ರಾಣಿಬೆನ್ನೂರು: ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಸ್ತು
ರಾಣಿಬೆನ್ನೂರು: ಇಲ್ಲಿನ ನಗರಸಭೆಯ ಸ್ಥಾಯಿ ಸಮಿತಿ ಚೇರಮನ್ರಾದ ನೂರುಲ್ಲಾ ಖಾಜಿಯವರ ಅಧ್ಯಕ್ಷತೆಯಲ್ಲಿ ಗುರುವಾರ ನಗರ ಸ್ಥಾಯಿ ಸಮಿತಿ ಕಾರ್ಯಾಲಯದಲ್ಲಿ ಪ್ರಥಮ ಸಭೆ ಜರುಗಿತು.
ಸಭೆಯಲ್ಲಿ ನಗರದ ವಿವಿಧ ವಾರ್ಡ್ಗಳಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಕರಿತು ನಿರ್ಣಯ ಕೈಗೊಳ್ಳಲಾಯಿತು.
ವಾರ್ಡ್ 11ರಲ್ಲಿ ಬರುವ ಜಿಮ್ಮಾ ಮಸೀದಿ ಹತ್ತಿರ ಪೈಪ್ ದುರಸ್ತಿ ಹಾಗೂ ಬಣ್ಣ ಹಚ್ಚುವುದು ಕಾಮಗಾರಿ ಆರಂಭಿಸಲು, ವಾರ್ಡ್ 14ರಲ್ಲಿ ಮೂಮ್ಮಿನಗಾರ ಗಲ್ಲಿಯಲ್ಲಿ ರು. 20 ಸಾವಿರ ಅನುದಾನದಲ್ಲಿ ಚರಂಡಿ ದುರುಸ್ತಿ ಪಡಿಸಲು, ವಾರ್ಡ್ 4ರಲ್ಲಿ ಬರುವ ಹೂದ್ದಿಗೇರಿ ಜೀನ ನಂದಿಹಳ್ಳಿ ಗೋಡಾನ ಹತ್ತಿರ ಸಿಸ್ಟರನ್ಗಳನ್ನು ರು. 20 ಸಾವಿರದಲ್ಲಿ ದುರಸ್ತಿ ಮಾಡಲು, ನಗರದ ಎಂ.ಜಿ. ರಸ್ತೆ ಪಕ್ಕದಲ್ಲಿರುವ ದುರ್ಗಾದೇವಿ ತರಕಾರಿ ಮಾರ್ಕೆಟ್ಗೆ ರು. 20 ಸಾವಿರದಲ್ಲಿ ನಾಮಫಲಕ ಅಳವಡಿಸಲು, ವಾರ್ಡ್ 11ರಲ್ಲಿ ಬರುವ ಗೌಳಿ ಓಣಿಯಲ್ಲಿ ರು. 20 ಸಾವಿರದಲ್ಲಿ ಸಿಸಿ ಗಟಾರು ನಿರ್ಮಿಸಲು ನಿರ್ಣಯ ಕೈಗೊಳ್ಳಲಾಯಿತು.
ವಾರ್ಡ್ 25ರಲ್ಲಿ ಬರುವ ರಾಜರಾಜೇಶ್ವರಿ ನಗರ 4ನೇ ಕ್ರಾಸ್ ಸ್ವಸ್ತಿಕ್ ಪ್ರಿಂಟಿಗ್ ಪ್ರೇಸ್ ಎದುರು ರು. 20 ಸಾವಿರದಲ್ಲಿ ಗಟಾರು ರಿಪೇರಿ ಮಾಡಲು, ಉಮಾಶಂಕರ ನಗರದ ಐ.ಬಿ. ಕಾಂಪೌಂಡ್ ಬಾಜು ರು. 20 ಸಾವಿರದಲ್ಲಿ ಗಟಾರು ರಿಪೇರಿ ಮಾಡಲು, ರಾಜೇಶ್ವರಿ ನಗರದ ನಂದಿ ಹಾಸ್ಪಿಟಲ್ ಹತ್ತಿರ ರು. 20 ಸಾವಿರದಲ್ಲಿ ಸಿಡಿ ನಿರ್ಮಾಣ ಮಾಡಲು, ಪುಷ್ಪಾ ಬದಾಮಿಯವರ ಮನೆಯ ಹತ್ತಿರ ರು. 20 ಸಾವಿರದಲ್ಲಿ ಸಿಡಿ ನಿರ್ಮಾಣ ಮಾಡಲು, ರೊಡ್ಡನವರ ವಕೀಲರ ಮನೆಯ ಹತ್ತಿರ ರು. 20 ಸಾವಿರ ವೆಚ್ಚದಲ್ಲಿ ಸಿಡಿ ನಿರ್ಮಾಣ ಮಾಡಲು, ಎಂ.ಐ. ಪಾಟೀಲ ಮನೆ ಹತ್ತಿರ ರು. 20 ಸಾವಿರ ವೆಚ್ಚದಲ್ಲಿ ಗಟಾರ ರಿಪೇರಿಗೆ ಹಾಗೂ ನಗರದ ದುರ್ಗಾ ತರಕಾರಿ ಮಾರುಕಟ್ಟೆಯಲ್ಲಿದ್ದ ಹಾಗೂ ತೆಗೆದಿರಿಸಿರುವ 10 ಮಿಟರ್ ಎತ್ತರದ ಹೈಮಾಸ್ಟ್ ದೀಪಸ್ತಂಭಕ್ಕೆ ರು. 19,700 ಗಳಲ್ಲಿ ರಾಜರಾಜೇಶ್ವರಿ ನಗರದಲ್ಲಿನ ಸಾರ್ವಜನಿಕ ಪಾರ್ಕ್ ಹತ್ತಿರ ಅಳವಡಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ನಗರಸಭಾ ಪ್ರಭಾರಿ ಅಧ್ಯಕ್ಷ ಶಿವಣ್ಣ ಮಣೇಗಾರ, ಸದಸ್ಯರಾದ ಖಾದರ ಪಠಾಣ, ಪುಟ್ಟಪ್ಪ ಮರಿಯಮ್ಮನವರ, ರಾಘವೇಂದ್ರ ಚಿನ್ನಿಕಟ್ಟಿ, ಶಾರದಾ ಜಂಬಗಿ, ರತ್ನಾ ಪುನಿತ, ಫಾತಿಮಾಬಿ ಶೇಖ, ಮೂಬಿನಾ ಹರಪನಹಳ್ಳಿ,ಬಸವರಾಜ ಹುಚ್ಚಗೊಂಡರ, ಶಶಿಧರ ಬಸೆನಾಯ್ಕರ, ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ ಜೈನ, ಅಭಿಯಂತ ಬಿ.ಎಸ್. ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

