ಹಾನಗಲ್ಲ: ಮರಾಠಾ ಸಮಾಜದ ಸಭೆ ನಾಳೆ
ಹಾನಗಲ್ಲ: ತಾಲೂಕು ಮರಾಠಾ ಸಮಾಜದ ಸಭೆಯನ್ನು ಜ. 5ರಂದು ಮಧ್ಯಾಹ್ನ 3 ಗಂಟೆಗೆ ಕೊಪ್ಪರಸಿಕೊಪ್ಪ ಗ್ರಾಮದ ಮಾತೋಶ್ರೀ ಗೌರಮ್ಮಾಜಿ ಮಠದಲ್ಲಿ ಕರೆಯಲಾಗಿದೆ. ತಾಲೂಕು ಅಧ್ಯಕ್ಷ ರಾಮಣ್ಣ ಮಾಸನಕಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಹಾವೇರಿ ಜಿಲ್ಲಾ ಮರಾಠಾ ಸಮಾಜದ ಅಧ್ಯಕ್ಷ ಎಂ.ಎನ್. ವೆಂಕೋಜಿ, ರಾಜ್ಯ ಮರಾಠಾ ಸಮಾಜದ ಉಪಾಧ್ಯಕ್ಷ ವೈ.ಎಫ್. ಕಿತ್ತೂರ ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳುವರು. ಈ ಸಭೆಯಲ್ಲಿ ಸಮಾಜ ಸಂಘಟನೆ ಹಾಗೂ ತಾಲೂಕು ಸಮಿತಿ ಕುರಿತು ಚರ್ಚಿಸಲಾಗುವುದು. ತಾಲೂಕಿನ ಸಮಾಜ ಬಾಂಧವರು ಆಗಮಿಸಿ, ಸಲಹೆ-ಸೂಚನೆ ನೀಡಬೇಕೆಂದು ಕಾರ್ಯದರ್ಶಿ ಚಂದ್ರಶೇಖರ ಸಾಳುಂಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡ್ಡಿ ಮನ್ನಾ ಹಣ ಬಿಡುಗಡೆಗೆ ಆಗ್ರಹ
ಹಿರೇಕೆರೂರು: ಧಾರವಾಡದ ಕೆಸಿಸಿ ಬ್ಯಾಂಕ್ 536 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸದಸ್ಯತ್ವವನ್ನು ಹೊಂದಿದೆ. ಹಾವೇರಿ, ಗದಗ ಜಿಲ್ಲೆಗೆ ಮಧ್ಯವರ್ತಿ ಬ್ಯಾಂಕ್ಗಳನ್ನು ಸ್ಥಾಪಿಸಬೇಕು. ಬಡ್ಡಿ ಮನ್ನಾ ಯೋಜನೆಯಲ್ಲಿ ಸರ್ಕಾರ ನೀಡಬೇಕಾದ ರು. 85.26 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ. ಈ ಹಿಂದೆ ರಚನೆಯಾದ ಬಾಗಲಕೋಟೆ, ಉಡುಪಿ, ದಾವಣಗೆರೆ ಜಿಲ್ಲೆಗಳಿಗೆ ಪ್ರತ್ಯೇಕ ಮಧ್ಯವರ್ತಿ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಮೂಲಕ ಆ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ಮಧ್ಯವರ್ತಿ ಬ್ಯಾಂಕ್ ರಚನೆ ಮಾಡದಿರುವುದರಿಂದ ಈ ಭಾಗದ ರೈತರಿಗೆ ತೊಂದರೆಯಾಗಿದೆ. ಮುಖ್ಯಮಂತ್ರಿ ನೂತನವಾಗಿ ಪ್ರತ್ಯೇಕ ಮಧ್ಯವರ್ತಿ ಬ್ಯಾಂಕ್ ಸ್ಥಾಪಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಯೋಜನೆಗಳನ್ನು ಕೆಸಿಸಿ ಬ್ಯಾಂಕ್ ಜಾರಿಗೊಳಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಸಾಲ ಪಡೆದಿರುವ ಎಲ್ಲ ರೈತ ಸದಸ್ಯರಿಗೆ ಯಾವುದೇ ಶಾಖೆಯಲ್ಲಿ ವ್ಯವಹರಿಸಲು ರುಪಿ ಕಾರ್ಡ್ ತರಲಾಗಿದೆ. ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಗೆ ಆದೇಶ ಮಾಡಿರುವುದನ್ನು ಸ್ವಾಗತಿಸಿದ ಅವರು, ಬ್ಯಾಂಕಿಗೆ ಆರ್ಥಿಕ ಸಂಪನ್ಮೂಲಗಳ ಕೊರತೆ ನೀಗಿಸಬೇಕು ಎಂದು ಮನವಿ ಮಾಡಿದ್ದಾರೆ. ವೈದ್ಯನಾಥನ ವರದಿ ಪ್ರಕಾರ ರು. 50.29 ಕೋಟಿ ಮತ್ತು 2003-04ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಯೋಜನೆಯಡಿ ಅವಿಭಜಿತ ಧಾರವಾಡ ಜಿಲ್ಲೆಗೆ ಬಡ್ಡಿ ಮನ್ನಾ ಜಾರಿಗೊಳಿಸಿದ್ದು, ಈ ಯೋಜನೆಯಡಿ ಸರ್ಕಾರದಿಂದ ಬ್ಯಾಂಕಿಗೆ ರು. 35.96 ಕೋಟಿ ಸೇರಿದಂತೆ ಒಟ್ಟು ರು. 85.26 ಕೋಟಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು. ನಬಾರ್ಡ್ ಇಲ್ಲವೇ, ಅಪೆಕ್ಸ್ ಬ್ಯಾಂಕಿನಿಂದ ಬಡ್ಡಿ ರಹಿತವಾಗಿ ಸಾಲ ರೂಪದಲ್ಲಿ ರು. 100ಕೋಟಿ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

