ಹಾವೇರಿ

ಕಬ್ಬಿನಿಂದ ಸಿಹಿಯಾಗಲಿ ಬದುಕು

Published On :

ಹಾವೇರಿ: ಕಬ್ಬು ಉತ್ತಮವಾಗಿ ಬೆಳೆದರೆ ಜೀವನವೇ ಸಿಹಿಯಾಗಿ ಬೆಳೆದ ರೈತನ ಬದುಕು ಹಸನಾಗುವುದು ಎಂದು ಕಬ್ಬು ಬೆಳೆಯಲ್ಲಿ ದಾಖಲೆ ಮಾಡಿರುವ ಅಥಣಿ ತಾಲೂಕಿನ ಶೇಡಬಾಳದ ಪ್ರಗತಿಪರ ರೈತ ಸೂರಗೌಡ ಪಾಟೀಲ ಹೇಳಿದರು.
ಗುತ್ತಲದ ಮಂಜುನಾಥ ಶೀತಾಳ ಅವರ ಜಮೀನಿನಲ್ಲಿ ಭಾನುವಾರ ನಡೆದ ಕಬ್ಬು ಬೆಳೆಗಾರರ ವಿಚಾರ ಸಂಕಿರಣದಲ್ಲಿ ರೈತರನುದ್ದೇಶಿಸಿ ಮಾತನಾಡಿದರು. ಕಬ್ಬನ್ನು ಯೋಜನಾಬದ್ಧವಾಗಿ ಬೆಳೆದರೆ ಹಾಗೂ ಅದಕ್ಕೆ ಕಾಲಕಾಲಕ್ಕೆ ಬೇಕಾದ ರಸಗೊಬ್ಬರ ನೀಡಿದರೆ ಉತ್ತಮ ಬೆಳೆ ಬರುವುದರಲ್ಲಿ ಅನುಮಾನವೇ ಇಲ್ಲ. ರೈತರು ಸರಿಯಾಗಿ ಮಾಹಿತಿ ಪಡೆದು ಕಬ್ಬು ಬೆಳೆಯಬೇಕು ಎಂದು ಹೇಳಿದರು.
ಕೋರಮಂಡಲ್ ಕಂಪನಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ಸಿ. ನಾಗರಾಜ ಮಾತನಾಡಿ, ಕಬ್ಬನ್ನು  ಅಧಿಕ ಪ್ರಮಾಣದಲ್ಲಿ ಬೆಳೆಯಲು ಇರುವ ಮಾರ್ಗೋಪಾಯ ತಿಳಿಸಿದರು. ರೈತರಿಗೆ ದೊರೆಯುವ ಪ್ರಯೋಜನಗಳ ಮಾಹಿತಿ ನೀಡಿದರು. ರೈತರ ಪ್ರಶ್ನೆಗಳಿಗೆ ತಜ್ಞರು, ಪ್ರಗತಿಪರ ರೈತರು ಉತ್ತರಿಸಿ, ರೈತರಲ್ಲಿ ಕಬ್ಬುನ್ನು ಬೆಳೆಯುವ ಹಂತದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ನಿವಾರಿಸಿದರು.
ಎನ್.ಎಂ. ಶೀತಾಳ ವಿಚಾರ ಸಂಕಿರಣ ಉದ್ಘಾಟಿಸಿದರು. ಹಾವೇರಿ ಎಪಿಎಂಸಿ ಅಧ್ಯಕ್ಷ ಮುರುಗೆಪ್ಪ ಅಂಗಡಿ, ಬೆಂಗಳೂರ ಅಪೆಕ್ ಬ್ಯಾಂಕ್ ನಿರ್ದೇಶಕ ಮುತ್ತಣ್ಣ ಯಲಿಗಾರ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಅಶೋಕರಡ್ಡಿ ಮರ್ಚರ ರಡ್ಡೇರ, ಜೆಎಂ ಶುಗರ್ಸ್‌ನ ಹಿರಿಯ ಸಿಇಒ ಎಂ.ಬಿ. ಪಾಟೀಲ್, ಕಲಘಟಗಿಯ ಪ್ರಗತಿಪರ ರೈತರಾದ ಮೋಹನ್ ಪಂಡಿತ್, ಉಮೇಶ ಕೊಪ್ಪದ, ಕೋರಮಂಡಲ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದೇಶ್ ಹುಂಡೇಕರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಂದ್ರಪ್ಪ ಮುದ್ದಿ, ಕಂಚಾರಗಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಪ್ಪ ನೆಗಳೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.