ಮೈಮೇಲೆ ತಿರಂಗಾ: ಹಡಪದಗೆ ಸನ್ಮಾನ
ರಾಣಿಬೆನ್ನೂರು: ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಪಂ, ನಗರಸಭೆ ಆಶ್ರಯದಲ್ಲಿ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಶಾಸಕ ಕೆ.ಬಿ. ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಹನುಮಂತಪ್ಪ ಬಡದಾಳ ಧ್ವಜಾರೋಹಣ ಮಾಡಿದರು. ನಗರಸಭೆ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ, ತಾಪಂ ಅಧ್ಯಕ್ಷರಾದ ಹೂವಕ್ಕ ನಾಗೂರು, ಎಪಿಎಂಸಿ ಅಧ್ಯಕ್ಷ ನಂದೆಪ್ಪ ತೆಗ್ಗಿನ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಂದ್ರುಗೌಡ ಪಾಟೀಲ, ಟಿಎಪಿಎಂಎಸ್ ಅಧ್ಯಕ್ಷ ಹನುಮಂತಗೌಡ ಮುಡದ್ಯಾವಣ್ಣನವರ, ತಾಪಂ ಇಒ ಕೆ. ಕೃಷ್ಣಮೂರ್ತಿ, ಬಿಇಒ ಕೆ. ಲಕ್ಷ್ಮಣ, ಡಿವೈಎಸ್ಪಿ ಎಚ್.ಎಸ್. ಗಡಾದ, ತಾಪಂ ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ, ಜಿಪಂ ಸದಸ್ಯರಾದ ಶಿವಕುಮಾರ ಮುದ್ದಪ್ಪಳವರ, ಮಂಜುನಾಥ ಓಲೇಕಾರ, ಜ್ಯೋತಿ ರಾಮಲಿಂಗಣ್ಣನವರ, ಲಲಿತಾ ಜಾಧವ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಖಾಜಿ, ಬಸವರಾಜ ಹುಚ್ಚಗೊಂಡರ, ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ, ವಾಸಣ್ಣ ಕೂಸಗೂರು ಇದ್ದರು. ರೋಟರಿ ಶಾಲೆಯ ಮಕ್ಕಳು ರಾಷ್ಟ್ರಗೀತೆ ಮತ್ತು ರೈತಗೀತೆ ಹಾಡಿದರು. ದೇಹದ ಮೇಲೆ ರಾಷ್ಟ್ರಧ್ವಜದ ಚಿತ್ರ ಬರೆದುಕೊಂಡು, ಜಾಗೃತಿ ಮೂಡಿಸಲು ಶ್ರಮಿಸಿದ ಗೃಹರಕ್ಷಕ ಜಗದೀಶ ಹಡಪದ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಸ್ವಾಗತಿಸಿದರು. ಸಾಂಖ್ಯಿಕ ನಿರೀಕ್ಷಕ ಮಾರುತಿ ಚೌಡಕ್ಕನವರ ನಿರೂಪಿಸಿದರು. ಹೋಬಾ ನಾಯ್ಕ ವಂದಿಸಿದರು.
ಶಿಗ್ಗಾಂವಿ: ಅಲ್ಲಲ್ಲಿ ಧ್ವಜಾರೋಹಣ
ಹಾನಗಲ್ಲ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ 65ನೇ ಗಣರಾಜ್ಯೋತ್ಸವ ಅಂಗವಾಗಿ ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ರಾಷ್ಟ್ರಧ್ವಜಾರೋಹಣ ಮಾಡಿದರು. ಪುರಸಭೆ ಸದಸ್ಯ ಕಲ್ಯಾಣಕುಮಾರ ಶೆಟ್ಟರ, ತಾಪಂ ಅಧ್ಯಕ್ಷ ಮಲ್ಲನಗೌಡ್ರ ವೀರನಗೌಡ್ರು, ಪರಶುರಾಮ ಡೂಗನವರ, ರವಿ ಕಲಾಲ, ಸಿಪಿಐ ಬಿ.ಎಸ್. ಮಂಟೂರ ಮಾತನಾಡಿದರು. ಪುರಸಭಾಧ್ಯಕ್ಷೆ ಲಕ್ಷ್ಮೀ ಹರಿಜನ, ಉಪಾಧ್ಯಕ್ಷ ಮಹ್ಮದ್ ಜಾಫರ್ ಕೇಣಿ, ಜಿಪಂ ಸದಸ್ಯೆ ಕಸ್ತೂರೆವ್ವ ವಡ್ಡರ, ಚನ್ನವೀರಸ್ವಾಮಿ ಹಿರೇಮಠ, ಪಿಎಸ್ಐ ಮಹದೇವ ಯಲಿಗಾರ, ಅಧಿಕಾರಿಗಳಾದ ಬಿ.ವೈ. ಬಂಡಿವಡ್ಡರ, ಕೆ.ಆರ್. ಮಠದ, ಶಿವರಾತ್ರೇಶ್ವರ ಸ್ವಾಮಿ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಸ್ವಾಗತಿಸಿದರು. ನಿರಂಜನ ಗುಡಿ ನಿರೂಪಿಸಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಸೋಮಶೇಖರ ವಂದಿಸಿದರು.
