ಹಾವೇರಿ

ಮತದಾರರಲ್ಲಿ ಜಾಗೃತಿ ಮೂಡಿಸಿ: ಶಾಸಕ ಬೊಮ್ಮಾಯಿ ಮನವಿ

Published On :

ಶಿಗ್ಗಾಂವಿ: ದೇಶದಲ್ಲಿ 58 ಲಕ್ಷ ಹೊಸ ಮತದಾರರು ನೋಂದಣಿ ಮಾಡಿಕೊಂಡಿದ್ದು, ಮತದಾನದ ಹಕ್ಕನ್ನು ಎಚ್ಚರಿಕೆಯಿಂದ ಚಲಾಯಿಸುವಂತೆ ಮಾಡಬೇಕಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರು ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ಯುಪಿಎ ಸರ್ಕಾರ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿದ್ದು, ದಿನಬಳಕೆ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿ, ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಕಾರ್ಮಿಕರು, ರೈತರೂ ಸಂಕಷ್ಟದಲ್ಲಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ ಮಾತನಾಡಿ, ನಕಲಿ ಮತದಾರರು, ಮತದಾನದ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಶೋಭಾ ನಿಸ್ಸೀಮಗೌಡ್ರ, ದೇವಣ್ಣ ಚಾಕಲಬ್ಬಿ, ಜಿಪಂ ಸದಸ್ಯರಾದ ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣವರ, ಸರೋಜಾ ಆಡಿನ, ತಾಪಂ ಉಪಾಧ್ಯಕ್ಷ ನಿಂಗಣ್ಣ ಹರಿಜನ, ಸದಸ್ಯರಾದ ಉಷಾ ಬಿಳೆಕುದರಿ, ಸುಗಂಧಾಬಾಯಿ ಘೋಡಕೆ, ಶಾಂತಮ್ಮ ಬೊಮ್ಮನಹಳ್ಳಿ, ಪುರಸಭೆ ಸದಸ್ಯ ಸುಭಾಸ ಚವ್ಹಾಣ, ವೀರನಗೌಡ್ರ ಪಾಟೀಲ, ನಿಂಗಣ್ಣ ಜವಳಿ ಇದ್ದರು. ಶಿವಾನಂದ ಮ್ಯಾಗೇರಿ ನಿರೂಪಿಸಿ, ವಂದಿಸಿದರು.
--
ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ
ಶಿಗ್ಗಾಂವಿ: ಕಾರ್ಯನಿರತ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ವಿದ್ಯುತ್ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸರ್ಕಾರದ ಕರ್ನಾಟಕ ಕಾರ್ಮಿಕರ ಮಂಡಳಿಯ ವಿವಿಧ ಸೌಲಭ್ಯಗಳುಳ್ಳ ಗುರುತಿನ ಚೀಟಿ ನೋಂದಣಿ ಕಾರ್ಯಕ್ರಮಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ ಚಾಲನೆ ನೀಡಿದರು.
ಜೀವದ ಹಂಗು ತೊರೆದು ಮಾಡುವ ಕೆಲಸ ಇದು. ಕೆಲಸದ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ, ನಿಷ್ಕಾಳಜಿ ವಹಿಸುವುದು ಸರಿಯಲ್ಲ. ಕಾರ್ಮಿಕರ ಹಿತ ಕಾಯಲು ತಾವೂ ಸಿದ್ಧರಿದ್ದು, ಸರ್ಕಾರದ ಸೌಲಭ್ಯ ಪಡೆಯಲು ಮುಂದಾಗಬೇಕು. ವಿದ್ಯುತ್ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಗುತ್ತಿಗೆದಾರರ ಸಂಘ ನೆರವಾಗಿದೆ ಎಂದರು.
ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಎನ್.ಎಸ್. ಹಿರೇಮಠ, ಜೆ.ಎಸ್. ಹಿರೇಮಠ, ಅಬ್ದುಲ್ ಆದಂಭಾಯಿ, ಉಪಾಧ್ಯಕ್ಷ ಸಿದ್ದರಾಮಗೌಡ ಪಾಟೀಲ, ವಿದ್ಯುತ್ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ತಿಪ್ಪಣ್ಣ ಕಂಕಾಳಿ, ಉಪಾಧ್ಯಕ್ಷ ಪಾಂಡುರಂಗ ವಳಷಣ್ಣವರ, ಶಂಭು ಪಾಟೀಲ, ನಾಗಪ್ಪ ತಳ್ಳಳ್ಳಿ, ಬಸಪ್ಪ ಆನಂದಪ್ಪನವರ, ನಾಗಪ್ಪ ಜಿವಾಜಿ, ಸದಸ್ಯರಾದ ಫಕ್ಕೀರಯ್ಯ ಹಿರೇಮಠ, ಮಲ್ಲಿಕಾರ್ಜುನ ಗುರಪ್ಪಗೌಡ್ರ, ಹೆಗ್ಗಪ್ಪ ಸೋಲಾರಗೊಪ್ಪ ಉಪಸ್ಥಿತರಿದ್ದು, ಸದಸ್ಯತ್ವ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.