ಸುದ್ದಿಸಂಕ್ಷೇಪ
26ರಂದು ಕವಿಗೋಷ್ಠಿ
ಹಾನಗಲ್ಲ: ಗಣರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಫ್ರೆಂಡ್ಸ್ ಅಸೋಸಿಯೇಶನ್ ಸಭಾ ಭವನದಲ್ಲಿ ಜ. 26ರಂದು ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ ಏರ್ಪಡಿಸಿದೆ. ತಾಲೂಕಿನ ಆಸಕ್ತ ಕವಿಗಳು ತಮ್ಮ ಭಾವಚಿತ್ರ, ವಿದ್ಯಾರ್ಹತೆ, ಸ್ವರಚಿತ ಕವನಗಳನ್ನು ರವಿ ಪೋತದಾರ, ಇಂಡಿಯನ್ ಕಂಪ್ಯೂಟರ್ ಸೆಂಟರ್, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಹಾನಗಲ್ಲ - ಈ ವಿಳಾಸಕ್ಕೆ ಕಳುಹಿಸಬೇಕು. ಆಯ್ಕೆಯಾದ ಕವನಗಳ ಪುಸ್ತಕ ಹೊರ ತರಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9449234052, 9482233654 ಸಂಪರ್ಕಿಸಬೇಕೆಂದು ತಾಲೂಕಾಧ್ಯಕ್ಷ ಪ್ರೊ ವಿ.ಜಿ. ಶಾಂತಪುರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಳಿಕ ತಾಲೂಕು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
28ರಂದು ವೀರಗಾಸೆ ಸಮಾವೇಶ
ಶಿಗ್ಗಾಂವಿ: ವೀರಗಾಸೆ ಕಲೆ ಸಮಾವೇಶವನ್ನು ಜ. 28ರಂದು ರಂಭಾಪುರಿ ಕಾಲೇಜಿನ ವೀರಗಂಗಾಧರ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಹಾಗೂ ವೀರಶೈವ ಸದ್ಬೋಧನಾ ಸಂಸ್ಥೆ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಾಲೇಜಿನ ಆಶ್ರಯದಲ್ಲಿ 3 ದಿನಗಳ ಕಾಲ ವೀರಭದ್ರ ಪರಂಪರೆ ಹಾಗೂ ವೀರಗಾಸೆ ಸಂಸ್ಕೃತಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಹಾವೇರಿ ಜಿಲ್ಲೆ ಹಾಗೂ ಸುತ್ತಲಿನ ವೀರಗಾಸೆ ಕಲಾವಿದರು ರಾಷ್ಟ್ರೀಯ ವಿಚಾರ ಸಂಕಿರಣದ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ ಶ್ರೀ ಶೈಲ ಹುದ್ದಾರ (ಮೊ. 8050776670) ಅವರಲ್ಲಿ ಹೆಸರು ನೋಂದಾಯಿಸಬೇಕು. ಕಲಾ ತಂಡಗಳಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಜ. 28ರಂದು ವೀರಗಾಸೆ ಕಲಾವಿದರ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. ಬಳಿಕ ವೀರಗಾಸೆ ಕಲಾ ಸಮಾವೇಶ ನಡೆಯಲಿದೆ. ಕಲಾವಿದರಿಗೆ ಊಟ, ವಸತಿ ವ್ಯವಸ್ಥೆ ಇದ್ದು, ಕಲಾ ಗೌರವ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿಕ್ಷಕರ ಹೋರಾಟ ಸಮಿತಿ ಸಭೆ
