ಸರ್ವರ ವಿಕಾಸಕ್ಕಾಗಿ ಅನುಭವ ಮಂಟಪ
ಹಾವೇರಿ: ಬಸವಾದಿ ಶರಣರ ಕಾಲದಲ್ಲಿ ಸರ್ವರಿಗೂ ಶಿಕ್ಷಣ ದೊರೆಯುತ್ತಿರಲಿಲ್ಲ. ಇದರಿಂದ ಸಮಾಜದ ಎಲ್ಲ ಜನತೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ವಿಕಸನವಾಗುತ್ತಿರಲಿಲ್ಲ. ಸಮಾಜದ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನವಾಗಬೇಕಾದರೆ ಅವರಿಗೆ ವಿದ್ಯೆಯನ್ನು ನೀಡುವುದು ಮುಖ್ಯ ಎಂದು ಮನಗಂಡು ಶರಣರು ಅನುಭವ ಮಂಟಪವನ್ನು ಸ್ಥಾಪಿಸಿದರು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ಅವರು ನಗರದ ಹೊಸಮಠದ ಬಸವಕೇಂದ್ರದಲ್ಲಿ ನಡೆದ ಶರಣ ಸಂಗಮ ಹಾಗೂ ಶರಣ ಅಲ್ಲಮಪ್ರಭುಗಳ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಶರಣರ ಸ್ವಾವಲಂಬಿ ಜೀವನ ಹಾಗೂ ಡಾ. ಅಂಬೇಡ್ಕರ್ ಸ್ವಾಭಿಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಸತ್ಯ, ಶುದ್ಧ, ನಿಷ್ಠೆ, ಪ್ರಾಮಾಣಿಕತೆ, ಸದ್ಭಾವನೆ, ಸನ್ನಡತೆ, ಸದ್ಗುಣ, ಸದ್ವಿನಯಗಳನ್ನೊಳಗೊಂಡ ವ್ಯಕ್ತಿಯು ಕೈಗೊಳ್ಳುವ ಕಾರ್ಯಗಳನ್ನು ಪವಿತ್ರವಾದ ಹಾಗೂ ಲಿಂಗನಿಷ್ಠೆಯಾದ ಕಾಯಕವೆಂದು ತಿಳಿದುಕೊಂಡಿದ್ದರು ಎಂದು ಹೇಳಿದರು. ಶರಣರು ಕಾಯಕದಲ್ಲಿ ಕೈಲಾಸವನ್ನು ಕಂಡಂತೆ ಬಡವನಲ್ಲಿಯೂ ಭಗವಂತನನ್ನು ಕಂಡವರು, ಬಡವನಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಲು ಪ್ರತಿಯೊಬ್ಬರೂ ಸದಾ ಕಾಲ ಚಿಂತಿಸಬೇಕು ಎಂದರು. ವಿಷವು ಅದನ್ನು ಕುಡಿದವನನ್ನು ಮಾತ್ರ ನಾಶ ಮಾಡಿದರೆ, ದ್ವೇಷ, ಅಸೂಯೆ, ದುರ್ಬುದ್ಧಿ, ದುರಹಂಕಾರಗಳಿರುವ ಮನುಷ್ಯನನ್ನು ಇವು ಜೀವಂತವಾಗಿ ನಾಶಪಡಿಸುತ್ತವೆ. ಪ್ರಸ್ತುತ ಶ್ರಮವಹಿಸಿ ದುಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಶ್ರಮವಹಿಸಿ ದುಡಿದು ಸ್ವಾಭಿಮಾನದಿಂದ ಬದುಕುವದನ್ನು ಮೊದಲು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೊಡುವ ಕೈಗಳಿಗಿಂತ ದುಡಿಯುವ ಕೈಗಳೇ ಶ್ರೇಷ್ಠ ಎಂದು ಶಿವಶರಣರು ತಮ್ಮ ಅನುಭವದಿಂದ ಕಂಡುಕೊಂಡಿದ್ದರು ಎಂದು ಹೇಳಿದರು. ವೇದಿಕೆಯಲ್ಲಿ ಜಯಣ್ಣ ಕಬ್ಬೂರ, ನಿವೃತ್ತ ಶಿಕ್ಷಕ ಬಿಷ್ಠನಗೌಡರ, ಬಿ.ಎಸ್. ಮುಗದೂರ, ಡಾ. ಸಿದ್ಧರಾಮೇಶ್ವರ ಚಿಕ್ಕಬಾಸೂರ ಇದ್ದರು. ಎಸ್.ವಿ. ಚಿಟ್ಟಿ ಸ್ವಾಗತಿಸಿದರು. ಶಿವಬಸವ ಹತ್ತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

