ಹಾವೇರಿ

ಬಿಜೆಪಿ ಯುವ ಮೋರ್ಚಾದಿಂದ ಟೀ ಸ್ಟಾಲ್ ಉದ್ಘಾಟನೆ

Published On :

ಹಾವೇರಿ: ಬಿಜೆಪಿ ಯುವ ಮೋರ್ಚಾದಿಂದ ಯಲವಿಗಿ ಶಕ್ತಿಕೇಂದ್ರದ ಸಿದ್ಧಾಪುರ ಗ್ರಾಮದಲ್ಲಿ ನಮೋ ಟೀ ಸ್ಟಾಲ್ನ್ನು ತೆರೆಯುವ ಮೂಲಕ ಕಾಂಗ್ರೆಸ್ ನಾಯಕ ಕೇಂದ್ರದ ಮಾಜಿ ಸಚಿವ ಮಣಿಶಂಕರ ಅಯ್ಯರ್ ಅವರು ನರೇಂದ್ರ ಮೋದಿ ಅವರ ಮೇಲೆ ಮಾಡಿರುವ ಟೀಕೆ ಖಂಡಿಸಿ ಪ್ರತಿಭಟಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಡಾ. ಪರಮೇಶ ಭಜಂತ್ರಿ ವಹಿಸಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ, ಗ್ರಾಮದ ಬಿಜೆಪಿ ಮುಖಂಡರಾದ ವಿಶ್ವನಾಥ ಕೊಂಚಿಗೆರಿ, ಮಂಜುನಾಥ ವಾಲಿ, ಗ್ರಾಪಂ ಸದಸ್ಯರಾದ ಪುಟ್ಟಪ್ಪ ಮಡಿವಾಳರ, ಸಿದ್ಲಿಂಗಣ್ಣ ಮುಂಗಣ್ಣನವರ, ಯುವ ಮುಖಂಡರಾದ ಯಲ್ಲಪ್ಪ ಮಡಿವಾಳರ, ಮಲ್ಲಪ್ಪ ಕೊಣನವರ, ಫಕ್ಕೀರಯ್ಯ ಮಠದ ಇದ್ದರು. ಗ್ರಾಮದ ಜನ ನಮೋ ಟೀ ಸ್ಟಾಲ್ನಲ್ಲಿ ಚಹಾ ಕುಡಿಯುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಅಪಘಾತ: ಓರ್ವ ಸಾವು
ಹಾನಗಲ್ಲ: ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಹಾಯ್ದು ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಪಟ್ಟಣದ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದ ಬಳಿ ನಡೆದಿದೆ. ಬೆಳಗ್ಗೆ ನಡೆದ ಈ ಘಟನೆಯಲ್ಲಿ ತಾಲೂಕಿನ ಹಿರೇಕಾಂಶಿ ಗ್ರಾಮದ ಪುಟ್ಟನಗೌಡ ಬಸನಗೌಡ ಉದೇಗೌಡ್ರ (54) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಪುಟ್ಟನಗೌಡ ಪಾಟೀಲ ಅವರ ನೇತ್ರಗಳನ್ನು ಅವರ ಪುತ್ರ ಬಸನಗೌಡ ಹಾಗೂ ಪ್ರಕಾಶಗೌಡ ಹುಬ್ಬಳ್ಳಿಯ ಡಾ. ಎಂ.ಎಂ. ಜೋಷಿ ಆಸ್ಪತ್ರೆಯ ನೇತ್ರಾಲಯಕ್ಕೆ ದಾನ ನೀಡಿದ್ದಾರೆ.
ಯಳ್ಳೂರ: ಸೇವಾ ಸಹಕಾರಿ ಬ್ಯಾಂಕಿನ ಚುನಾವಣೆ
ಹಾನಗಲ್ಲ: ತಾಲೂಕಿನ ಯಳ್ಳೂರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಮಹಿಳೆಯರು ಸೇರಿದಂತೆ ಏಳು ಸದಸ್ಯರು ಆಯ್ಕೆಯಾಗಿದ್ದಾರೆ. ಫೆ. 9ರಂದು ನಡೆದ ಈ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದ ತಂಡದ ಶ್ರೀಕಾಂತಗೌಡ್ರು ಪಾಟೀಲ, ಮಹಾಬಳೇಶ್ವರ ದೇವಿಹೊಸೂರ, ನಿಂಗಪ್ಪ ಗೋಯಿಕಾಯಿ, ಅದಿಲಖಾನ ಪಠಾಣ, ಲಕ್ಷ್ಮಣ ಗೋಡಿ, ಸುಭದ್ರವ್ವ ಬಡಿಗೇರ, ಗದಿಗೆವ್ವ ರಾಮಯ್ಯನವರ ಆಯ್ಕೆಯಾಗಿದ್ದಾರೆ. ಒಟ್ಟು 10 ಸ್ಥಾನಗಳಲ್ಲಿ ಓರ್ವ ಪಕ್ಷೇತರ ಆಯ್ಕೆಯಾಗಿದ್ದು, ಇನ್ನೆರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.