ಫೆ. 2ರಂದು ಮಹಾಸಂಗ್ರಾಮ ಸಮಾವೇಶ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 10
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹಿಂದೂ ವಿರೋಧ ಕಾನೂನು ವಿರೋಧಿಸಿ ಒಂದು ಲಕ್ಷ ಜನರು ಸೇರಿ ಹಿಂದೂ ಮಹಾಸಂಗ್ರಾಮ ಸಮಾವೇಶವನ್ನು ಫೆ. 2ರಂದು ಹುಬ್ಬಳ್ಳಿಯಲ್ಲಿ ಮಾಡಲಾಗುವುದು ಎಂದು ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಶಿಗ್ಗಾಂವಿ ಪಟ್ಟಣ ಶರೀಫ ಭವನದಲ್ಲಿ ನಡೆದ ಶ್ರೀರಾಮಸೇನಾ ಸಂಘಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹುಬ್ಬಳ್ಳಿಯ ಹಿಂದೂ ಸಮಾವೇಶದಲ್ಲಿ ಹಿಂದೂ ಸಂಘಟನೆಗಳನ್ನು ಬಲಪಡಿಸುವುದು, ಹಿಂದೂಗಳ ಮೇಲಾಗುತ್ತಿರುವ ಅನ್ಯಾಯ, ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ, ಲವ್ ಜಿಹಾದ್ ಹೆಸರಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿರುವುದನ್ನು ವಿರೋಧಿಸಿ ಸಮಾವೇಶ ಏರ್ಪಡಿಸಲಾಗಿದೆ ಎಂದರು.
125 ಕೋಟಿ ಜನರನ್ನು ಕಾಯುವ ಸೈನಿಕರಿಗೆ ಸುರಕ್ಷತೆ ಇಲ್ಲದಾಗಿದೆ. ಅವರ ಕುರಿತು ಕಿಂಚಿತ್ತೂ ಯೋಚನೆ ಮಾಡದೆ ಮೌನವಾಗಿ ಕುಳಿತ ಪ್ರಧಾನಿ ಮನಮೋಹನ ಸಿಂಗ್, ಸೈನಿಕರ ಮೇಲೆ ಆದ ಅನ್ಯಾಯದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಕೂಡ ನೀಡುವ ಸೌಜನ್ಯವೂ ಅವರಲ್ಲಿಲ್ಲ ಎಂದರು. 2018ರಲ್ಲಿ ಇಸ್ಲಾಂ ಹಾಗೂ 2020ರಲ್ಲಿ ಕ್ರಿಶ್ಚಿಯನ್ರು ರಾಷ್ಟ್ರವನ್ನಾಗಿ ಮಾಡುವುದಾಗಿ ಹೇಳುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ರಿಗೆ ಹಿಂದೂಗಳಾದ ನಾವು ಉತ್ತರ ಹೇಳಬೇಕಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಹಾಗೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ, ಮಸ್ಲಿಂ, ಕ್ರಿಶ್ಚಿಯನ್ಮುಕ್ತ ರಾಷ್ಟ್ರ, ಭ್ರಷ್ಟಾಚಾರ, ಲವ್ ಜಿಹಾದ್ಮುಕ್ತ ರಾಷ್ಟ್ರವನ್ನಾಗಿ ಮಾಡಲು ಮುಂದಾಗಬೇಕು ಎಂದರು.
ಈಗಿನ ರಾಜಕಾರಣಿಗಳು ಸಮಾಜದ ಕಾಳಜಿ ಬಿಟ್ಟು ಓಟಿನ ಆಸೆಗಾಗಿ ಮುಸ್ಲಿಮರ ಓಲೈಕೆ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಲು ಹೊರಟಿರುವ ಮೌಢ್ಯವಿರೋಧಿ ಕಾನೂನು ಹಿಂದುತ್ವ ವಿರೋಧಿಯಾಗಿದೆ. ಜ. 15, 16ರಂದು ಬೆಂಗಳೂರಿಗೆ ಬೆನ್ ಹಿನ್ ಬಾರದಂತೆ ತಡೆದು, ಇಲ್ಲಿನ ಸಂಸ್ಕೃತಿ, ಹಿಂದುತ್ವ ಉಳಿಸಬೇಕು ಎಂದು ಮುತಾಲಿಕ್ ಹೇಳಿದರು.
ಸದಾಶಿವಪೇಟೆಯ ವಿರಕ್ತಮಠದ ಗದಿಗೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀರಾಮಸೇನೆಯ ಗಂಗಾಧರ ಜಿ. ಕುಲಕರ್ಣಿ, ಬಸವರಾಜ ಬೂದಿಹಾಳ, ದುರ್ಗಾ ಸೇನಾ ರಾಜ್ಯಾಧ್ಯಕ್ಷೆ ಕಮಲಕ್ಕ ಜೇಡರ ಮಾತನಾಡಿದರು. ಗದಿಗೆಪ್ಪ ದುಗ್ಗತ್ತಿ, ಎಸ್.ಎನ್. ಪಾಟೀಲ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

