ಹಾವೇರಿ

ಟಿಸಿ, ಮೋಟರ್ ದುರಸ್ತಿಗೆ ಆಗ್ರಹ

Published On :

ಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು ಎಂಟು ದಿನ ಗತಿಸಿದರೂ ಹೆಸ್ಕಾಂ ಅಧಿಕಾರಿಗಳು ದುರಸ್ತಿ ಮಾಡಿಲ್ಲ. ಕೊಳವೆಬಾವಿಯ ವಿದ್ಯುತ್ ಮೋಟರ್ ಕೆಟ್ಟಿದ್ದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಿಪೇರಿ ಮಾಡಿಸದೆ, ಗ್ರಾಮದಲ್ಲಿ ಕುಡಿವ ನೀರಿಗೂ ಪರಿತಪಿಸುವಂತಾಗಿದೆ.
ಶ್ಯಾಡಂಬಿ ಗ್ರಾಮದಲ್ಲಿ ಕೇವಲ ನಾಲ್ಕು ಕೊಳವೆ ಬಾವಿಗಳಿದ್ದು, ಒಂದರಲ್ಲಿ ಜಂಗು ಮಿಶ್ರಿತ ನೀರು ಬರುತ್ತಿದೆ. ಇನ್ನೊಂದು ದೇವಸ್ಥಾನದ ಮುಂಭಾಗದಲ್ಲಿವೆ. ಉಳಿದೆರಡು ಗ್ರಾಮದೊಳಗಿವೆ. ಗ್ರಾಮದ ಪ್ಲಾಟ್‌ನಲ್ಲಿ ಜನಸಂಖ್ಯೆ ಜಾಸ್ತಿಯಿದ್ದು, ಅಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ವಿಪರೀತವಾಗಿದೆ. ಮೈಲುಗಟ್ಟಲೆ ಅಲೆದು ನೀರು ತರುವ ಸ್ಥಿತಿ ಇದೆ. ಆದರೂ ಹೆಸ್ಕಾಂ ಟಿಸಿ, ಪಿಡಿಒ ಮೋಟರ್  ದುರಸ್ತಿ ಮಾಡಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕುನ್ನೂರು ಗ್ರಾಮದಲ್ಲೂ ಟಿಸಿ ಕೆಟ್ಟು 8 ದಿನಗಳಾಗಿವೆ. ಆದರೂ ಹೆಸ್ಕಾಂ ವಿಭಾಗಾಧಿಕಾರಿ ವಾಸುದೇವ ಪತ್ತಾರ್ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆದರೆ, ಪಿಡಿಒ ಅವರಲ್ಲಿ ಕೇಳಿದರೆ, ವಿದ್ಯುತ್ ಸಮಸ್ಯೆ ಸರಿಪಡಿಸಲು ಹಾಗೂ ಮೋಟರ್ ದುರಸ್ತಿಗೆ ಹಿಂದೆ ರು. 1500 ಖರ್ಚುಮಾಡಿದ್ದಾಗಿ ಹೇಳುತ್ತಾರೆ. ಈಗ ದುರಸ್ತಿ ಮಾತು ಬಂದರೆ ಪಿಡಿಒ ಹಾಗೂ ಹೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಾರೆ. ನೀರಿಲ್ಲದೆ ಕಂಗೆಟ್ಟಿರುವ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.