ಹಾವೇರಿ

ಧಾರವಾಡದಲ್ಲಿ ಕೆಎಟಿ ಸ್ಥಾಪಿಸಿ: ತಹಸೀಲ್ದಾರ್‌ಗೆ ಮನವಿ

Published On :

ಶಿಗ್ಗಾಂವಿ: ಧಾರವಾಡದಲ್ಲಿ ಕಾಯಂ ಆಡಳಿತಾತ್ಮಕ ನ್ಯಾಯಮಂಡಳಿ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರು, ನ್ಯಾಯವಾದಿಗಳು ಸಭೆ ಸೇರಿ ಕೋರ್ಟ್ ಕಲಾಪದಿಂದ ದೂರ ಉಳಿದು ತಹಸೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೇದಾರ್ ರವಿ ಕೊರವರ ಮಖಾಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಧಾರವಾಡದಲ್ಲಿ ಕಾಯಂ ಆಡಳಿತಾತ್ಮಕ ನ್ಯಾಯ ಮಂಡಳಿ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಧಾರವಾಡ ನ್ಯಾಯವಾದಿಗಳು ನಿರಂತರ ಹೋರಾಟ ನಡೆಸಿದೆ. ಬಹುದಿನಗಳ ಬೇಡಿಕೆಯಾದ ಆಡಳಿತಾತ್ಮಕ ನ್ಯಾಯಾಧೀಕರಣ ಸ್ಥಾಪನೆ ಮಾಡುವುದು ವಿಳಂಬವಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಶೀಘ್ರ ಸ್ಥಾಪನೆ ಮಾಡುವ ಕುರಿತು ಹಾಗೂ ಧಾರವಾಡ ನ್ಯಾಯವಾದಿಗಳು ಮಾಡುತ್ತಿರುವ ಹೋರಾಟಕ್ಕೆ ನಾವು ಬೆಂಬಲ ಸೂಚಿಸಿ ಇಂದಿನ ದಿನ ಕೋರ್ಟ್ ಕಲಾಪದಿಂದ ಸರ್ವಾನುಮತದಿಂದ ದೂರ ಉಳಿಯುವ ನಿರ್ಣಯ ಮಾಡಲಾಯಿತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ, ನ್ಯಾಯವಾದಿಗಳಾದ ಸಿ.ಬಿ. ಪಾಟೀಲ, ಎ.ಎ. ಗಂಜೆನವರ, ಎಂ.ಎಂ. ಕಾರಡಗಿ, ಎಸ್.ಎಂ. ಕಮ್ಮಾರ, ಬಿ.ಜಿ. ಕೂಲಿ, ಬಿ.ಎನ್. ಕೋನನವರ, ಪಿ.ಐ.ಬಡಿಗೇರ, ಜಿ.ಎನ್. ಯಲಿಗಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.