ಸೌಹಾರ್ದ ಕ್ರಿಕೆಟ್ ಪಂದ್ಯ: ಪ್ರೆಸ್ ಕ್ಲಬ್ಗೆ ಗೆಲವು
ಹಾವೇರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಪ್ರೆಸ್ ಕ್ಲಬ್ ತಂಡ ಕಂದಾಯ ಇಲಾಖೆ ತಂಡದ ವಿರುದ್ಧ 7 ರನ್ಗಳಿಂದ ಜಯ ಗಳಿಸಿದೆ.
ಬ್ಯಾಡಗಿ-ರಾಣಿಬೆನ್ನೂರು ಕಂದಾಯ ವಿಭಾಗದ ಜಂಟಿ ತಂಡ ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಪ್ರೆಸ್ ಕ್ಲಬ್ ನಿಗದಿತ 6 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 48 ರನ್ ಕಲೆ ಹಾಕಿತು. ಪರಶುರಾಮ ಹಳ್ಳಳ್ಳಿ 25 (2 ಬೌಂಡರಿ) ಗಳಿಸಿದರೆ, ದೀಪಕ್ ಹೆಗಡೆ 17, ಮಾಲತೇಶ ಅಂಗೂರ 1 ರನ್ ಗಳಿಸಿ ಆಜೇಯರಾಗಿ ಉಳಿದರು. ಇನ್ನೋರ್ವ ಆರಂಭಿಕ ಪರಶುರಾಮ ಕೇರಿ 1 ರನ್ ಗಳಿಸಿ, ಔಟಾಗಿದ್ದರು.
ಕಂದಾಯ ಇಲಾಖೆ ಗುರಿ ಬೆನ್ನತ್ತುವ ಯತ್ನದಲ್ಲಿ ಆರಂಭದಲ್ಲೇ ಮುಗ್ಗರಿಸಿತು. ಬೌಲಿಂಗ್ನಲ್ಲೂ ಮಿಂಚಿದ ಪರಶುರಾಮ ಹಳ್ಳಳ್ಳಿ ಹ್ಯಾಟ್ರಿಕ್ ಗಳಿಸಿದರು. ನಾಯಕ ಮಾಲತೇಶ ಅಂಗೂರ ಒಂದೇ ಓವರ್ನಲ್ಲಿ ಎರಡು ವಿಕೆಟ್ ಕಬಳಿಸಿ ಎದುರಾಳಿಗಳನ್ನು ನಿಯಂತ್ರಿಸಿದರು. ವಿಜಯ್ ಹೂಗಾರ್ ಕೂಡ ನಿಯಂತ್ರಿತ ಬೌಲಿಂಗ್ ನಡೆಸಿದರು. ವೀರೇಶ ಮಡ್ಲೂರ ಮೂರು ಅದ್ಭುತ ಕ್ಯಾಚ್ ಪಡೆದು ಮೈದಾನದಲ್ಲಿ ಮಿಂಚು ಹರಿಸಿದರು. ಅಂತಿಮವಾಗಿ ಕಂದಾಯ ಇಲಾಖೆ 8 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಲಷ್ಟೇ ಸಾಧ್ಯವಾಗಿ, 7 ರನ್ಗಳಿಂದ ಸೋತಿತು.
ಸೋತ ದೃಶ್ಯ ಮಾಧ್ಯಮ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಲ್ಲಾಧಿಕಾರಿ ನಾಯಕತ್ವದ ಕಂದಾಯ ಇಲಾಖೆ ತಂಡ ಮೊದಲು ಬ್ಯಾಟಿಂಗ್ ನಡೆಸಿ, 12 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 79 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತು. ಆರಂಭಿಕ ದಾಂಡಿಗನಾಗಿ ಕ್ರೀಸ್ಗಿಳಿದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್ 15 ರನ್ ಗಳಿಸಿ, ಗಮನ ಸೆಳೆದರು. ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ 5, ಉಮೇಶ್ ಸವಣೂರು 15 ರನ್ ಸಂಪಾದಿಸಿದರು.
80 ರನ್ ಗುರಿಯೊಂದಿಗೆ ಕಣಕ್ಕಿಳಿದ ಎಸ್ಪಿ ಶಶಿಕುಮಾರ್ ನೇತೃತ್ವದ ಎಲೆಕ್ಟ್ರಾನಿಕ್ ಮೀಡಿಯಾ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕನಾಗಿ ಬಂದ ಶಶಿಕುಮಾರ್ 15 ರನ್ ಗಳಿಸಿ, ಕೊನೆಯ ಓವರ್ಗೂ ಸ್ವಲ್ಪ ಮೊದಲು ವಿಕೆಟ್ ಒಪ್ಪಿಸಿದರು. ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ 75 ರನ್ಗೆ ಸುಸ್ತಾಯಿತು. ನಾಲ್ಕು ರನ್ಗಳಿಂದ ಸೋಲೊಪ್ಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