ಲಿಟಲ್ ಹಾರ್ಟ್ಸ್ ಸ್ಕೂಲ್ನಲ್ಲಿ ಅಧ್ಯಕ್ಷ ಭೋಜರಾಜ ಕರೂದಿ ಧ್ವಜಾರೋಹಣ ನೆರವೇರಿಸಿದರು. ಆದಿಶಕ್ತಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಅಧ್ಯಕ್ಷ ಎಂ.ಬಿ. ಕಲಾಲ, ಶ್ರೀ ಕುಮಾರೇಶ್ವರ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಅರ್ಬನ್ ಬ್ಯಾಂಕಿನಲ್ಲಿ ಉಪಾಧ್ಯಕ್ಷ ಸಚಿನ ಕಬ್ಬೂರ, ಎಪಿಎಂಸಿಯಲ್ಲಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯಲ್ಲಿ ಅಧ್ಯಕ್ಷ ಎ.ಎಸ್.ಬಳ್ಳಾರಿ, ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಚಾರ್ಯ ಪ್ರೊ ಎನ್.ಬಿ. ಬಣಕಾರ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಧ್ವಜಾರೋಹಣ ನೆರವೇರಿಸಿದರು.
ಜಾತಿ ಹೆಸರಲ್ಲಿ ದೇಶ ವಿಭಜನೆ: ಬೇವಿನಮರದ
ಶಿಗ್ಗಾಂವಿ: ಅಂಬೇಡ್ಕರ್ ತತ್ವಾದರ್ಶಗಳನ್ನು ನಾವು ಪಾಲಿಸುತ್ತಿಲ್ಲ. ಎಷ್ಟೋ ಮಹಾನುಭಾವರನ್ನು ಜಾತಿ ಹೆಸರಲ್ಲಿ ಹಂಚಿಕೊಂಡು ದೇಶ ಒಡೆಯುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ವಿಷಾದಿಸಿದರು. ಹುಲಗೂರು ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ಪೊಲೀಸ್ ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ ಒತ್ತಡಕ್ಕೆ ಒಳಗಾಗಿದ್ದಾರೆ. ನಮ್ಮ ದೇಶದ ಸೈನಿಕರ ರುಂಡ ಚೆಂಡಾಡಿದರೂ ಪ್ರಧಾನಿ ಮನಮೋಹನ ಸಿಂಗ್ ತುಟಿ ಬಿಚ್ಚುವುದಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಹತ್ತಿ ಬೆಳೆ ಹಾನಿಗೆ ಹೆಕ್ಟೇರ್ಗೆ ರು. 4500 ಪರಿಹಾರವನ್ನು ಸರ್ಕಾರ ಘೋಷಿಸಿದೆ. ಇದು ಹತ್ತಿ ಬೀಜಗಳ ಬೆಲೆಗೂ ಸರಿ ಹೋಗುವುದಿಲ್ಲ. ರೈತರಿಗೆ ತುಂಬ ಅನ್ಯಾಯವಾಗುತ್ತಿದೆ ಎಂದರು.
ಆಳುವವರು ಆತ್ಮಾವಲೋಕನ ಮಾಡಿಕೊಳ್ಳಲಿ: ಬಣಕಾರ
ಹಿರೇಕೆರೂರು: ದೇಶಕ್ಕೆ ಸ್ವಾತಂತ್ರ್ಯ ಬಂದು ಆರುವರೆ ದಶಕಗಳು ಗತಿಸಿದರೂ ಸಾಧಿಸಿರುವ ಪ್ರಗತಿ ಅತ್ಯಲ್ಪ. ಆಡಳಿತ ನಡೆಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಒದಗಿದೆ ಎಂದು ಶಾಸಕ ಯು.ಬಿ. ಬಣಕಾರ ನುಡಿದರು.
ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಾಮಾಣಿಕ ಸೇವೆಯ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದರು. ತಹಸೀಲ್ದಾರ್ ಶಕುಂತಲಾ ಚೌಗುಲೆ ಧ್ವಜಾರೋಹಣ ನೆರವೇರಿಸಿದರು. ತಾಪಂ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಗಾಳಿ, ಪಪಂ ಅಧ್ಯಕ್ಷೆ ಶಿವಲೀಲಾ ರಂಗಕ್ಕನವರ, ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಜಿಪಂ ಸದಸ್ಯರಾದ ಬಸಮ್ಮ ಅಬಲೂರ, ಪಾರ್ವತೆವ್ವ ಬೋಗಾವಿ, ಸುಜಾತಾ ಕೊಟಗಿಮನಿ, ತಾಪಂ ಸದಸ್ಯರಾದ ಆರ್.ಎನ್. ಗಂಗೋಳ, ಚಂದ್ರು ಅಣ್ಣಪ್ಪನವರ, ರೂಪಾ ಆಡೂರ, ಗ್ರೇಡ್-2 ತಹಸೀಲ್ದಾರ್ ತುಷಾರ ಹೊಸೂರ, ತಾಪಂ ಇಒ ಡಿ.ಎಂ. ಜನವಾಡ, ಸಿಪಿಐ ಯೋಗೇಶ ಎಸ್.ಟಿ., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ, ಪಪಂ ಮುಖ್ಯಾಧಿಕಾರಿ ರಾಜಕುಮಾರ ಎಂ.ಎಚ್., ಜಿಪಂ ಅಭಿಯಂತ ರುದ್ರ ಪಶುಪತಿ ಇದ್ದರು. ಸಿಡಿಪಿಒ ಶ್ರೀನಿವಾಸ ಆಲದರ್ತಿ ಸ್ವಾಗತಿಸಿ, ಪಿ.ಬಿ. ನಿಂಗನಗೌಡ್ರ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

