ಹಾವೇರಿ

ಬ್ಯಾಗ್ ತಯಾರಿಕಾ ತರಬೇತಿ

Published On :

ಹಾವೇರಿ: ಸ್ಥಳೀಯ ಶಿವಬಸವೇಶ್ವರ ನಗರದಲ್ಲಿ ಶ್ರೀನಿಧಿ ಮಹಿಳಾ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸ್ವಯಂ ಸೇವಾ ಸಂಘದ ವತಿಯಿಂದ ಉಚಿತ ವ್ಯಾನಿಟಿ ಬ್ಯಾಗ್, ಹ್ಯಾಂಡ್ ಬ್ಯಾಗ್, ಲಗೇಜ್ ಬ್ಯಾಗ್ ತಯಾರಿಕೆಯ ಎರಡು ದಿನಗಳ ತರಬೇತಿ ಕಾರ್ಯಕ್ರಮ ಜರುಗಿತು. ಪ್ರೇಮಲತಾ ಮುದ್ದಿ, ಕಾವ್ಯಾ ಬಾರ್ಕಿ, ಕವಿತಾ ಪಶುಪತಿಹಾಳ, ಲಕ್ಷ್ಮೀ ನವಲೆ, ಕಮಲಾ ಬುಕ್ಕಶೆಟ್ಟಿ, ಮಂಜುಳಾ ಅಂಬಿಗೇರ, ಗಿರಿಜಾ ಹಿರೇಮಠ, ನಾಗವೇಣಿ ಮುಂದಿನಮನಿ, ಲಕ್ಷ್ಮೀ ಶಿಗ್ಲಿ, ಸಬೀನಾ ಕ್ಯಾಲಕೊಂಡ, ರೇಖಾ ಬಸರಿಕಟ್ಟಿ, ಆಶಾ ಕಡಂಗಲೆ, ಸಾವಿತ್ರಾ ಹರಪನಳ್ಳಿ, ಜಯಶ್ರೀ ಹಿರೇಮಠ ಇದ್ದರು. ಎಚ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ ಮತ್ತೊಂದು ತರಬೇತಿ ಕಾರ್ಯಕ್ರಮ ಜರುಗಿತು. ಬ್ಯಾಂಕಿನ ಸ್ಥಳೀಯ ಶಾಖೆ ವ್ಯವಸ್ಥಾಪಕ ಚನ್ನಬಸಪ್ಪ ಉದ್ಘಾಟಿಸಿದರು. ಹುಸೇನಬಿ ಕಟ್ಟಿಮನಿ ನಿರೂಪಿಸಿದರು.
ಮಹಾದೇವಪ್ಪ ಛತ್ರದ ನಿಧನ
ಬ್ಯಾಡಗಿ: ಇಲ್ಲಿನ ವಿದ್ಯಾನಗರ ನಿವಾಸಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ವರ್ತಕ ಮಹಾದೇವಪ್ಪ ಗುಡ್ಡಪ್ಪ  ಛತ್ರದ (84) ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಜನತಾ ಪರಿವಾರದಲ್ಲಿ ಸಕ್ರಿಯರಾಗಿದ್ದ ಛತ್ರದ, ಮಾಜಿ ಸಚಿವ ಕೆ.ಎಸ್. ಬೀಳಗಿ ಅವರ ಆಪ್ತರಾಗಿದ್ದರು. ಪುರಸಭೆ ಸದಸ್ಯ ಬಸವರಾಜ ಛತ್ರದ ಸೇರಿ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಪಟ್ಟಣದ  ವೀರಶೈವ ಮುಕ್ತಿಧಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.
ಸಂತಾಪ: ಶಾಸಕರಾದ ಬಸವರಾಜ ಶಿವಣ್ಣನವರ, ಬಸವರಾಜ ಬೊಮ್ಮಾಯಿ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ,ನೆಹರು ಓಲೇಕಾರ, ಬಿ.ಸಿ. ಪಾಟೀಲ, ಜಿ. ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ, ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಂಕ್ರಣ್ಣ ಮಾತನವರ, ಗದಿಗೆಮ್ಮ ಬಸನಗೌಡ್ರ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಸದಸ್ಯ ಮುರಿಗೆಪ್ಪ ಶೆಟ್ಟರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುರೇಶ ಯತ್ನಳ್ಳಿ, ಎಪಿಂಎಂಸಿ ಮಾಜಿ ಅಧ್ಯಕ್ಷ ಕನ್ನಪ್ಪ ಕೊಪ್ಪದ, ನಿರ್ದೇಶಕರಾದ ರವೀಂದ್ರ ಪಟ್ಟಣಶೆಟ್ಟಿ, ಎಸ್.ಸಿ. ಶಿಡೇನೂರ, ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಬಿ. ಮಾಸಣಗಿ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.