ಪಿಎಸ್ಐ ಬಂಡೆಗೆ ಶ್ರದ್ಧಾಂಜಲಿ
ರಾಣಿಬೆನ್ನೂರು: ಗುಲ್ಬರ್ಗ ಗುಂಡೇಟಿನಿಂದ ಗಾಯಗೊಂಡು ವೀರಮರಣವನ್ನಪ್ಪಿರುವ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ನಿಧನಕ್ಕೆ ಇಲ್ಲಿನ ಪೋಸ್ಟ್ ಸರ್ಕಲ್ನಲ್ಲಿರುವ ಆಟೋ ಚಾಲಕ ಮಾಲೀಕರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಟೋ ಚಾಲಕರ ಸಂಘದ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಬಂಡೆಯವರ ಕುಟುಂಬಕ್ಕೆ ದುಃಖವನ್ನು ತಡೆಯುವ ಶಕ್ತಿಯನ್ನು ಆ ಭಗವಂತನ ನೀಡಲೆಂದು ಬೇಡಿಕೊಂಡರು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ ಮಾತನಾಡಿದರು. ಆಟೋ ಚಾಲಕರ ಸಂಘದ ಸದಸ್ಯ ಹನುಮಂತಪ್ಪ ಯಡಚಿ, ಕೊಟ್ರೇಶ ಬಸವನಕೋಟೆ,ಚಂದ್ರು ಯಡಚಿ, ಮಂಜುನಾಥ ಹೊನ್ನಜ್ಜನವರ, ಶ್ರೀಧರ ರಾಹುತನಕಟ್ಟಿ, ಕರೀಮ್ ಅತ್ತಾರ, ಆನಂದ ನಾಗನೂರು, ನಂದೀಶ ಮುದಕಣ್ಣನವರ, ಸಾದೀಕ್, ಪರಶುರಾಮ ನಾಯ್ಕ, ಖಾಜಾ ನೀಲಗಾರ, ಇಬ್ರಾಹಿಂ ನೀಲಗಾರ, ಎನ್.ಎನ್. ಭೋತೆ ಇದ್ದರು.
ಬಂಡೆ ನಿಧನಕ್ಕೆ ಶ್ರದ್ಧಾಂಜಲಿ
ಹಿರೇಕೆರೂರು: ಸಮಾಜ ಘಾತುಕ ಶಕ್ತಿ ವಿರುದ್ಧ ಸೆಣಸಾಡಿ ಗುಂಡೇಟಿಗೆ ಬಲಿಯಾದ ಗುಲ್ಬರ್ಗದ ಪೊಲೀಸ್ ಸಬ್ಇನ್ಸಪೆಕ್ಟರ್ ಮಲ್ಲಿಕಾರ್ಜುನ ಬಂಡೆ ನಿಧನಕ್ಕೆ ಪಟ್ಟಣದ ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ದಲಿತ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು. ಮಲ್ಲಿಕಾರ್ಜುನ ಬಂಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದಲಿತ ಮುಖಂಡ ಪ್ರಶಾಂತ ತಿರುಕಪ್ಪನವರ ಮಾತನಾಡಿ, ಜೀವದ ಹಂಗು ತೊರೆದು ರೌಡಿಯನ್ನು ಬಂಧಿಸಲು ಹೋಗಿರುವ ಪಿಎಸ್ಐ ಬಂಡೆ ಅವರ ಮೇಲೆ ರೌಡಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಖಂಡನೀಯ. ಬಂಡೆ ಅವರು ತೀವ್ರ ಗಾಯಗೊಂಡಾಗ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಲಿಲ್ಲ. ಇಂಥ ದಿಟ್ಟ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಭಾಗ್ಯ. ಇಂತಹ ಸಾಹಸ ಪ್ರವೃತ್ತಿಯ ಅಧಿಕಾರಿಗಳು ನಮ್ಮ ನಾಡಿನಲ್ಲಿ ಜನ್ಮ ತಾಳಲಿ ಎಂದು ಆಶಿಸಿದರು. ಮುಖಂಡರಾದ ಭರಮಪ್ಪ ಹರಿಜನ, ಕಾಂತೇಶ ಬಾಲಬಸವನವರ, ಮಾಲತೇಶ ಬೆಟಕೆರೂರ, ಪ್ರವೀಣ ಮುಗಳಿಹಳ್ಳಿ, ಗುತ್ತೇಶ ಕಟ್ಟಿಮನಿ, ಎಂ.ಎಂ. ವಿಜಯ, ಪ್ರಕಾಶ ಕೆಂಪಳ್ಳೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

