ಧರ್ಮ ಬಾಳಿನ ಭಾಗ್ಯೋದಯ: ರಂಭಾಪುರಿ ಶ್ರೀ
ಶಿಗ್ಗಾಂವಿ: ಮಾನವ ಜೀವನ ಸಾರ್ಥಕ ಮಾಡಿಕೊಳ್ಳಲು ಶಿವಜ್ಞಾನದ ಅರಿವು ಮುಖ್ಯ. ಧರ್ಮದ ದಿಕ್ಸೂಚಿ ಬಾಳಿನ ಭಾಗ್ಯೋದಯಕ್ಕೆ ದಾರಿ ದೀಪವೆಂದು ಬಾಳೆಹೊನ್ನೂರಿನ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ನುಡಿದರು.
ಪಟ್ಟಣದ ಅರಳಲೆಹಿರೇಮಠದಲ್ಲಿ ರುದ್ರಮುನಿ ಶಿವಾಚಾರ್ಯರ 40ನೇ ಪುಣ್ಯಾರಾದನೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೇದಾರ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅರಳಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿದರು. ಧರ್ಮ ಸಮಾರಂಭದಲ್ಲಿ ವಯೋವೃದ್ಧ ದಂಪತಿಗೆ ಶ್ರೀಗಳಿಂದ ಗುರುರಕ್ಷೆ ನೀಡಲಾಯಿತು. ಲಿಂ. ರುದ್ರುಮುನಿ ಶಿವಾಚಾರ್ಯರ 108 ನಾಮವಳಿ ಪುಸ್ತಕವನ್ನು ಉಭಯ ಶ್ರೀಗಳು ಬಿಡುಗಡೆ ಮಾಡಿದರು. ಮಾಜಿ ಶಾಸಕ ರಾಜಶೇಖರ ಸಿಂಧೂರ, ಹುಲ್ಯಾಳದ ವಿದ್ಯಾನಂದ ಶಿವಾಚಾರ್ಯರು, ಕಲಾದಗಿ ಚಂದ್ರಶೇಖರ ಶಿವಾಚಾರ್ಯರು, ಕೂಡಲದ ಗುರುನಂಜೇಶ್ವರ ಶ್ರೀಗಳು, ಕರ್ಜಗಿ ಶಿವಯೋಗಿ ಶಿವಾಚಾರ್ಯರು, ಹಾವೇರಿ ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸೂಡಿ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯರು, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮಿಗಳು, ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು, ಶಾಂತಪುರಮಠದ ಶಿವಾನಂದ ಶಿವಾಚಾರ್ಯರು ಇದ್ದರು. ಶಿವಬಸು ಹಾವೇರಿ ಪ್ರಾರ್ಥಿಸಿದರು. ಡಾ ಆರ್.ಎಸ್. ಅರಳಲೇಮಠ ಸ್ವಾಗತಿಸಿದರು. ಗುರುಪಾದಯ್ಯ ಸಾಲಿಮಠ ನಿರ್ವಹಿಸಿದರು.
ಅಡ್ಡ ಪಲ್ಲಕ್ಕಿ ಮಹೋತ್ಸವ
ಪುಣ್ಯಾರಾಧನೆ ನಿಮಿತ್ತ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಲಿಂ. ರುದ್ರಮುನಿ ಶಿವಾಚಾರ್ಯರ ಭಾವಚಿತ್ರ ಮೆರವಣಿಗೆಗೆ ಬಾಳೆಹೊನ್ನೂರಿನ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು. ನೂರಾರು ಕುಂಭ ಹೊತ್ತ ಮಹಿಳೆಯರು, ವೀರಗಾಸೆ, ಜಾಂಝ್ ಮೇಳ, ಕರಡಿ ಸಮಾಳ ಮೆರವಣಿಗೆಗೆ ರಂಗು ತುಂಬಿದವು. ತಳಿರು-ತೋರಣ, ರಂಗೋಲಿಗಳಿಂದ ಬೀದಿಗಳನ್ನು ಅಲಂಕರಿಸಲಾಗಿತ್ತು.
ಸೋಮಶೇಖರ ಗೌರಿಮಠ, ರವಿ ಕುರಗೋಡಿ, ಶಿದ್ದಲಿಂಗಪ್ಪ ಸಕ್ರಿ, ಬಸವರಾಜ ನಾರಾಯಣಪುರ, ಮಹೇಶ ಕೋತಂಬ್ರಿ, ಶೇಕಯ್ಯ ಕಟಗಿಮಠ, ಬಾಪುಗೌಡ್ರ ಪಾಟೀಲ್, ರಮೇಶ ಶಿರೂರ, ಬಸವರಾಜ ಮರಳಿ, ಚನ್ನಕುಮಾರ ದೇಸಾಯಿ, ರಮೇಶ ಶಟ್ಟರ್, ಅಶೋಕ ಶಟ್ಟರ್, ರವಿ ನೇರೆಗಲ್, ಡಾ ಆರ್.ಎಸ್. ಆರಳೆಲೆಮಠ, ಡಾ ಪುರಾಣಿಕಮಠ, ಬಂಕಣ್ಣ ಕುರಗೋಡಿ, ಕಂಠೆಪ್ಪ ನೆರೆಗಲ್, ವೀರಯ್ಯನವರು ಹಿರೇಮಠ, ಮಂಜುನಾಥ ಕೂಲಿ, ಸುರೇಶಗೌಡ್ರ ಪಾಟೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

