ಹಾವೇರಿ

ಶ್ರೀಕೃಷ್ಣ ಪಾರಿಜಾತ ಪರಿಷ್ಕರಿಸಿ, ಪಠ್ಯಕ್ರಮ ರೂಪಿಸಿ: ನಾವಲಗಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 29
ಉತ್ತರ ಕರ್ನಾಟಕದ ಶ್ರೇಷ್ಠ ಜನಪದ ರಂಗ ಪ್ರಕಾರವಾಗಿರುವ ಶ್ರೀಕೃಷ್ಣ ಪಾರಿಜಾತ ಕಲೆಯನ್ನು ಪುನರ್ ಪರಿಷ್ಕರಿಸಿ ನೂತನ ಪಠ್ಯಕ್ರಮ ರೂಪಿಸುವುದು ಅಗತ್ಯ ಎಂದು ಗೋಕಾಕ ಜಿಎಸ್‌ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ವಿದ್ವಾಂಸ ಡಾ೤ ಸಿ.ಕೆ. ನಾವಲಗಿ ಅಭಿಪ್ರಾಯಪಟ್ಟರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಶ್ರೀ ಭೀಮರಾವ ಪೀರಾಜಿರಾವ ರಣಮೋಡೆ ಸ್ಮರಣಾರ್ಥ ಸೋಮವಾರ ಏರ್ಪಡಿಸಲಾಗಿದ್ದ ಶ್ರೀಕೃಷ್ಣ ಪಾರಿಜಾತ ಪರಂಪರೆ ಮತ್ತು ಹೊಸ ಸಾಧ್ಯತೆಗಳು ಕುರಿತು ದತ್ತಿನಿಧಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಜಾಗತೀಕರಣದ ಪ್ರಭಾವದಿಂದ ಪಾರಂಪರಿಕ ಕಲೆಗಳು ವಿನಾಶದ ಅಂಚಿನಲ್ಲಿವೆ. ಯಕ್ಷಗಾನ, ಸಂಗ್ಯಾ-ಬಾಳ್ಯಾ ಕಲೆಗಳಿಗೆ ಇರುವಂತೆ ಕೃಷ್ಣಪಾರಿಜಾತ ಕಲೆಗೆ ಯಾರೂ ಗಾಡ್ ಫಾದರ್ ಇಲ್ಲ. ಉತ್ತರ ಕರ್ನಾಟಕದ ಹೆಮ್ಮೆಯ ಕಲೆಯಾಗಿರುವ ಈ ರಂಗಪ್ರಕಾರವನ್ನು ಆಧುನಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸುಧಾರಿಸಬೇಕು. ಈ ಸಂಬಂಧ ವಿದ್ವಾಂಸರು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ವಿವಿ ಕುಲಪತಿ ಪ್ರೊ೤ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿ, ಜಾಗತೀಕರಣದ ಪ್ರಭಾವದಿಂದಾಗಿ ಪಾರಂಪರಿಕ ಕಲೆಗಳು ಮೂಲೆಗುಂಪಾಗುತ್ತಿವೆ. ಟೀವಿ, ಸಿನೆಮಾ, ಕಂಪ್ಯೂಟರ್‌ಗಳ ಪ್ರಭಾವದಿಂದ ದಾರಿ ತಪ್ಪುತ್ತಿರುವ ಯುವಪೀಳಿಗೆಯನ್ನು ಜನಪದ ಕಲೆಗಳ ಕಡೆಗೆ ಆಕರ್ಷಿಸಿದರೆ ಕಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಕುಲಸಚಿವ ಪ್ರೊ೤ ಡಿ.ಬಿ. ನಾಯಕ ಉಪಸ್ಥಿತರಿದ್ದರು. ಡಾ೤ ನಾವಲಗಿ ಹಾಗೂ ಪಾರಿಜಾತ ಕಲಾವಿದರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು. ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ೤ ಸ.ಚಿ. ರಮೇಶ ಸ್ವಾಗತಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ನಿರೂಪಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಡಾ೤ ಚಂದ್ರಪ್ಪ ಸೊಬಟಿ ವಂದಿಸಿದರು.
ಗೋಕಾಕದ ಶ್ರೀ ಈಶ್ವರಚಂದ್ರ ಬೆಟಗೇರಿಯವರ ನೇತೃತ್ವದಲ್ಲಿ ಹನುಮಂತ ದಾಸರ, ಮಹಾಂತೇಶ ಹೂಗಾರ, ಬಸವರಾಜ ಕಲ್ಲಪ್ಪ ಕುಂಬಾರ, ಮಹಾರುದ್ರಪ್ಪ ಪತ್ತಾರ, ಚಂದ್ರಶೇಖರ ನಿಂಗಯ್ಯ ಹಿರೇಮಠ ಶ್ರೀಕೃಷ್ಣ ಪಾರಿಜಾತ ಸಣ್ಣಾಟ ಪ್ರಸಂಗವನ್ನು ಅಮೋಘವಾಗಿ ಪ್ರದರ್ಶಿಸಿದರು.
ಹಿರಿಯ ಸಂಶೋಧನಾ ಅಧಿಕಾರಿ ಡಾ೤ ಕೆ. ಪ್ರೇಮಕುಮಾರ, ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ೤ ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಅಭಿಯಂತ ಎನ್.ಕೆ. ಚಂದು, ಸಂದರ್ಶಕ ಪ್ರಾಧ್ಯಾಪಕ ಡಾ೤ ಕೆ. ಕಮಲಾಕ್ಷ, ಡಾ೤ ಶ್ರೀಶೈಲ ಹುದ್ದಾರ, ಕಲಾವಿದರಾದ ಬಸವರಾಜ ಶಿಗ್ಗಾಂವಿ, ವೀರೇಶ ಬಡಿಗೇರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.