ಹಾವೇರಿ

ದೇಶದ ಭವಿಷ್ಯ ಉಜ್ವಲಕ್ಕೆ ಮೋದಿ ಬೆಂಬಲಿಸಿ: ಬೊಮ್ಮಾಯಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 27
ನಮ್ಮ ದೇಶದ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ನಾವೇಲ್ಲರೂ ಸೇರಿ ಮೋದಿ ಅವರನ್ನು ಪ್ರಧಾನಿ ಮಾಡಲು ಪ್ರತಿಯೊಂದು ಗ್ರಾಮಗಳಿಂದ ಜನರು ಸಭೆಯಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಫೆ. 28ರಂದು ಹುಬ್ಬಳ್ಳಿ ನಗರದಲ್ಲಿ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರನ್ನು ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳು ಕೂಡಾ ಗುರುತಿಸಿವೆ. ಕೆಲವರಲ್ಲಿ ನನ್ನ ಮೇಲೆ ವಿರೋಧವಿದ್ದರು ಚಿಂತೆಯಿಲ್ಲ. ಅದನ್ನೆಲ್ಲ ಮರೆತು ದೇಶದ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಅವರನ್ನು ನಾವು ನೀವೆಲ್ಲಾ ಒಂದಾಗಿ ಬೆಂಬಲಿಸೋಣ. ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ಯಾವುದೇ ಅಡೆತಡೆಯ ಶಕ್ತಿಗಳು ಮೋದಿ ಅವರನ್ನು ನಿಲ್ಲಿಸಲಿಕ್ಕೆ ಸಾಧ್ಯವಿಲ್ಲ ಎಂದರು.
ದೇಶವನ್ನು ಮುಂಬರುವ ಅನಾಹುತಗಳಿಂದ ಪಾರು ಮಾಡಿ ಸುರಕ್ಷಿತವಾಗಿರಿಸಲು ನಮಗೆಲ್ಲ ಸದಾವಕಾಶ ಒದಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಿ ದೇಶದ ಭವಿಷ್ಯವನ್ನು ಸಬಲ ರಾಷ್ಟ್ರವನ್ನಾಗಿ ಮಾಡೋಣ. ಮೋದಿಯವರಿಗೆ ನಮ್ಮ ಕೈಲಾದಷ್ಟು ಅಳಿಲು ಸೇವೆಯನ್ನು ಅವರ ಶಕ್ತಿಯೊಂದಿಗೆ ಸೇರಿಸಿ ನಾವು ನಿವೇಲ್ಲರೂ ಸೇರಿ ಒಟ್ಟಿನಿಂದ ಭಾರತ ಗೆಲ್ಲಿಸಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ ಎಂದರು. ಕಾರ್ಯಕ್ರಮಕ್ಕೆ ಬರುವಂತಹ ಎಲ್ಲ ಮತದಾರ ಬಾಂಧವರು ಹಾಗೂ ಮಹಿಳೆಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಪಕ್ಷದ ಕಾರ್ಯಕರ್ತರು ಮಾಡಬೇಕೆಂದರು.
ಸೋಮಣ್ಣ ಬೇವಿನಮರದ ಮಾತನಾಡಿ, 60 ವರ್ಷಗಳ ಕಾಂಗ್ರೆಸ್ ಭ್ರಷ್ಟ ಸರ್ಕಾರದ ಆಡಳಿತವನ್ನು ಕೊನೆಗಾಣಿಸಿರಿ. ಮೋದಿಯವರಿಗೆ 60 ತಿಂಗಳು ಆಡಳಿತ ನೀಡಿ ದೇಶದ ಪ್ರಗತಿ ನೋಡಿ. ನಾವೆಲ್ಲ ನಮ್ಮ ದೇಶ ಬಲಶಾಲಿಯಾಗಿಸಲು ಮೋದಿಯವರನ್ನು ಬೆಂಬಲಿಸೋಣ. ನಾವೇಲ್ಲರೂ ಒಂದಾಗಿ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅಡೆತಡೆಗಳಿಲ್ಲದಂತೆ ನೆರವೇರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ ಉಪಾಧ್ಯಕ್ಷೆ ಶೋಭಾ ನಿಸ್ಸಿಮಗೌಡ್ರ, ಸದಸ್ಯರಾದ ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣವರ, ಸಿ.ಎಸ್. ಪಾಟೀಲ, ಸರೋಜಮ್ಮ ಆಡಿನ, ತಾಪಂ ಅಧ್ಯಕ್ಷ ಸುಜಾತಾ ಕಲ್ಕಟ್ಟಿ, ಉಪಾಧ್ಯಕ್ಷ ನಿಂಗಣ್ಣ ಹರಿಜನ, ಸದಸ್ಯರಾದ ತಿಪ್ಪಣ್ಣ ಸಾತಣ್ಣವರ, ಉಷಾ ಬಿಳೆಕುದರಿ, ಪರೀದಾಭಾನು ಶೇಖಸನದಿ, ಲಕ್ಷ್ಮವ್ವ ತೋಟದ, ಉಮಾ ಡವಗಿ, ಎಪಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ. ಪುರಸಭೆ ಸದಸ್ಯರಾದ ಸುಭಾಸ ಚವ್ಹಾಣ, ಭರಮಜ್ಜ ನವಲಗುಂದ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.