಿಗೆ ಮಾರ್ಗದರ್ಶನ ನೀಡಿ, ಆತ್ಮಸ್ಥೈರ್ಯ ವೃದ್ಧಿಸುವ ಕೆಲಸವನ್ನು ಶಿಕ್ಷಕ ಸಮುದಾಯ ಮಾಡಬೇಕು. ವಿದ್ಯಾರ್ಥಿಗಳೂ ಸತತ ಅಧ್ಯಯನಶೀಲರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಅಗಸ್ತ್ಯ ಪ್ರತಿಷ್ಠಾನದ ನಿರ್ದೇಶಕ ಶ್ರೀಶೈಲ ಧನವಾಡೆ, ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ನಿರ್ದೇಶಕರಾದ ಎನ್.ಸಿ. ಪಾವಲಿ, ಎಸ್.ಜಿ. ಮೋಟಗಿ, ವಿ.ಎಚ್. ಪೂಜಾರ, ಮನೋಜ ದೇಸಾಯಿ, ಎಸ್.ಬಿ. ತುಪ್ಪದ, ಪ್ರಾಚಾರ್ಯ ಕೆ.ಎಸ್. ಕುಂಬಾರ, ಎಚ್.ಬಿ. ಉಮಾಪತಿ, ಅನಿಲ ಪಾವಲಿ, ಜಿಡಿಜಿ ಗುರುಕುಲದ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಗುತ್ತಿಗೆದಾರ ಶಿವಕುಮಾರ ದೇಶಮುಖ ಅತಿಥಿಗಳಾಗಿದ್ದರು.
ಮೇಘನಾ ಬಾಬಜಿ, ಐಶ್ವರ್ಯಾ ಜವಳಿ ಪ್ರಾರ್ಥಿಸಿದರು. ಎಸ್.ಆರ್. ಶಕುನವಳ್ಳಿ ಸ್ವಾಗತಿಸಿದರು. ವಸಂತ ಚಿಕ್ಕಣ್ಣನವರ ನಿರೂಪಿಸಿದರು. ಗೀತಾ ನಾಯಕ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

