ಹಾವೇರಿ

ಕಳಪೆ ಹತ್ತಿ ಬೀಜಕ್ಕೆ ಪರಿಹಾರ ನೀಡದಿದ್ದರೆ ಹಾವೇರಿ ಬಂದ್!

Published On :

ಹಾವೇರಿ: ಕಳಪೆ ಹತ್ತಿ ಬೀಜ ಕೊಟ್ಟು ರೈತರಿಗೆ ಮೋಸ ಮಾಡಿರುವ ಮಹಿಕೋ ಕಂಪನಿ ಜ. 14ರೊಳಗಾಗಿ ರೈತರಿಗೆ ಸರ್ಕಾರ ಘೋಷಿಸಿದ ಪ್ರಕಾರ ಪರಿಹಾರ ನೀಡದಿದ್ದರೆ ಹಾವೇರಿ ಜಿಲ್ಲಾ ಬಂದ್‌ಗೆ ಕರೆ ನೀಡಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಕೋ ಕಂಪನಿ ವಿತರಿಸಿದ ಹತ್ತಿ ಬೀಜಗಳು, ನಿಕ್ಕಿ ಪ್ಲಸ್, ನೀರಜ್, ಶಾಲಿಮಾರ್, ಮಹದೇವ, ಯುವ, ರುದ್ರ, ಟರ್ಬೋ, ಜಾಕ್ ಪಾಟ್, ಎಂಆರ್‌ಸಿ ತಳಿಗಳು ಕಳಪೆಯಾಗಿವೆ. ರೈತರು ಅಪಾರ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುವಂತಾಗಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಸಾರ್ವಜನಿಕರಿಂದ ದೂರ ಉಳಿದಿದ್ದು, ಕಬ್ಬು, ಪ್ರವಾಹ ಸಂತ್ರಸ್ತರು, ಕಳಪೆ ಹತ್ತಿ ಬೀಜ, ಮರಳು ಪೂರೈಕೆ ಇತ್ಯಾದಿ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳ ಉದಾಸೀನತೆಯೇ ಕಾರಣ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಕರೆದ ಸಭೆಗೂ ಹೋಗದೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಪಡೆಯದ ಜಿಲ್ಲಾಧಿಕಾರಿಗಳು ಜಿಲ್ಲೆಯನ್ನು ಬಿಟ್ಟು ಹೊಗುವಂತೆ ಆಂದೋಲನ ಮಾಡಲಾಗುವುದು ಎಂದು ಎಚ್ಚರಿಸಿದರು.  ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಕಬ್ಬು ಬೆಳೆದ ರೈತರಿಗೆ ಘೋಷಿಸಿದ ರಾಜ್ಯ ಸಲಹಾ ಬೆಲೆ ಸರಿಯಾಗಿ ಜಾರಿಯಾಗದೆ ರೈತರು ಕಾರ್ಖಾನೆಗಳಿಗೆ ಅಲೆಯುವಂತಾಗಿದೆ. ಜಿಲ್ಲೆಯ ಕಾರ್ಖಾನೆಗಳಲ್ಲಿ ಹಣ ಮತ್ತು ಜಾತಿಯ ಲಾಬಿ ನಡೆಸಿ ಕಬ್ಬನ್ನು ಅರೆಯಲಾಗುತ್ತಿದೆ ಎಂದು ದೂರಿದರು.
ಪ್ರಮುಖರಾದ ಸುರೇಶಪ್ಪ ಗರಡಿಮನಿ, ಜಯಣ್ಣ ಮಾಗನೂರ, ಮಲ್ಲೇಶಪ್ಪ, ಈರಣ್ಣ ವಡ್ಡರ, ಬಿ.ಕೆ. ರಾಜನಹಳ್ಳಿ, ಶಿವಾನಂದಪ್ಪ ಲಿಂಗದಹಳ್ಳಿ, ರುದ್ರೇಶಪ್ಪ ಹುಡೇದ, ಶಿವಪ್ಪ ಜಾನಪ್ಪನವರ, ಹುಚ್ಚಪ್ಪ ಕುಂಬಾರ, ಮಂಜಪ್ಪ ಹುಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.