ಹಾವೇರಿ

ಕರವಸೂಲಿ ಮಾಸಾಚರಣೆಗೆ ಚಾಲನೆ

Published On :

ಹಿರೇಕೆರೂರು: ಕರ ವಸೂಲಿ ಮಾಸಾಚರಣೆ ಅಂಗವಾಗಿ ರಟ್ಟಿಹಳ್ಳಿ ಗ್ರಾಮ ಪಂಚಾಯತಿ ಜ. 5ರಂದು ಕರ ವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಿದೆ. ಗ್ರಾಪಂ ಅಧ್ಯಕ್ಷ ಶಂಕ್ರಗೌಡ ಚೆನ್ನಗೌಡ್ರ ತಮ್ಮ ಮನೆಯ ಪ್ರಸಕ್ತ ವರ್ಷದ ಕರ ರು. 2700ನ್ನು ಪಾವತಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಭಿತ್ತಿಪತ್ರ, ಬ್ಯಾನರ್ ಹಾಗೂ ಹಲಗೆ ವಾದನಗಳೊಂದಿಗೆ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಮೆರವಣಿಗೆ ಮಾಡಿ, ಕರವಸೂಲಿ ಮಾಸಾಚರಣೆ ಕುರಿತು ಮಾಹಿತಿ ನೀಡಿ, ಜಾಗೃತಿ ಮೂಡಿಸಿದರು.
ಅಧ್ಯಕ್ಷ ಶಂಕ್ರಗೌಡ ಮಾತನಾಡಿ, ಗ್ರಾಪಂ ಸದಸ್ಯರು ಮೊದಲು ಕರ ಪಾವತಿಸಿದರೆ, ಗ್ರಾಮಸ್ಥರೂ ಅನುಸರಿಸುತ್ತಾರೆ. ಎಲ್ಲ ವಾರ್ಡ್‌ಗಳಲ್ಲೂ ಸಂಚರಿಸುತ್ತೇವೆ. ಜನರು ಕಟ್ಟಡ, ನಿವೇಶನ ಹಾಗೂ ನೀರಿನ ಕರವನ್ನು ಭರಣ ಮಾಡಿ, ಪಂಚಾಯತಿಯ ಮೂಲಸೌಲಭ್ಯ ಅಭಿವೃದ್ಧಿಪಡಿಸಲು, ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಉಪಾಧ್ಯಕ್ಷೆ ಸುಲೋಚನಮ್ಮ ಪಚ್ಚೇರ, ಪಿಡಿಒ ಎನ್.ಎಂ. ಕೋಣಸಾಲಿ, ಸದಸ್ಯರಾದ ವೀರನಗೌಡ ಪಾಟೀಲ, ರಮೇಶ ಬಾಗೋಡಿ, ಮಹ್ಮದ್ ಜಾಫರ್ ಖಾಜಿ, ಮೆಹಬೂಬ ಮುಲ್ಲಾ, ಶಮಿವುಲ್ಲಾ ಗೋಡಿಹಾಳ, ರಿಯಾಜ ಮುಲ್ಲಾ, ಮಕ್ಬುಲಸಾಬ ಹಳಿಯಾಳ, ರಿಯಾಝ ನರಗುಂದಕರ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ವೀರೇಶ ದ್ಯಾವಕ್ಕಳವರ, ಮಂಜುನಾಥ ಚಲುವಾದಿ, ಬಸವರಾಜ ಕವಲೆತ್ತು, ಸಂತೋಷ ಬಿಳಚಿ, ಅನುರಾಧಾ ಸುಣಗಾರ, ಅನುಪಮಾ ಸೂರ್ಯವಂಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.