ರಿಯಾಲಿಟಿ ಶೋಗಳಲ್ಲಿ ಎಲ್ಲರಿಗೆಅವಕಾಶ ಸಿಗದು: ಸಲೀಂ ಅಹ್ಮದ್
ಹಾನಗಲ್ಲ: ದೂರದರ್ಶನದ ರಿಯಾಲಿಟಿ ಶೋಗಳಂತ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಅವಕಾಶ ದೊರೆಯುತ್ತಿಲ್ಲ, ಹೀಗಾಗಿ ಇಂಥ ಸಾಂಸ್ಕೃತಿಕ ಸಮಾರಂಭದ ವೇದಿಕೆಗಳು ಸಣ್ಣ ಮಕ್ಕಳ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗುತ್ತವೆ ಎಂದು ನವದೆಹಲಿಯ ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಹೇಳಿದರು.
ನಗರದ ಛತ್ರಪತಿ ಶಿವಾಜಿ ಯುವಕ ಬಳಗ ಸಲೀಂ ಅಹ್ಮದ್ ಅವರ ಹುಟ್ಟುಹಬ್ಬದ ನಿಮಿತ್ತ ಪಟ್ಟಣದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿರುವ ನಮ್ಮ ಸಂಪ್ರದಾಯ, ಸಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನೆಹರು ಯುವಕೇಂದ್ರ ಎಲ್ಲ ಸಹಕಾರ ನೀಡುತ್ತದೆ ಎಂದರು. ಯುವಕರು ವಿದೇಶೀ ವ್ಯಾಮೋಹಕ್ಕೆ ಒಳಗಾಗಿ ಪಾಶ್ಚಾತ್ಯ ನೃತ್ಯ, ಸಂಗೀತ, ಕಲೆಗಳಿಗೆ ಮಾರು ಹೋಗದೇ ನಮ್ಮ ದೇಶೀಯ ಕಲೆಗಳನ್ನು ಕಲಿತು, ವಿದೇಶಗಳಲ್ಲೂ ಪ್ರದರ್ಶಿಸಿ ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಆಶಯ ವ್ಕಕ್ತಪಡಿಸಿದರು.
ಶಾಸಕ ಮನೋಹರ ತಹಶೀಲ್ದಾರ ಮಾತನಾಡಿ, ಸಂಗೀತ, ನೃತ್ಯ ಕಲೆಗಳು ಎಲ್ಲರಿಗೂ ಬರುವಂತದ್ದಲ್ಲ, ಅದು ದೈವದತ್ತವಾಗಿ ಬರುವಂತದ್ದು, ಅಂತಹ ಕಲಾಪ್ರತಿಭೆಗಳನ್ನು ಹೊರಹೊಮ್ಮಿಸಲು ಅವಕಾಶಗಳನ್ನು ನೀಡಿದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ, ನಾಟಕಗಳ ಪ್ರದರ್ಶನದಿಂದ ಸುಸಂಸ್ಕೃತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಕೆಪಿಸಿಸಿ ಸದಸ್ಯರಾದ ರಾಜಶೇಖರ ಸಾಲಿಮಠ, ಸತೀಶ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್.ಬಡಿಗೇರ, ರವಿ ಬೆಲ್ಲದ, ರಾಮಣ್ಣ ಮಾಸನಕಟ್ಟಿ, ಯಾಸಿರಖಾನ್ ಪಠಾಣ, ಹಾಶಂಪೀರ್ ಇನಾಮದಾರ, ವಿಷ್ಣುಕಾಂತ ಜಾಧವ, ರಾಮಣ್ಣ ಬಡಿಗೇರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಛತ್ರಪತಿ ಶಿವಾಜಿ ಯುವಕ ಬಳಗದ ಅಧ್ಯಕ್ಷ ರಾಜು ಗೌಳಿ ಸ್ವಾಗತಿಸಿದರು. ಟಿಪ್ಪುಸುಲ್ತಾನ್ ನಾಯಕವಾಡಿ ಕಾರ್ಯಕ್ರಮ ನಿರೂಪಿಸಿದರು. ಪರಶುರಾಮ ಖಂಡೂನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

