ಸಂಭಾಜಿ ಗಡಿಪಾರಿಗೆ ಕನ್ನಡ ಜಾಗೃತಿ ವೇದಿಕೆ ಆಗ್ರಹ
ಹಾನಗಲ್ಲ: ಎಂಇಎಸ್ ಬೆಂಬಲಿತ ಶಾಸಕ ಸಂಭಾಜಿ ಪಾಟೀಲರನ್ನು ಕನ್ನಡ ನಾಡಿನಿಂದ ಗಡಿಪಾರು ಮಾಡಬೇಕು. ಕರ್ನಾಟಕದ ಸಮಸ್ತ ಜನತೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ಹಾನಗಲ್ಲ ತಾಲೂಕು ಘಟಕ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದೆ.
ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಪರಶುರಾಮ ಡೂಗನವರ ನೇತೃತ್ವದಲ್ಲಿ ತಹಸೀಲ್ದಾರ್ಗೆ ಶುಕ್ರವಾರ ಮನವಿ ಅರ್ಪಿಸಿ, ಕನ್ನಡಿಗರನ್ನು ಕೆಣಕಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲರನ್ನು ಕನ್ನಡ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಬೇಕು. ಇದಕ್ಕೂ ಮೊದಲು ಅವರು ಕನ್ನಡಿಗರ ಕ್ಷಮೆ ಯಾಚಿಸಬೇಕು. ಕನ್ನಡದ ನೆಲ-ಜಲ-ಭಾಷೆ- ಸಂಸ್ಕೃತಿ ಪರವಾಗಿ ಹೋರಾಡುವ ಕನ್ನಡಪರ ಸಂಘಟನೆ ಹಾಗೂ ಮುಖಂಡರ ಮೇಲೆ ಹಾಕಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಕೂಡಲೇ ಹಿಂಪಡೆಯಬೇಕು. ಸುವರ್ಣ ವಿಧಾನ ಸೌಧದ ಬಳಿ ನಡೆದ ರೈತನ ಆತ್ಮಹತ್ಯೆಗೆ ಕಾರಣವಾದ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಹಾಗೂ ಬೆಂಬಲ ಬೆಲೆ, ಸಹಾಯಧನ ನೀಡಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಕಾಪಾಡಬೇಕು. ಹಾವೇರಿ ಜಿಲ್ಲೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು. ಹಾನಗಲ್ಲ ತಾಲೂಕಿನಲ್ಲಿ ಸಕ್ಕರೆ, ಬಟ್ಟೆ ಅಥವಾ ಜ್ಯೂಸ್ ಕಾರ್ಖಾನೆ ಸ್ಥಾಪಿಸಬೇಕು ಎಂದು ಮನವಿ ಮಾಡಿದೆ.
ತಾಲೂಕು ಗೌರವಾಧ್ಯಕ್ಷ ಎಸ್.ಎಸ್. ಖಾದ್ರಿ, ಉಪಾಧ್ಯಕ್ಷ ಮುತ್ತಣ್ಣ ಈಳಿಗೇರ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ಟೋಪೋಜಿ, ಪ್ರಧಾನ ಕಾರ್ಯದರ್ಶಿ ಸುರೇಶ ನಾಗಣ್ಣನವರ, ಸದಸ್ಯರಾದ ಸುರೇಶ ದೊಡ್ಡಕುರುಬರ, ಖಾಜಾಸಾಬ ಬನವಾಸಿ, ಬಸವರಾಜ ಹರ್ಲಾಪುರ, ಶೇಖರ ಚಲವಾದಿ, ನಿಂಗಪ್ಪ ದೇವಗಿರಿ, ಸಿದ್ದಪ್ಪ ಹೊಸನಗರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