ರಾಣಿಬೆನ್ನೂರು: ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ತಾಲೂಕು ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದೆ ಎಂದು ನಿವೃತ್ತ ಶಿಕ್ಷಕ ಸಿ.ಜಿ. ಹೊನ್ನಪ್ಪನವರ ಹೇಳಿದರು. ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಿಗೆ ಫೆ. 17ರಂದು ಚುನಾವಣೆ ನಡೆಯಲಿದ್ದು, ನಗರದ ಕೋಟೆಯಲ್ಲಿರುವ ನಂ. 9 ಶಾಲೆಯಲ್ಲಿ ಕರೆದಿದ್ದ ಶಿಕ್ಷಕರ ಹೋರಾಟ ಸಮಿತಿಯ ಸಭೆಯಲ್ಲಿ ಅವರು, ಹೋರಾಟ ಸಮಿತಿಯ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದರು. ನಿವೃತ್ತ ಶಿಕ್ಷಕರಾದ ವಿ.ಕೆ. ಹೂಲಿಹಳ್ಳಿ, ಎಚ್.ಬಿ. ಇಮ್ಮಡಿ, ಜಿ.ವಿ. ರಾಚೋಟಿಮಠ, ಬಿ.ಬಿ. ಗೌಡರ ಮಾತನಾಡಿದರು. ಸಮಿತಿ ಅಧ್ಯಕ್ಷ ಬಿ.ಪಿ. ಶಿಡೇನೂರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಹಿತರಕ್ಷಣಾ ಸಮಿತಿಯಿಂದ ಹೋರಾಟ ಸಮಿತಿಗೆ ಸೇರಿದ ಟಿ.ಎನ್. ಪೂಜಾರ, ಎಂ.ಬಿ. ಗೊರಪ್ಪಳವರ, ಎ.ಡಿ. ಲೆಕ್ಕಪ್ಪಳವರ, ಎನ್.ವಿ. ಚಿನ್ನಿಕಟ್ಟಿ, ಎಸ್.ವಿ. ದೊಡ್ಮನಿ, ಜೆ.ಎಸ್. ಕೃಷ್ಣಪ್ಪನವರ, ಕೆ.ವಿ. ಕಾಟಣ್ಣನವರ, ನಾಗರಾಜ ಬನ್ನಿಹಟ್ಟಿ, ಆನಂದ ಎಳುಕುರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಡಿ. ಹೊಂಬರಡಿ, ರವಿ ಗೋಣೆಪ್ಪನವರ, ಎಸ್.ಜಿ. ತಳವಾರ, ಎಂ.ಸಿ. ಬಲ್ಲೂರು, ಎಚ್.ಎಂ. ಸುತಾರ, ಜೆ.ಆರ್. ಚಿಕ್ಕೆರೂರು, ಎಸ್.ಎಚ್. ಮೇಟಿ, ಎಚ್.ಎಚ್. ದೊಡ್ಮನಿ, ಎಸ್.ವಿ. ಹಿರೇಮಠ, ಎಸ್.ಟಿ. ಕೋಟಿಹಾಳ ಮಾತನಾಡಿದರು. ಶಿಕ್ಷಕಿಯರಾದ ಎಸ್.ಎಂ. ಮಲ್ಲನಗೌಡ್ರ, ಎ.ಎಸ್. ಕಟಗಿ, ಜೆ.ಎಚ್. ಕಂಡಿಮನಿ, ಎಚ್, ತನುಜಾ, ಜಿ.ಸಿ. ಹೊಸಮನಿ, ಎಂ.ಎ. ಸೌದಾಗರ, ಎಸ್.ಡಿ. ಕರಿಯಣ್ಣನವರ, ಎಂ.ಎನ್. ಕೆಂಪಳ್ಳೇರ, ಕೆ.ಎಚ್. ತಾವರಗೊಂದಿ, ಎನ್.ಯು. ಕುರುವತ್ತಿ, ಆರ್.ಎಚ್. ಎಮ್ಮೇರ ಇದ್ದರು.
ಒಳ್ಳೆಯವರಾಗುವುದೇ ಧರ್ಮ: ಶ್ರೀ
ರಾಣಿಬೆನ್ನೂರು: ಧರ್ಮದ ರಹಸ್ಯ ಇರುವುದು ಸಿದ್ಧಾಂತಗಳಲ್ಲಿ ಅಲ್ಲ, ಅವುಗಳ ಅನುಷ್ಠಾನದಲ್ಲಿ. ಒಳ್ಳೆಯವರಾಗಿದ್ದು, ಒಳ್ಳೆಯದನ್ನೇ ಮಾಡುವುದೇ ಧರ್ಮದ ಸಾರ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಹೇಳಿದರು. ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನಾಚರಣೆ ಅಂಗವಾಗಿ ವರ್ತಕರ ಸಮುದಾಯ ಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಜಿ. ಶಿವಣ್ಣ, ನಿರಂಜನ ಪೂಜಾರ, ತಾಲೂಕು ಕಾರ್ಯದರ್ಶಿ ದೇವೇಂದ್ರ ಮಾಕನೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಮಹಿಳಾ ಪ್ರಮುಖರಾದ ಕೆ. ರೂಪಾ, ಕೆ. ಗಣೇಶ ನಾಯ್ಕ, ಸಂಕಪ್ಪ ಮಾರನಾಳ, ಮೈತ್ರಾ ಹದಡಿ, ಮಂಜುಳಾ, ಪ್ರೊ ಸಿ.ಎನ್. ಪೂಜಾರ, ಕೆ.ಎನ್. ಪಾಟೀಲ ಮಾತನಾಡಿದರು. ಚೇತನ್ ನಂದಿಹಳ್ಳಿ, ಕುಮಾರ ಬೇವಿನಮರದ, ಸಂದೀಪ, ನಗರ ಸಂಘಟನಾ ಕಾರ್ಯದರ್ಶಿ ತೇಜೇಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

