ಚನ್ನಮ್ಮ ಪುತ್ಥಳಿ ಸ್ಥಾಪನೆಗೆ ನಿರ್ಲಕ್ಷ್ಯ: ಆಕ್ಷೇಪ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 24
ಶರಣರು, ದಾರ್ಶನಿಕರ ತವರು ಶಿಗ್ಗಾಂವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಸ್ಥಾಪಿಸುವಂತೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮಣ್ಣೆಣ್ಣವರ ಆಕ್ಷೇಪ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಎದುರಿಗೆ ಗುರುವಾರ ವೀರರಾಣಿ ಕಿತ್ತೂರಾಣಿ ಚನ್ನಮ್ಮಳ 190ನೇ ವಿಜಯೋತ್ಸವ ಆಚರಣೆಗೆ ವೀರರಾಣಿ ಕಿತ್ತೂರಾಣಿ ಚನ್ನಮ್ಮ ಅಭಿಮಾನಿ ಬಳಗ ಹಾಗೂ ಹರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ 15 ಅಡಿ ಎತ್ತರದ ಕಟೌಟ್ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಅವರು, ಸರ್ಕಾರ ಈ ವಿಜಯಿ ಯಾತ್ರೆಯನ್ನು ಬೆಳಗಾವಿ ಜಿಲ್ಲೆಗಷ್ಟೇ ಸೀಮಿತಗೊಳಿಸದೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು. ಪ್ರತಿ ಶಾಲೆ, ಕಾಲೇಜು ಹಾಗೂ ಕಚೇರಿಗಳಲ್ಲಿ ಚನ್ನಮ್ಮಾಜಿಯ ಭಾವಚಿತ್ರವನ್ನು ಅಳವಡಿಸಬೇಕು. ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯಕ್ಕೆ ಚನ್ನಮ್ಮಾಜಿ ಹೆಸರಿಡಬೇಕು ಎಂದು ಅಗ್ರಹಿಸಿದರು.
ಪುರಸಭೆ ಸದಸ್ಯ ಸುಭಾಷ್ ಚವ್ಹಾಣ ಮಾತನಾಡಿ, ಚನ್ನಮ್ಮಾಜಿ ಪುತ್ಥಳಿ ನಿರ್ಮಾಣಕ್ಕೆ ನಿರಂತರ ಹೋರಾಟ ಮಾಡುತ್ತಿರುವ ಹರ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಪುರಸಭೆ ಬೆಂಬಲ ಸೂಚಿಸಿ, ಸಹಕರಿಸಲಿದೆ ಎಂದರು.
ಪುರಸಭೆ ಸದಸ್ಯ ಭರಮಜ್ಜ ನವಲಗುಂದ, ಮುಖಂಡ ಹನುಮಂತ ಬಂಡಿವಡ್ಡರ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟೀಲ ಮಾತನಾಡಿ, ಚನ್ನಮ್ಮಾಜಿ ಪುತ್ಥಳಿಯನ್ನು ತ್ವರಿತವಾಗಿ ನಿರ್ಮಿಸುವಂತೆ ಒತ್ತಾಯಿಸಿದರು.
ಕುರುಬ ಸಮಾಜದ ಮುಖಂಡರಾದ ಗದಿಗೆಪ್ಪ ಕೊಡ್ಲಿವಾಡ ಹಾಗೂ ಪ್ರಶಾಂತ ದುಂಡಿಗೌಡ್ರ ಚನ್ನಮ್ಮ ಕಟೌಟ್ಗೆ ಪೂಜೆ ಸಲ್ಲಿಸಿದರು. ಜಿಪಂ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲದಿ, ತಾಪಂ ಮಾಜಿ ಅಧ್ಯಕ್ಷ ಬಾಪುಗೌಡ ಹೊಸಗೌಡ್ರ, ಮುಖಂಡರಾದ ಹನುಮರಡ್ಡಿ ನಡುವಿನಮನಿ, ಎಫ್.ಸಿ. ಪಾಟೀಲ, ನ್ಯಾಯವಾದಿಗಳಾದ ಎನ್.ಎನ್. ಪಾಟೀಲ, ಸಿ.ಎಫ್. ಅಂಗಡಿ, ಎಸ್ಎಫ್ಐ ಅಧ್ಯಕ್ಷ ಸುಭಾಸ ಮಾದರ, ತಾಲೂಕು ಪಂಚಮಸಾಲಿ ಅಧ್ಯಕ್ಷ ಶಿವಾನಂದ ಬಾಗೂರ, ಹರ ಸಂಸ್ಥೆಯ ನಿಂಭನಗೌಡ ಗುಡ್ಡನಗೌಡ್ರ, ಜಿ.ಸಿ. ಪಾಟೀಲ, ಗುರುನಾಥ ಅಣ್ಣಿಗೇರಿ, ಗಣೇಶ ಸೀಗಿಹಳ್ಳಿ, ಶಂಕರ ಜವಳಗಿ, ಫಕ್ಕೀರಪ್ಪ ದಂಡೀನ, ಬಸವರಾಜ ಜೀವಾಜಿ ಜಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

