ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 25
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಹಾಗೂ ಗ್ರಾಕೂಸ್ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣಿಬೆನ್ನೂರು ಹಾಗೂ ಹಾನಗಲ್ಲ ತಾಲೂಕಿನ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಎಸ್.ಡಿ. ಬಳಿಗಾರ ಮಾತನಾಡಿ, ಕೂಲಿಕಾರರು ವಲಸೆ ಹೋಗುವುದನ್ನು ತಡೆಯಬೇಕು. ಎಲ್ಲ ಗ್ರಾಪಂಗಳಲ್ಲಿ ಈಗಾಗಲೇ 100 ದಿನ ಕೆಲಸ ಮಾಡಲಾಗಿದ್ದು, ಹೆಚ್ಚುವರಿಯಾಗಿ ಮತ್ತೆ 100 ದಿನದ ಕೆಲಸ ನೀಡಬೇಕು. ಕೆಲಸ ಮಾಡಿದ ಕೂಲಿಯನ್ನು ವಾರದೊಳಗೆ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
ಸಲಕರಣೆಗಳನ್ನು ಕೂಲಿ ಕಾರ್ಮಿಕರೇ ತರುತ್ತಿದ್ದು, ಖಾತ್ರಿ ನಿಯಮದಲ್ಲಿ ರು. 3 ಸಲಕರಣೆ ವೆಚ್ಚ ಎಂದು ನೀಡಲು ಅವಕಾಶವಿದ್ದು, ಅದನ್ನು ನೀಡಬೇಕು.
ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಕಡಿಮೆ ಪ್ರಮಾಣ ನಿಗದಿ ಮಾಡಲಾಗಿದ್ದರೂ ಅಧಿಕಾರಿಗಳು ಸರಿಯಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ಈ ಕುರಿತು ಎಂಜಿನಿಯರ್ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ಸಂಚಾಲಕ ಶಂಕ್ರಯ್ಯ ಮಾತನಾಡಿ, ಒಂದು ಕೆಲಸ ಮುಗಿದ ತಕ್ಷಣ ಮತ್ತೊಂದು ಕೆಲಸವನ್ನು ಕೂಡಲೇ ಕೊಡುತ್ತಿಲ್ಲ. ರಾಣಿಬೆನ್ನೂರು ತಾಲೂಕಿನ ಹನುಮಾಪುರ ಹಾಗೂ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಪಂಗೆ ಸಮರ್ಥ ಪಿಡಿಒ ನೇಮಿಸಬೇಕು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಜಾಗೃತ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ನಮ್ಮ ಪ್ರತಿನಿಧಿಗಳಿಗೆ ಆಮಂತ್ರಣ ನೀಡಬೇಕು. ಕಾರ್ಮಿಕ ಗುಂಪುಗಳ ಕೆಲಸದ ಉಸ್ತುವಾರಿ ನೋಡಿಕೊಳ್ಳುವವರಿಗೂ ನಿಯಮಾನುಸಾರ ಕೂಲಿ ಪಾವತಿಸಬೇಕು.
ಲೋಕಸಭಾ ಚುನಾವಣೆ ನೆಪವೊಡ್ಡಿ ಕೂಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸಲಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಪಂ ಕೂಲಿಕಾರರ ಕೆಲಸಕ್ಕೂ ಹಾಗೂ ಚುನಾವಣೆಗೂ ಸಂಬಂಧ ಕಲ್ಪಿಸಬಾರದು ಎಂದು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಚಾಲಕ ಮರಿಯಪ್ಪ, ಗ್ರಾಕೂಸ್ನ ರಾಜಪ್ಪ ಆಲದಳ್ಳಿ, ಎನ್.ಎಚ್. ನಾಶಿಪುಡಿ, ಇಂದಿರಮ್ಮ ಹೊಸೂರ, ಚೈತ್ರಾ ಇತರರು ಇದ್ದರು.
ಕೂಲಿಕಾರರು ವಲಸೆ ಹೋಗುವುದನ್ನು ತಡೆಯಬೇಕು. ಎಲ್ಲ ಗ್ರಾಪಂಗಳಲ್ಲಿ ಈಗಾಗಲೇ 100 ದಿನ ಕೆಲಸ ಮಾಡಲಾಗಿದ್ದು, ಹೆಚ್ಚುವರಿಯಾಗಿ 100 ದಿನದ ಕೆಲಸ ನೀಡಬೇಕು. ಕೆಲಸ ಮಾಡಿದ ಕೂಲಿಯನ್ನು ವಾರದೊಳಗೆ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಸಲಕರಣೆಗಳನ್ನು ಕೂಲಿ ಕಾರ್ಮಿಕರೇ ತರುತ್ತಿದ್ದು, ಖಾತ್ರಿ ನಿಯಮದಲ್ಲಿ ರು. 3 ಸಲಕರಣೆ ವೆಚ್ಚ ಎಂದು ನೀಡಲು ಅವಕಾಶವಿದ್ದು, ಅದನ್ನು ನೀಡಬೇಕು. ಮಹಿಳೆಯರು, ಅಂಗವಿಕಲರಿಗೆ ಕಡಿಮೆ ಪ್ರಮಾಣ ನಿಗದಿ ಮಾಡಲಾಗಿದ್ದರೂ ಅಧಿಕಾರಿಗಳು ಸರಿಯಾಗಿ ಪರಿಗಣಿಸುತ್ತಿಲ್ಲ. ಈ ಕುರಿತು ಎಂಜಿನಿಯರ್ಗಳಿಗೆ ನಿರ್ದೇಶನ ನೀಡಬೇಕು.
- ಎಸ್.ಡಿ. ಬಳಿಗಾರ, ಸಂಘಟನೆ ಮುಖಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

