ಹಾವೇರಿ

ಹೊಸಹಳ್ಳಿ: ನಾಳೆಯಿಂದ ಎನ್ನೆಸ್ಸೆಸ್ ಶಿಬಿರ

Published On :

ಹಿರೇಕೆರೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2013-14ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಫೆ. 12ರಿಂದ 18ರ ವರೆಗೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜರುಗಲಿದೆ. ಫೆ. 12ರಂದು ಮಧ್ಯಾಹ್ನ  3.30ಕ್ಕೆ ಎನ್ಎಸ್ಎಸ್ ಸ್ವಯಂ ಸೇವಕರಿಂದ ಗ್ರಾಮದಲ್ಲಿ ಪಥಸಂಚಲನ ಜರುಗಲಿದೆ. ಸಂಜೆ 6.30ಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಕುಮಾರ ಉಪ್ಪಾರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಯು.ಬಿ. ಬಣಕಾರ ಶಿಬಿರ ಉದ್ಘಾಟಿಸುವರು.  ಜಿಪಂ ಸದಸ್ಯ ಬಸವರಾಜ ಬೇವಿನಹಳ್ಳಿ, ತಾಪಂ ಸದಸ್ಯೆ ನಿರ್ಮಲಾ ಗುಬ್ಬಿ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹರಿಹರ, ಸದಸ್ಯರಾದ ಶಂಕರಗೌಡ ವಡ್ಡಿನಕಟ್ಟಿ, ರೇಣುಕಾ ಚಕ್ರಸಾಲಿ, ಕುಸುಮಾ ರಟ್ಟಿಹಳ್ಳಿ,  ಪಪಂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಶಿಬಿರಾಧ್ಯಕ್ಷ ಜೆ.ಕೆ. ವೆಂಕಟೇಶ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಸಿ. ಆನಂದ   ಮೊದಲಾದವರು ಉಪಸ್ಥಿತರಿರುವರು. ಫೆ. 13ರಿಂದ ಫೆ.17ರ ವರೆಗೆ ಸಂಜೆ 6.30ಕ್ಕೆ ವಿವಿಧ ವಿಷಯಗಳ ಕುರಿತು ಉಪನ್ಯಾಸ. ಫೆ. 18ರಂದು ಬೆಳಗ್ಗೆ 10.30ಕ್ಕೆ ಈ.ಎಸ್ ಬಣಕಾರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು,   ಪರಮೇಶಪ್ಪ ಗವಿಯಪ್ಪನವರ,  ಬಿ.ಎನ್. ಬಣಕಾರ, ಎಸ್.ಕೆ. ಕರಿಯಣ್ಣನವರ ಮತ್ತಿತರರು ಉಪಸ್ಥಿತರಿರುವರು ಎಂದು ಎಸ್.ಎಚ್. ದೊಡ್ಡಗೌಡ್ರ ತಿಳಿಸಿದ್ದಾರೆ.


ಇಂದು ಬಿಜೆಪಿ ಸಭೆ
ಹಾನಗಲ್ಲ: ಲೋಕಸಭಾ ಚುನಾವಣೆ ಪೂರ್ವಸಿದ್ಧತೆಗಾಗಿ ಬಿಜೆಪಿ ಸಭೆಯನ್ನು ಫೆ. 11ರಂದು ನಗರದ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ. ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಸವರಾಜ ಬೊಮ್ಮಾಯಿ, ಸೋಮಣ್ಣ ಬೇವಿನಮರದ, ಪಕ್ಷದ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಮತ್ತಿತರರು ಆಗಮಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.