ವಿಕಲಾಂಗರೂ ಚೆನ್ನಾಗಿ ಬಾಳಲು ಸಹಕರಿಸಿ
ರಾಣಿಬೆನ್ನೂರು: ವಿಕಲಚೇತನರು ಸಮಾಜದ ಇತರರಂತೆ ಬದುಕಿ ಬಾಳಲು ಮಾನವೀಯ ಮೌಲ್ಯವುಳ್ಳವರ ಸಹಕಾರ ಅಗತ್ಯವೆಂದು ಮಹಾತ್ಮ ಗಾಂಧಿ ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷರಾದ ಬಸವರಾಜ ಎಂ. ಬಸವರಡ್ಡಿ ಹೇಳಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾತ್ಮ ಗಾಂಧಿ ವಿಕಲಚೇತನರ ಸಂಘ ತಾಲೂಕು ಘಟಕ ಆಶ್ರಯದಲ್ಲಿ ಹೊಸನಗರದ ಸಿದ್ಧಾರೂಢ ಕಲ್ಯಾಣ ಮಂಟಪದಲ್ಲಿ ಸಂಘದ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿಕಲಚೇತನರು ಹುಟ್ಟಿನಿಂದ ಸಾಯುವವರೆಗೊ ಇತರರನ್ನೆ ಅವಲಂಬಿಸಿದವರಾಗಿದ್ದು, ಅಂಗವಿಕಲರು ಸ್ವತಂತ್ರವಾಗಿ ಬಾಳಿ ಬದುಕಲು ಸರ್ವರ ಸಹಕಾರ ಅಗತ್ಯವಾಗಿದೆ. ವಿಕಲಚೇತನರು ಎಲ್ಲರಂತೆ ಬಾಳಿ ಬದುಕಲು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಸಾಧಕರೆನ್ನಿಸಿಕೊಳ್ಳಲು, ಮಾನವೀಯ ಮೌಲ್ಯವುಳ್ಳ ಮಾನವರ ಸಹಕಾರ ಅಗತ್ಯವೆಂದು ಅವರು ಹೇಳಿದರು.
ರಾಷ್ಟಪತಿ ಪ್ರಶಸ್ತಿ ಪುರಸ್ಕೃತರಾದ ಐ.ಎಂ. ಕಚವಿ ಮಾತನಾಡಿ, ಅಂಗವಿಕಲನಾದ ನಾನು ವಿವಿಧ ಸಾಧನೆಗಳನ್ನು ಸಾಧಿಸಿ ರಾಷ್ಟ್ರಪತಿಗಳ ಪ್ರಶಸ್ತಿ ಪಡೆಯಲು ಮಾಧ್ಯಮ ಮಿತ್ರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜದ ಗಣ್ಯರು ನೀಡಿರುವ ಸಹಕಾರವನ್ನು ನಾನೆಂದು ಮರೆಯುವುದಿಲ್ಲ. ವಿಕಲ ಚೇತನರ ಹೆಸರಿನಲ್ಲಿ ಹಾಗೂ ವಿಕಲಚೇತನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವುದರೊಂದಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿದೇಶಗಳಿಂದ ಬರುವ ಹಣವನ್ನು ಬಾಚಿಕೊಂಡು ಶ್ರೀಮಂತರಾಗುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ದಿಟ್ಟನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಗುರುಬಸವ ಸ್ವಾಮಿಗಳು ಆಶೀರ್ವಚನ ನೀಡಿದರು. ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ಮೆಣಶಿನಾಳ, ಕಾರ್ಯದರ್ಶಿ ಪರಸಪ್ಪ ತೆಗ್ಗಿನ, ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಅಲ್ಲಾಭಕ್ಷ ಸಿ ಹರಿಹರ, ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ ಮೆಹರವಾಡೆ ಮಾತನಾಡಿದರು. ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರು ಹಾಗೂ ಜೋಯಿಸರಹರಳಹಳ್ಳಿಯ ಬಸವೇಶ್ವರ ಕಲಾ ತಂಡದ ಕಲಾವಿದರಾದ, ಚನ್ನಗೌಡ, ಕರೇಗೌಡ ಗುರುಲಿಂಗಪ್ಪಗೌಡ್ರ ತಂಡದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಅಂಗವಿಕಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ದೇಸಗತಿ, ಶಂಕರಗೌಡ ಭಂಗಿಗೌಡ್ರ, ಒಕ್ಕೂಟದ ಸಂಚಾಲಕ ಗಣೇಶ ಹೂಲಿಹಳ್ಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

