ಹಾವೇರಿ

ರಸ್ತೆ ಸುರಕ್ಷತೆ ಜಾಗೃತಿ ಜಾಥಾ

Published On :

ರಾಣಿಬೆನ್ನೂರು: 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಶಹರ ಪೊಲೀಸ್ ಠಾಣೆಯಿಂದ ಸರ್ಕಾರಿ ಕಾಲೇಜಿನ ವಿಧ್ಯಾರ್ಥಿಗಳು ಜಾಥಾ ನಡೆಸಿ, ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ರಸ್ತೆ ನಿಯಮ ಪಾಲಿಸುವ ಕುರಿತು ಜಾಗೃತಿ ಮೂಡಿಸಿದರು. ಡಿವೈಎಸ್ಪಿ ಎಸ್.ಎಚ್. ಗಡಾದ, ನಗರ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ ಯಳ್ಳೂರು, ಗ್ರಾಮಾಂತರ ಠಾಣೆ ಸಿಪಿಐ ಜೆ. ಲೋಕೇಶ, ಪಿಎಸ್ಐ ಕಾಡದೇವರಮಠ, ಸಂಚಾರಿ ಠಾಣೆ ಪಿಎಸ್ಐ ಅರಳಿಕಟ್ಟಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ೤ ಎಚ್.ಎಂ. ದೊಡ್ಡಬಿಲ್ಲ ಇದ್ದರು.


ತಡಸ ಉರ್ದು ಪ್ರೌಢಶಾಲೆ ಮಕ್ಕಳಿಗೆ ಸೈಕಲ್ ವಿತರಣೆ



ಶಿಗ್ಗಾಂವಿ: ಸರ್ಕಾರ ವಿತರಿಸಿದ ಸೈಕಲ್ಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಬಳಸಿಕೊಳ್ಳಬೇಕು ಎಂದು ಜಿಪಂ ಸದಸ್ಯ ಸಿ.ಎಸ್. ಪಾಟೀಲ ಹೇಳಿದರು. ತಡಸ ಸರ್ಕಾರಿ ಉರ್ದು ಪ್ರೌಢಶಾಲೆ  ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಎಂ.ಎಸ್.  ಶಿವಳ್ಳಿಮಠ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮಹ್ಮದ ಜಾಫರ ಕೊಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಸುನಂದಾಬಾಯಿ ಘೋಡಕೆ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಅಸೂಟಿ, ಉಪಾಧ್ಯಕ್ಷ ಅಬ್ದುಲ್ ಕರೀಂ ಹುಬ್ಬಳ್ಳಿ, ಸದಸ್ಯರಾದ ಡೀಕಪ್ಪ ಗಬ್ಬೂರ, ಜಬ್ಬಾರ ಪಠಾಣ, ಅಬ್ದುಲ್ ಖಾದರ ಕೊಲ್ಲಾಪುರ, ರೇಣುಕಾ ವಾಲಿಕಾರ, ಎಸ್ಡಿಎಂಸಿ ಸದಸ್ಯರಾದ ಮಹ್ಮದ ಹುಸೇನ ಯಲಿಗಾರ, ಮೈನುದ್ದಿನ ಹಂಚಿನಾಳ, ಹುಸೇನ ಮಿಠಾಯಿಗಾರ, ಎಂ.ಎ. ಮುವಜ್ಜನ, ಕುಮಾರ ಛಪ್ಪನ್ನಮಠ ಇದ್ದರು. ಮಿಸ್ಬಾಖಾನ್ ಕುರಾನಖಾನೆ, ಶಾಹೀನ ನಾಥ ನಿರ್ವಹಿಸಿದರು. ರಾಜೇಸಾಬ ಬಾವಾಸಾಬನವರ ಸ್ವಾಗತಿಸಿದರು. ಸಂಜಯ ಎಚ್.ವಿ. ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.