ಹಾವೇರಿ

ಸಿದ್ಧರಾಮೇಶ್ವರ ಕರ್ಮಯೋಗಿ: ಶಾಸಕ ಶಿವಣ್ಣನವರ ಶ್ಲಾಘನೆ

Published On :

ಬ್ಯಾಡಗಿ: ಭಕ್ತಿ ಹಾಗೂ ಜ್ಞಾನಯೋಗದ ನೆಲೆಯಲ್ಲಿ ಕರ್ಮಯೋಗಿ ಸಿದ್ಧರಾಮೇಶ್ವರರು ಸಮಾನತೆಯನ್ನು ಸಾಧಿಸಿದರು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಇಲ್ಲಿನ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಗುರು ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಸಮಾಜವನ್ನು ತೃಪ್ತಿಪಡಿಸಲು ಮಹಾತ್ಮರ ಜನ್ಮದಿನ ಆಚರಿಸುವುದಲ್ಲ. ಅವರ ಆದರ್ಶಗಳನ್ನು ಸಾರುವುದೇ ಇದರ ಉದ್ದೇಶ. ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬೇಡಿ ಎಂದು ಮನವಿ ಮಾಡಿದರು.
ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಎಪಿಎಂಸಿ ಅಧ್ಯಕ್ಷ ಜಗದೀಶ ಕಣಗಿಲಬಾವಿ, ಸದಸ್ಯ ರಮೇಶ ಸುತ್ತಕೋಟಿ, ಪುರಸಭೆ ಸದಸ್ಯರಾದ ಎಂ.ಎಚ್. ಶೆಟ್ಟರ, ಮಂಜುನಾಥ ಭೋವಿ, ತಹಸೀಲ್ದಾರ್ ಶಿವಶಂಕರ ನಾಯಕ್, ತಾಪಂ ಅಧ್ಯಕ್ಷೆ ಚಿನ್ನಮ್ಮ ಫಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಮಾಜಿ ಅಧ್ಯಕ್ಷ ಹನುಮಗೌಡ ಪಾಟೀಲ, ಟಿಇಒ ಎಸ್.ಆರ್. ಪಾಟೀಲ, ಮುಖಂಡರಾದ ಸುರೇಶಗೌಡ ಪಾಟೀಲ, ಎಚ್.ಎಚ್. ದೊಡ್ಮನಿ, ಜೆ.ಪಿ. ಮಲ್ಲಿಗಾರ, ರುದ್ರಪ್ಪ ಹೊಂಕಣ ಇದ್ದರು. ನಟರಾಜ ಸ್ವಾಗತಿಸಿದರು. ಡಿ.ಬಿ. ಕುಸಗೂರು ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.