ಹಾವೇರಿ

ಅನಾರೋಗ್ಯ: ರಾಣಿಬೆನ್ನೂರು ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲ್ಡಹಲ್ಡರ ನಿಧನ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜ. 7
ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ರಾಣಿಬೆನ್ನೂರು ನಗರಸಭೆಯ ಅಧ್ಯಕ್ಷೆ ಪಾರ್ವತೆವ್ವ ಕರಬಸಪ್ಪ ಹಲ್ಡಹಲ್ಡರ (40) ಮಂಗಳವಾರ ಮಧ್ಯಾಹ್ನ 3.30ಕ್ಕೆ ನಿಧನ ಹೊಂದಿದ್ದಾರೆ.
2013ರ ಮಾರ್ಚ್ ತಿಂಗಳಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ 23ನೇ ವಾರ್ಡ್ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ನ 31 ಸದಸ್ಯರ ಪೈಕಿ ಪಾರ್ವತೆವ್ವ ಒಬ್ಬರೇ ಅರ್ಹರಾಗಿದ್ದರಿಂದ ಮೊದಲ ಆಯ್ಕೆಯಲ್ಲೇ ನಗರಸಭೆ ಅಧ್ಯಕ್ಷರೂ ಆದರು. ಅವರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಅವರ ಪತಿ ಕರಬಸಪ್ಪ ರಾಣಿಬೆನ್ನೂರು, ಹರಿಹರ, ದಾವಣಗೆರೆ ನಗರಸಭೆಗಳ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಕಳೆದ ವರ್ಷ ಹಾವೇರಿ ನಗರಸಭೆ ಪೌರಾಯುಕ್ತರಾಗಿ ನಿವೃತ್ತಿ ಹೊಂದಿದ್ದಾರೆ.
ಸಂತಾಪ
ಪಾರ್ವತೆವ್ವ ನಿಧನಕ್ಕೆ ಶಾಸಕ ಕೆ.ಬಿ. ಕೋಳಿವಾಡ, ನಗರಸಭೆ ಉಪಾಧ್ಯಕ್ಷ ಶಿವಣ್ಣ ಮಣೆಗಾರ, ಸ್ಥಾಯಿ ಸಮಿತಿ ಅಧ್ಯಕ್ಷ ನೂರುಲ್ಲಾ ಖಾಜಿ, ಸದಸ್ಯರಾದ ಶೇಖಪ್ಪ ಹೊಸಗೌಡ್ರ, ರಾಮಣ್ಣ ಕೋಲಕಾರ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಸುರೇಶ ಕಲಾಲ, ಈರಣ್ಣ ಅಂಗಡಿ, ಮಾಜಿ ಶಾಸಕ ಜಿ ಶಿವಣ್ಣ, ಸೈಯದ್ ಭಾಷಾ ಕಾಟೇನಹಳ್ಳಿ, ಶಶಿಧರ ಬಸೆನಾಯ್ಕರ, ರತ್ನಾ ಪುನೀತ, ಅಬ್ದುಲ್ ಖಆದರ್ ಪಠಾಣ, ಆಶಾ ಗುಂಡೇರ, ನಾಗರಾಜ ಅಡ್ಮನಿ, ರವಿ ಮಾಂಡ್ರೆ, ಶೇರು ಖಾಬೂಲಿ, ಅಂಜಮನ್ ಎ ಇಸ್ಲಾಂ ಕಾರ್ಯದರ್ಶಿ ನಸರುಲ್ಲಾ ಮುಲ್ಲಾ, ಪೌರಾಯುಕ್ತೆ ಬಿ.ಎಂ. ಅಶ್ವಿನಿ, ಅಭಿಯಂತರಾದ ಎಸ್.ಬಿ. ಪಾಟೀಲ, ಜಿ.ಜಿ. ನಂದೆಪ್ಪ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ದುರುಗಪ್ಪ ಹುಲುಗಮ್ಮನವರ, ತಾಪಂ ಅಧ್ಯಕ್ಷೆ ಹೂವಕ್ಕ ನಾಗೂರು, ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.