ಹಾವೇರಿ

ನೆಲ, ಜಲ ರಕ್ಷಣೆಗೆ ಬದ್ಧರಾಗಿ: ಜಿ.ಎನ್. ಕೊಟ್ರೇಶ್ ಮನವಿ

Published On :

ರಾಣಿಬೆನ್ನೂರು: ನಾಡು, ನುಡಿ, ನೆಲ ಜಲದ ರಕ್ಷಣೆಗೆ ಮುಂದಾದಲ್ಲಿ ಅನ್ಯ ಭಾಷಿಕರ ಆಟ ನಡೆಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಿ.ಎಸ್. ಕೊಟ್ರೇಶ ಹೇಳಿದರು.
ಕರವೇ ಅಸುಂಡಿ ಗ್ರಾಮ ಘಟಕವನ್ನು ಉದ್ಘಾಟಿಸಿದ ಅವರು, ಕನ್ನಡ ಮಾತನಾಡಲು, ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ನಾವು, ಅನ್ಯ ಭಾಷಿಕರಿಗೆ ಮಣೆ ಹಾಕುತ್ತಿದ್ದೇವೆ ಎಂದರು. ಅಸುಂಡಿ ಗ್ರಾಪಂ ಅಧ್ಯಕ್ಷ ಲಿಂಗನಗೌಡ ಪಾಟೀಲ ಗ್ರಾಮ ಘಟಕದ ನಾಮಫಲಕ ಅನಾವರಣಗೊಳಿಸಿದರು.
ಡಾ೤ ಶಂಕರಗೌಡ ಪಾಟೀಲ, ನ್ಯಾಯವಾದಿ ಪಿ.ಜಿ. ಗೊಡ್ಡೆಮ್ಮಿ, ಗ್ರಾಪಂ ಸದಸ್ಯರಾದ ಹೊನ್ನಪ್ಪ ಕಳ್ಳಿಮನಿ, ಜೋಗಮ್ಮ ಪಾರ್ವತೆರ, ಬಸವರಾಜ ಮರಡೆಣ್ಣನವರ, ಹೇಮಣ್ಣ ಬಣಕಾರ, ವಿರೂಪಾಕ್ಷಪ್ಪ ಕೆರೂಡಿ, ಚಂದ್ರು ಕುಪ್ಪೆಲೂರು, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಕಡೆಮನಿ ಮಾತನಾಡಿದರು.
ಕರವೇ ಗ್ರಾಮ ಘಟಕದ ಅಧ್ಯಕ್ಷರಾದ ಜಯಪ್ಪ ಗೊಡ್ಡೆಮ್ಮಿ, ಬಸವರಾಜ ನೆಗಳೂರು, ಪರಮೇಶ್ವರಯ್ಯ ಷಡಕ್ಷರಿಮಠ, ಮೈಲಾರೇಪ್ಪ ಸಣ್ಣನೀಲಪ್ಪನವರ, ಲಿಂಗರಾಜ ಕಮ್ಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.