ಹಾವೇರಿ

ಹುಣ್ಣಿಮೆ ಮಹೋತ್ಸವ ನಾಡಹಬ್ಬ

Published On :

ಸಂತ ಶಿಸುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ತರಳಬಾಳು ಹುಣ್ಣಿಮೆ ಮಹೋತ್ಸವ ಜನರ ನಡುವೆ ಸೇತುವೆ ಕಟ್ಟುವ ಕೆಲಸ ಮಾಡುತ್ತಿದೆ. ವೈಚಾರಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಮೂಲಕ ಹುಣ್ಣಿಮೆ ನಾಡಹಬ್ಬವಾಗಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮತ, ಪಂಥ, ಧರ್ಮ, ವರ್ಗಭೇದಗಳನ್ನು ಮೀರಿದ ಕಾರ್ಯಕ್ರಮ ಇದಾಗಿದೆ. ಇದಕ್ಕೆ ಸಿರಿಗೆರೆ ಶ್ರೀಗಳೇ ಕಾರಣ. ಶಿಸ್ತು, ಸಮಯಪ್ರಜ್ಞೆ, ಸರಳತೆ, ದಿಟ್ಟ ಮತ್ತು ನೇರ ನುಡಿಗಳ ಮೂಲಕ ಸ್ವಾಮೀಜಿಗಳು ವಿಶ್ವ ಖ್ಯಾತಿ ಗಳಿಸಿದ್ದಾರೆ. ಅವರ ನ್ಯಾಯದಾನ ಮಾದರಿಯಾಗಿದೆ. ಸಿರಿಗೆರೆಯ ನ್ಯಾಯಪೀಠ ಜನಕ್ಕೆ ಹತ್ತಿರವಾಗಿದೆ. ವಾಸ್ತವ ಸ್ಥಿತಿ ಅರಿತು ಸಾಮಾಜಿಕ ನ್ಯಾಯದ ಕಲ್ಪನೆ ಹೊಂದಿದೆ. ಕೋರ್ಟ್ಗಳಲ್ಲಿ ನ್ಯಾಯದಾನಕ್ಕೆ ಒಂದು ಚೌಕಟ್ಟಿದೆ. ಆದರೆ, ಸಿರಿಗೆರೆ ಶ್ರೀಗಳಿಂದ ನ್ಯಾಯದಾನದಲ್ಲಿ ಕಾನೂನು ಚೌಕಟ್ಟಿಲ್ಲ. ಆದರೆ, ಮಾನವೀಯತೆ, ಧರ್ಮ, ನೈತಿಕತೆ ಆಧಾರದಲ್ಲಿ ಕಾನೂನು ಅಂಶಗಳನ್ನು ಅಳವಡಿಸಿಕೊಡು ನೀಡಲಾಗುತ್ತಿದೆ ಎಂದು ಹೇಳಿದರು.ದೇಶದಲ್ಲಿ ಉಪದೇಶ, ಭಾಷಣ ಮತ್ತು ಘೋಷಣೆಗಳಿಗೆ ಕೊರತೆಯಿಲ್ಲ. ಆದರೆ, ಅದರ ಅನುಷ್ಠಾನ ಆಗುತ್ತಿಲ್ಲ. ವಿಚಾರ ತಿಳಿಸುವ ಸಾಕಷ್ಟು ವಚನ, ಗ್ರಂಥ, ಪುಸ್ತಕಗಳಿವೆ. ಆದರೂ ಜನರ ಹೃದಯ ಪರಿವರ್ತನೆ ಆಗುತ್ತಿಲ್ಲ. ಹೇಳುವವನಿಗೆ ಸ್ವತಃ ತನ್ನ ಮಾತಿನಲ್ಲಿ ವಿಶ್ವಾಸವಿರಬೇಕು. ಯಾವ ಮಾತನ್ನು ಹೇಳುತ್ತಾನೆಯೋ ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಡುವ ಮಾತಿನಲ್ಲಿ ಸತ್ಯ ಮತ್ತು ಸತ್ವ ಇರಬೇಕು. ಇದನ್ನು ಅಳವಡಿಸಿಕೊಂಡರೆ ಮಾತ್ರ ಆತ ಇತರರಿಗೆ ಹೇಳುವ ನೈತಿಕತೆ ಬರುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.