ಹಾವೇರಿ

ರಂಗಭೂಮಿ ಕುರಿತು ಇಂದಿನಿಂದ ವಿಚಾರ ಸಂಕಿರಣ, ನಾಟಕ ಪ್ರದರ್ಶನ

Published On :

ಹಾನಗಲ್ಲ: ರಂಗಭೂಮಿ ಕುರಿತ ವಿಚಾರ ಸಂಕಿರಣ ಹಾಗೂ ನಾಟಕಗಳ ಪ್ರದರ್ಶನ ಫೆ.7 ಮತ್ತು 8ರಂದು ಹಾನಗಲ್ಲ ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ತಾಲೂಕಿನ ಶೇಷಗಿರಿಯ ಗಜಾನನ ಯುವಕ ಮಂಡಳ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ 5 ಗಂಟೆಗೆ ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಉದ್ಘಾಟಿಸುವರು.
 ಅತಿಥಿಗಳಾಗಿ ಧಾರವಾಡದ ಸಾಹಿತಿ ಮಹಾಂತೇಶ ನವಲಕಲ್ ಹಾಗೂ ಪತ್ರಕರ್ತ ಶಿವಕುಮಾರ ಕಣಸೋಗಿ ಪಾಲ್ಗೊಳ್ಳುವರು. ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎಂ. ಅಪ್ಪಾಜಿ ಅಧ್ಯಕ್ಷತೆ ವಹಿಸುವರು.
ಇದರ ಅಂಗವಾಗಿ ನಡೆಯುವ ವಿಚಾರ ಸಂಕಿರಣಗಳಲ್ಲಿ ರಂಗಭೂಮಿ ಹಾಗೂ ಇತ್ತೀಚಿನ ಒಲವುಗಳು, ಪ್ರಯೋಗಾತ್ಮಕ ಒಲವುಗಳು, ಸಾಹಿತ್ಯಾತ್ಮಕ ಒಲವುಗಳು, ಮಕ್ಕಳು ಮತ್ತು ಮಹಿಳಾ ರಂಗಭೂಮಿ ಕುರಿತು ರಂಗಕ್ಷೇತ್ರದ ಪರಿಣಿತ ಕಲಾವಿದರಾದ ಮಹಾದೇವ ಹಡಪದ, ಉಮೇಶ ಪಾಟೀಲ, ಅನಿಲ ರೇವೂರ, ಗೀತಾ ಕಿತ್ತೂರ, ಧನಂಜಯ ರಂಗಸಮುದ್ರ, ರೇಖಾ ಹೊಂಗಲ್ ವಿಷಯ ಮಂಡಿಸುವರು. ರಾತ್ರಿ 8 ಗಂಟೆಗೆ ಮಹಾಂತೇಶ ನವಲಕಲ್ ರಚಿಸಿದ ಮಾರಪ್ಪ ತೆಗ್ಗಿಹಳ್ಳಿ ನಿರ್ದೇಶನದ ಚಂದ್ರಗುಪ್ತ ಮೌರ್ಯ ನಾಟಕವನ್ನು ಧಾರವಾಡದ ಆಟ ಮಾಟ ರಂಗ ತಂಡ ಪ್ರದರ್ಶಿಸುವದು. ಫೆ. 8ರಂದು ಸಂಜೆ 7 ಗಂಟೆಗೆ ಹನುಮಂತ ಹಾಲಗೇರಿ ರಚಿಸಿದ ಯತೀಶ ಕೊಳ್ಳೇಗಾಲ ನಿರ್ದೇಶನದ 'ಊರು ಸುಟ್ಟರೂ ಹನುಮಪ್ಪ ಹೊರಗೆ' ಎಂಬ ನಾಟಕವನ್ನು ಆಟಮಾಟ ತಂಡ ಪ್ರದರ್ಶಿಸುವುದು. ಇದಾದ ನಂತರ ಡಾ. ಶ್ರೀಪಾದ ಭಟ್ ರಚಿಸಿ ನಿರ್ದೇಶಿಸಿದ ರಿಂಗಿನಾಟ ನಾಟಕವನ್ನು ಹೆಗ್ಗೋಡಿನ ಚರಕ ತಂಡ ಪ್ರದರ್ಶಿಸುವದು ಎಂದು ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ವಿಚಾರ ಸಂಕಿರಣದ ಸಂಚಾಲಕ ನಾಗರಾಜ ಧಾರೇಶ್ವರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.