ಹಾವೇರಿ

ಕಥೆಗಳು ದಾರಿದೀಪ: ಶಿಡ್ಲಾಪುರ

Published On :

ಹಾನಗಲ್ಲ: ಕನ್ನಡ ಸಾಹಿತ್ಯದಲ್ಲಿ ಜನಪದ ಕಥೆಗಳಿಗೆ ಮೌಲಿಕ ಸ್ಥಾನವಿದ್ದು, ಕಥೆ ಕೇಳುವ, ಹೇಳುವ, ಅರ್ಥ ಅರಿಯುವುದನ್ನು ಮಕ್ಕಳಿಗೆ ಕಲಿಸುವ ಶಿಬಿರಗಳು ನಡೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ತಿಳಿಸಿದರು. ಹಾನಗಲ್ಲಿನಲ್ಲಿ ಬಿ.ಜಿ. ಕಟ್ಟಿ ವಿಚಾರ ವೇದಿಕೆ ಹಾಗೂ ಮಂಥನ ವೇದಿಕೆ ಆಯೋಜಿಸಿದ ಒಂದು ವಾರದ ಚೈತ್ರದ ಚಿಗುರು ಮಕ್ಕಳ ಶಿಬಿರದಲ್ಲಿ ನೀತಿ ಕಥೆಗಳು ಜೀವನದ ಪಾಠಗಳು ವಿಷಯದ ಕುರಿತು ಮಕ್ಕಳೊಂದಿಗೆ ಮಾತನಾಡಿದ ಅವರು, ಕಥೆಗಳು ಅರಿವಿಲ್ಲದಂತೆ ಬದುಕಿಗೆ ಹೊಸ ತಿರುವು ನೀಡುವ ಶಕ್ತಿ ಹೊಂದಿವೆ. ಪ್ರಕೃತಿಯನ್ನು ಉದಾಹರಿಸಿ ಮನುಷ್ಯನ ಬದುಕಿಗೆ ಮಾರ್ಗದರ್ಶನ ಮಾಡುವ ಅದ್ಭುತ ಶಕ್ತಿ ಕಥೆಗಳಿಗಿದೆ. ನಮ್ಮೊಳಗಿನ ಸಾಂಸ್ಕೃತಿಕ ಅಂತ-ಶಕ್ತಿಯನ್ನು ಜಾಗೃತಗೊಳಿಸಲು ಕಥೆಗಳು ಸಹಕಾರಿ ಎಂದರು.ರಜಾ ದಿನಗಳು ಕಾಲ ಹರಣಕ್ಕಲ್ಲ, ಕಾಲದ ಸದ್ವಿನಿಯೋಗಕ್ಕೆ ಸರಿಯಾದ ಮಾರ್ಗದರ್ಶನ ಪಡೆಯಲು ಸದುಪಯೋಗ ಮಾಡಿಕೊಳ್ಳಬೇಕು. ಉತ್ತಮ ಸಾಹಿತ್ಯದ ಓದು, ಭಾವ ಭಕ್ತಿ ಗೀತೆಗಳನ್ನು ಹಾಡುವುದು, ಹೊಸ ಹೊಸ ವಿಷಯಗಳನ್ನು ಅರಿಯುವುದು. ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಯೋಗ, ಆಟಗಳಲ್ಲಿ ಪಾಲ್ಗೊಂಡು ಮಾನಸಿಕ ಹಾಗೂ ಶಾರೀರಿಕ ಸದೃಢತೆಗೆ ರಜಾ ದಿನಗಳು ಸದುಪಯೋಗ ಆಗಬೇಕು ಎಂದರು. ಕಲಾವಿದ ರವಿ ಲಕ್ಷ್ಮೇಶ್ವರ ಭಾವ ಗೀತೆಗಳನ್ನು ಹಾಡಿದರು. ಶಿಬಿರ ನಿರ್ದೇಶಕ ಸತ್ಯವತಿ ಕಟ್ಟಿ, ಸಮೀರ ಕಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.