ಬಿಜೆಪಿಗೆ ಈ ಬಾರಿ ತಕ್ಕ ಪಾಠ: ಶಾಸಕ ರುದ್ರಪ್ಪ ಲಮಾಣಿ
ಹಾವೇರಿ: ಅಧಿಕಾರ ನೀಡಿದ್ದೆ ತಪ್ಪು ಎನ್ನಿಸುವಷ್ಟರ ಮಟ್ಟಿಗೆ ಜನರಿಗೆ ಜಿಗುಪ್ಸೆ ತರಿಸಿರುವ ಬಿಜೆಪಿಗೆ ಈ ಬಾರಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ಹಾವೇರಿ ವಿಧಾನಸಭಾ ಕ್ಷೇತ್ರದ ಹೊಸಮೇಲ್ಮುರಿ, ಹಳೇಮೇಲ್ಮುರಿ, ಹಂದಿಗನೂರ, ಕೋಣನತಂಬಿಗೆ, ಕೆಸರಳ್ಳಿ, ಮಣ್ಣೂರ, ಶಿರಮಾಪೂರ, ಯಲಗಚ್ಚ, ಅಗಸನಮಟ್ಟಿ, ರಾಮಾಪೂರ, ಬಸನಕಟ್ಟಿ, ಮಾಚಾಪೂರ, ಬೂದಗಟ್ಟಿ, ಸೋಮನಕಟ್ಟಿ, ತಿಮ್ಮೇನಳ್ಳಿಗಳಲ್ಲಿ ಸಲೀಂ ಅಹ್ಮದ್ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಶಿವಕುಮಾರ ಉದಾಸಿ ಕಳೆದ 5 ವರ್ಷದಲ್ಲಿ ತಾವು ಮಾಡಿದ ಸಾಧನೆಗಳನ್ನು ಹೇಳಿ ಮತಯಾಚನೆ ಮಾಡಲಿ. ಇವರಿಗೆ ನರೇಂದ್ರ ಮೋದಿಯವರ ಮುಖವಾಡವೇಕೆ? ತಮ್ಮ ಸಾಧನೆಗಳನ್ನು ಹೇಳಿದರೆ ಠೇವಣಿ ಕಳೆದುಕೊಳ್ಳವ ಭಯ ಎಂದು ವ್ಯಂಗ್ಯವಾಡಿದರು. ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೆಗಣ್ಣಿ, ಎಸ್.ಎಫ್.ಎನ್. ಗಾಜಿಗೌಡ್ರ, ಈರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಶಿವಕುಮಾರ ತಾವರಗಿ, ರಾಜಶೇಖರ ಮಾಗಾವಿ, ಅಶೋಕ ತಳವಾರ, ಪರಮೇಶಪ್ಪ ಎಣ್ಣಿ, ಶ್ರೀನಿಧಿ ದೇಶಪಾಂಡೆ, ಎ.ಜಿ.ಪಾಟೀಲ, ನಿಂಗಪ್ಪ ಅಕ್ಕೂರ, ಮೂಕಣ್ಣ ದೇಸಳ್ಳಿ, ಎಂ.ಎಂ. ಮೈದೂರ, ಎಂ.ಎಂ. ಬೇವಿನಹಳ್ಳಿ, ಹೊಸಮನಿ ಸಿದ್ದಣ್ಣ, ಫಕ್ಕೀರಪ್ಪ ನೆಗಳೂರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

