ಹಾವೇರಿ

ಮಹಾಲಕ್ಷ್ಮಿ ಸ್ಮಾರಕ ಭವನ ನಿರ್ಮಾಣಕ್ಕೆ ಸಹಕಾರ: ಉದಾಸಿ

Published On :

ಹಾನಗಲ್ಲ: ಹಾವೇರಿ ಜಿಲ್ಲೆ ಸಂಗೀತ-ಸಾಹಿತ್ಯದ ಬೀಡು. ಈ ನೆಲದಲ್ಲಿ ಸಂಗೀತವನ್ನು ಬೆಳಕಿಗೆ ತಂದ ಅಂಧರ ಬಾಳಿಗೆ ಬೆಳಕಾದ ಪುಟ್ಟರಾಜ ಗವಾಯಿಗಳಂತಹ ವಿದ್ವಾಂಸರ ಕನಕದಾಸರು, ಸರ್ವಜ್ಞರ ನಾಡಿನಲ್ಲಿ ಮಹಾಲಕ್ಷ್ಮೀ ಬಡಿಗೇರ ಹುಟ್ಟಿದ್ದು, ಅವರು ಬದುಕಿದ್ದರೆ ದೊಡ್ಡ ಕಲಾವಿದೆಯಾಗುತ್ತಿದ್ದರು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಅಭಿಪ್ರಾಯಪಟ್ಟರು.
ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಗಾನಕೋಗಿಲೆ ಮಹಾಲಕ್ಷ್ಮೀ ಬಡಿಗೇರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿಯ ಪ್ರತಿಭಾವಂತರನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮಹಾಲಕ್ಷ್ಮೀಯವರ ಸ್ಮಾರಕ ಭವನವನ್ನು ನಿರ್ಮಿಸುವುದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಕಿರು ವಯಸ್ಸಿನಲ್ಲಿ ನಮ್ಮನ್ನಗಲಿದ ಪ್ರತಿಭಾವಂತರ ನೆನಪಿನಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುವುದು ಸ್ವಾಗತಾರ್ಹ ಎಂದು ಹೇಳಿದರು.
ರಾಜ್ಯ ವಿಶ್ವಕರ್ಮ ಮಹಾಮಂಡಳದ ಅಧ್ಯಕ್ಷ ಎಲ್. ನಾಗರಾಜಾಚಾರ್ ಮಾತನಾಡಿ, ವಿಶ್ವಕರ್ಮ ಸಮುದಾಯ ರಾಜ್ಯದಲ್ಲಿ 35 ಲಕ್ಷದಷ್ಟಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಗೀತ ಕಲಾವಿದರು, ಸಾಮಾಜಿಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಗೀತೋತ್ಸವ ಸಮಿತಿ ಅಧ್ಯಕ್ಷ ಗೊಪಾಲಾಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಸಿ.ಎಸ್. ಬಡಿಗೇರ, ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ನೆಲಮಂಗಲ ವಿಶ್ವಕರ್ಮ ಉಪಾಧ್ಯಕ್ಷ ಬಿ.ಮಂಜುನಾಥ, ತಾಲೂಕು ತಹಸೀಲ್ದಾರ್ ನಾಗೇಂದ್ರ ಹೊನ್ನಳ್ಳಿ, ಜಿ.ಪಂ. ಸದಸ್ಯೆ ಕಸ್ತೂರೆವ್ವ ವಡ್ಡರ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಬಂಡಿವಡ್ಡರ, ಎಂ.ಎಚ್. ಕುರುಬರ, ಗುಡ್ಡನಗೌಡ ಪಾಟೀಲ, ಶಂಬಣ್ಣ ವಡ್ಡರ, ಗಂಗಪ್ಪ ಬಡಿಗೇರ, ಈರಪ್ಪ ಎನ್.ಕೆ., ಕೋಟೆಪ್ಪ ವಾಸನದ, ಹಾಶಂಪೀರ ಇನಾಂದಾರ, ನೀಲಪ್ಪ ಬಡಿಗೇರ, ಎನ್.ಎಸ್. ಪಡೆಪ್ಪನವರ, ವಾಸಣ್ಣ ಬಡಿಗೇರ, ಮಹೇಂದ್ರ ಬಡಿಗೇರ, ನಿಸೀಮಪ್ಪ ಕಮ್ಮಾರ, ವಿ.ಜಿ. ಪುರದ, ಯೂಸೂಫ್ ಮುಂಡರಗಿ, ರಾಜೇಶ್ವರಿ ಸಾರಂಗಮಠ ಅತಿಥಿಗಳಾಗಿದ್ದರು.
ಪ್ರವೀಣ ಬಡಿಗೇರ ಪ್ರಾರ್ಥಿಸಿದರು. ಗೋಪಾಲಾಚಾರ್ ಬಡಿಗೇರ ಸ್ವಾಗತಿಸಿದರು. ಎಚ್.ಪಿ. ವೆಂಕಟೇಶ  ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.