ಡಾ. ಬನ್ನೂರ ಒಳ್ಳೆಯ ಮಾರ್ಗದರ್ಶಕ
ಹಾವೇರಿ: ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಗುರುಮಾರ್ಗದರ್ಶನ ಅತ್ಯವಶ್ಯಕವಾಗಿದ್ದು, ಒಬ್ಬ ಸಮರ್ಥ ಶಿಕ್ಷಣ ತಜ್ಞರಾಗಿ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ಕೊಟ್ಟವರು ಡಾ. ಬನ್ನೂರವರು ಎಂದು ಹಾವೇರಿ ತಾಲೂಕು ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಹೇಳಿದರು.
ಅವರು ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಹಮ್ಮಿಕೊಂಡಿದ್ದ ಪ್ರಾಚಾರ್ಯ ಡಾ. ಬಿ. ಸಿ. ಬನ್ನೂರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸುಂದರವಾದ ಭವಿಷ್ಯ ನಿರ್ಮಿಸಿಕೊಳ್ಳಲು, ಜೀವನದಲ್ಲಿ ಗಟ್ಟಿಯಾಗಿ ನಿಲ್ಲಲು ಗುರುವಿನ ದಾರಿಯಲ್ಲಿ ನಾವುಗಳೆಲ್ಲರೂ ಸಾಗಬೇಕಿದೆ ಎಂದರು. ಮಾಧುರಿ ದೇವಧರ ಮಾತನಾಡಿ, ಬನ್ನೂರವರು ಅತ್ಯುತ್ತಮ ಅಧ್ಯಾಪಕರಾಗಿ ಸವಿ ಮಾತುಗಳಿಂದಲೇ ಎಲ್ಲರ ಮನಸ್ಸುಗಳನ್ನು ಗೆದ್ದವರು. ಅಲ್ಲದೇ ಕಠಿಣ ಪರಿಶ್ರಮದಿಂದ ಮೇಲೆ ಬಂದವರು. ಇಂತಹ ಅಪರೂಪದ ವ್ಯಕ್ತಿ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಡಿ. ಶಿರೂರ ಮಾತನಾಡಿ, ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಪ್ರಾಚಾರ್ಯ ಡಾ. ಬನ್ನೂರವರು ಸತತ, ಸುದೀರ್ಘ 26 ವರ್ಷಗಳ ಕಾಲ ಕೆಎಲ್ಇ ಸಂಸ್ಥೆಯಲ್ಲಿ ಅವಿರತವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಎಲ್ಲರಿಗೂ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಅವರೊಬ್ಬ ನಿಷ್ಠಾವಂತ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂಬರುವ ಅವರ ನಿವೃತ್ತಿ ಜೀವನವು ಸಂತೋಷವಾಗಿರಲಿ ಎಂದು ಆಶಿಸಿದರು.
ಸರೋಜಿನಿ ಬನ್ನೂರ, ಡಾ. ಸಂಗಪ್ಪ ನಾಶಿ, ಡಾ. ಸಿ. ಮಲ್ಲಣ್ಣ, ಡಾ. ಎನ್. ಆರ್. ಬಿರಸಾಲ, ಪ್ರೊ. ಶ್ವೇತಾ ಮರಿಗೌಡರ, ಪ್ರೊ. ಎಸ್.ಎನ್. ತಿಪ್ಪನಗೌಡ್ರ, ಡಾ. ಸಿ.ಎಂ. ಮಠ, ಡಾ. ಈ.ಬಿ. ಸೇಡಂಕರ, ಪ್ರೊ. ಎನ್. ಎಂ. ಗುಂಡಣ್ಣನವರ, ಪ್ರೊ. ಎನ್.ವಿ. ಕಂಬಾಳಿಮಠ ತಮ್ಮ ಅನಿಸಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಡಾ. ಬಿ.ಸಿ. ಬನ್ನೂರವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಪ್ರೊ. ಡಿ.ಎ. ಕೊಲ್ಲಾಪುರೆ ಸ್ವಾಗತಿಸಿದರು. ಪ್ರೊ. ಗುರುಪಾದಯ್ಯ ವೀ. ಸಾಲಿಮಠ ನಿರ್ವಹಿಸಿದರು. ಪ್ರೊ. ಹಬೀಬ ಐ. ಕತೀಬ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

