ಭದ್ರತೆಗಾಗಿ ಮೋದಿ ಬೆಂಬಲಿಸಿ
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮಾಜಿ ಸಚಿವ ಸಿ.ಎಂ. ಉದಾಸಿ ಅವರು ಗುರುವಾರ ಇಲ್ಲಿಯ ಎಪಿಎಂಸಿ ಯಾರ್ಡ್ನ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ಮಾಡಿದರು.
ಮತಯಾಚನೆ ವೇಳೆ ಬಿಜೆಪಿ ಎಲ್ಲ ಘಟಕಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಉದಾಸಿ ಅವರಿಗೆ ಸಾಥ್ ನೀಡಿದರು. ಭವಿಷ್ಯದ ಪ್ರಧಾನಿ ನರೇಂದ್ರ ಮೋದಿ, ಸಿ.ಎಂ. ಉದಾಸಿ ಹಾಗೂ ಶಿವಕುಮಾರ ಉದಾಸಿ ಪರ ಕಾರ್ಯಕರ್ತರು ಜೈಘೋಷ ಕೂಗಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಸಿ.ಎಂ. ಉದಾಸಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಆದ್ದರಿಂದ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಬೇಕು ಎಂದು ಮನವಿ ಮಾಡಿದರು.
ಮತ ಬಾಂಧವರು ವಿಪಕ್ಷಗಳ ಅನಗತ್ಯ ಹೇಳಿಕೆಗಳಿಗೆ ಕಿವಿಗೊಡದೇ, ಭವ್ಯ ಭಾರತದ ನಿರ್ಮಾಣದ ದೃಷ್ಟಿಯಿಂದ ಹಾಗೂ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಕಮಲದ ಗುರುತಿಗೆ ಮತನೀಡಬೇಕು. ದೇಶದ ಅರ್ಥವ್ಯವಸ್ಥೆ ಹದಗೆಡಲು, ತೈಲ ಬೆಲೆ ಏರಿಕೆ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳು ಏರಿಕೆಗೆ ಕಾರಣವಾದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತವನ್ನು ಕೊನೆಗಾಣಿಸಲು ಮತದಾರರು ನಿರೀಕ್ಷೆಗೂ ಮೀರಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿರುವುದು ಸಂತಸದ ಸಂಗತಿ ಎಂದರು. ಜಗತ್ತೇ ನೆರೇಂದ್ರ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದನ್ನು ಬೆರಗುಗಣ್ಣಿನಿಂದ ಎದರು ನೋಡುತ್ತಿದೆ. ಹೀಗಿದ್ದಾಗ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚು ಶ್ರಮವಹಿಸಿ, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಿಕ್ಕೆ ತರಲು ಕಂಕಣ ಬದ್ಧರಾಗಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ನೆಹರೂ ಓಲೇಕಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಕಲಕೋಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ, ನಗರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ನಗರಸಭೆ ಸದಸ್ಯ ಜಗದೀಶ ಮಲಗೋಡ, ಮುಖಂಡ ಗಿರೀಶ ತುಪ್ಪದ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಕಾಶ ವಾಲೀಶೆಟ್ಟರ, ಎಪಿಎಂಸಿ ನಿರ್ದೇಶಕ ರಾಚಪ್ಪ ಮಾಗನೂರ, ಎಪಿಎಂಸಿ ವ್ಯಾಪಾರಸ್ಥರಾದ ಸುಭಾಸ್ ಹುರಳಿಕುಪ್ಪಿ, ಶಿವರಾಜ ಅಗಡಿ, ಶಿವರಾಜ ವಳಸಂಗದ, ನಿರಂಜನ ತಾಂಡೂರ, ಶಿವಯೋಗಿ ಮಾಮಲೇಪಟ್ಟಣಶೆಟ್ಟಿ, ಆನಂದ ಅಟವಾಳಗಿ, ಶಿವಯೋಗಿ ಮತ್ತಿಹಳ್ಳಿ, ಮುತ್ತಣ್ಣ ಯರೇಶಿಮೆ, ಶರಣಪ್ಪ ಮುಷ್ಠಿ, ವೀರಣ್ಣ ಹೆರೂರ, ಕರಬಸಪ್ಪ ಹಳದೂರ, ಮಲ್ಲಣ್ಣ ಸಾತೇನಹಳ್ಳಿ ಸೇರಿದಂತೆ ಬಿಜೆಪಿಯ ಎಲ್ಲ ಘಟಕಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

