ಸಂಸ್ಕೃತಿ ಮೇಲೆ ವೈಚಾರಿಕತೆ ದಬ್ಬಾಳಿಕೆ ಸಲ್ಲದು
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 30
ವಿಜ್ಞಾನ ಮತ್ತು ವೈಚಾರಿಕತೆ ಬೆಳೆಯಲಿ, ಆದರೆ, ಆದರ್ಶ ಸಂಸ್ಕೃತಿಯ ಮೇಲೆ ವೈಚಾರಿಕತೆಯ ದಬ್ಬಾಳಿಕೆ ಒಳ್ಳೆಯದಲ್ಲವೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ರಂಭಾಪುರೀ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮದ್ವೀರಶೈವ ಸದ್ಭೋಧನ ಸಂಸ್ಥೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಮತ್ತು ನಗರದ ರಂಭಾಪುರೀ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಶಿಗ್ಗಾಂವಿ ಆಶ್ರಯದಲ್ಲಿ ಜರುಗಿದ ವೀರಭದ್ರ ಪರಂಪರೆ ಮತ್ತು ಜಾನಪದ ಸಂಸ್ಕೃತಿ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶ್ವಬಂಧುತ್ವ ಸಾರಿದ ವೀರಶೈವ ಧರ್ಮದಲ್ಲಿ ವೀರಭದ್ರ ಸತ್ಕ್ರಾಂತಿ ಮೊಳಗಿಸಿದ ವೀರಾಧಿವೀರ. ಅವನಿಲ್ಲದೆ ಇರುವ ಸ್ಥಳವಿಲ್ಲ. ವೀರಶೈವೇತರರೂ ವೀರಭದ್ರನಲ್ಲಿ ಅಪಾರ ಭಕ್ತಿ ಶ್ರದ್ಧೆ ಇಟ್ಟುಕೊಂಡಿದ್ದನ್ನು ಮರೆಯಲಾಗದು. ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ವೀರಭದ್ರ ಪರಂಪರೆ ಮತ್ತು ಜಾನಪದ ಸಂಸ್ಕೃತಿ ಯಶಸ್ವಿಯಾಗಿ ಜರುಗಿದ್ದು, ಹರುಷ ತಂದಿದೆ ಎಂದರು. ಇದಕ್ಕಾಗಿ ಶ್ರಮಿಸಿದ ಸರ್ವರಿಗೂ ರಂಭಾಪುರಿ ಜಗದ್ಗುರುಗಳು ಶಾಲು ಹೂಹಾರ ಹಾಕಿ ಶುಭ ಹಾರೈಸಿದರು.
ಜನಪದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಡಿ.ಬಿ. ನಾಯಕ ಮಾತನಾಡಿ, ವೀರಭದ್ರ ಪರಂಪರೆಯ ಬಹುಮುಖಿ ದಾಖಲೀಕರಣ ಹಾಗೂ ಅಧ್ಯಯನ ಅಗತ್ಯವಾಗಿದೆ. ಯಾವುದೇ ಕಲೆ, ಧಾರ್ಮಿಕ ಆಚರಣೆಯಿಂದ ಹೊರತಾಗಿಲ್ಲ. ಕಲೆಗಳನ್ನು ಸಮಕಾಲೀನ ಜತೆ ಪರಿಷ್ಕಾರಗೊಳ್ಳಬೇಕು. ದ್ರಾವಿಡ ಸಂಸ್ಕೃತೀಯ ವೀರ ನಾಯಕ ವೀರಭದ್ರನ ಕುರಿತು ಅಧ್ಯಯನ ನಡೆಯಬೇಕಿದೆ ಎಂದರು.
ವಿಪ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ವೀರಭದ್ರನ ಸಂಸ್ಕೃತಿ ನಮ್ಮ ನಾಡಿನಲ್ಲಿ ಬೇರೂರಿದೆ. ಆತ ಜನನಾಯಕನಾಗಿ ಬೆಳೆದು ಸರ್ವರ ರಕ್ಷಕನಾಗಿದ್ದಾನೆ ಎಂದರು.
ಮದ್ವೀರಶೈವ ಸದ್ಭೋಧನಾ ಸಂಸ್ಥೆ ಅಧ್ಯಕ್ಷ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವೀರಭದ್ರ ಪರಂಪರೆ ಪುರಾತನವಾದದ್ದು. ಈ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ರಾಷ್ಟ್ರ ಮಟ್ಟದ 11 ರಾಜ್ಯ ವಿದ್ವಾಂಸರು 80 ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದು, ಈ ವಿಚಾರ ಸಂಕಿರಣ ಯಶಸ್ವಿಯಾಗಿದೆ ಎಂದರು.
ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಮಾತನಾಡಿದರು. ಈ ಸಂದರ್ಭ ಗುಲಬುರ್ಗದ ಶಿವಶರಣಪ್ಪ ಶಿರಿ, ಡಾ. ಪಂಚಾಕ್ಷರಿ ಹಿರೇಮಠ, ಡಾ. ಮಲ್ಲಿಕಾರ್ಜುನ ಪರಡ್ಡಿ, ವೀರಭದ್ರಗೌಡ ಹೊಸಗೌಡ್ರ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರೊ. ಎಸ್.ಬಿ. ಕುಲಕರ್ಣಿ ಸ್ವಾಗತಿಸಿದರು. ಜಯಶ್ರೀ ಹೊಸಮನಿ ಹಾಗೂ ಪ್ರೊ. ಶಿವಪ್ರಕಾಶ ಬಳಿಗಾರ ನಿರೂಪಿಸಿದರು. ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

