ಹಾವೇರಿ

ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Published On :

ಹಿರೇಕೆರೂರು: ಪಟ್ಟಣದ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಗುರುವಾರ ಮಹಾ ಜಪಯಜ್ಞ ಹಾಗೂ ಅಖಂಡ ಜಾಗರಣೆ ಕಾರ್ಯಕ್ರಮ ಮಂದಿರದ ಸಂಸ್ಥಾಪಕ ವೈ.ಡಿ. ಮಧೂರಕರ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಿತು. ಯಲ್ಲಟ್ಟಿಯ ರಾಮಕೃಷ್ಣ ಮಹಾರಾಜರು ಮತ್ತು ಜಮಖಂಡಿಯ ನಿಂಗರಾಜ ಮಹಾರಾಜರ ಸಾನ್ನಿಧ್ಯದಲ್ಲಿ ದಿನವಿಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶುಕ್ರವಾರ ಬೆಳಗ್ಗೆ ವಿಠ್ಠಲ ರುಖುಮಾಯಿ ದೇವರಿಗೆ ವಿಶೇಷ ಪೂಜೆ ಹಾಗೂ ಜಪ ಆರಾಧನೆ ನಡೆಯಿತು. 'ಓಂ ನಮ ಶಿವಾಯ' ಎಂಬ ಮಂತ್ರ ಘೋಷಣೆಯೊಂದಿಗೆ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಪುರೋಹಿತ ರಘು ಭಟ್, ಧರ್ಮದರ್ಶಿ ಚಂದ್ರನಾಥ ಮಧೂರಕರ, ಶಿವಾಜಿರಾವ ಮಧೂರಕರ, ಜೋಗಿ ಸಮಾಜದ ಮುಖಂಡರಾದ ಮಾರುತಿ ಮಧೂರಕರ, ರಾಮಚಂದ್ರ, ಮಧೂರಕರ ಚಂದ್ರು ಮಧೂರಕರ ಪಾಲ್ಗೊಂಡಿದ್ದರು.

ಸರ್ಕಾರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಇಂದು
ಹಾನಗಲ್ಲ: ತಾಲೂಕಿನ ಹರವಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಮಾ. 2ರಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಕೂಡಲದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸುವರು. ಸಣ್ಣ ಕೈಗಾರಿಕೆ ಮತ್ತು ಸಕ್ಕರೆ, ಮುಜರಾಯಿ ಸಚಿವ ಪ್ರಕಾಸ ಹುಕ್ಕೇರಿ ಸರ್ಕಾರದ ಪರವಾಗಿ ತಾಮ್ರ ಫಲಕ ಸಮರ್ಪಿಸುವರು. ಶಾಸಕ ಮನೋಹರ ತಹಶೀಲ್ದಾರ ಅಧ್ಯಕ್ಷತೆ ವಹಿಸುವರು. ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ದೇಸಾಯಿ ಧ್ವಜಾರೋಹಣ ನೆರವೇರಿಸುವರು. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಜಿ.ಪಂ. ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಡಾ. ಶೋಭಾ ನಿಸ್ಸೀಮಗೌಡ್ರ, ತಾ.ಪಂ. ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಜಿ.ಪಂ. ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಮಹದೇವಪ್ಪ ಭಾಗಸರ, ಗೀತಾ ಅಂಕಸಖಾನಿ, ಕಸ್ತೂರೆವ್ವ ವಡ್ಡರ, ಅಬಿದಾಬಿ ನದಾಫ, ತಾ.ಪಂ. ಸದಸ್ಯೆ ಲಕ್ಷ್ಮವ್ವ ನಿಂಬಣ್ಣನವರ, ಗ್ರಾ.ಪಂ. ಅಧ್ಯಕ್ಷೆ ಶೀಲವ್ವ ಮುದಿಗೌಡ್ರ, ಡಿಡಿಪಿಐ ಎಸ್.ಬಿ. ಕೊಡ್ಲಿ, ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ಸಮನ್ವಯಾಧಿಕಾರಿ ಎಚ್.ಎಂ. ಖಾನ, ಅಕ್ಷರ ದಾಸೋಹ ಜಿಲ್ಲಾ ಮಟ್ಟದ ಅಧಿಕಾರಿ ಜೆಡ್.ಎಂ. ಖಾಜಿ, ತಾಲೂಕು ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಾಳಿ, ತಾ.ಪಂ.ಕಾ.ನಿ. ಅಧಿಕಾರಿ ಎಸ್.ಬಿ. ಲಕ್ಷ್ಮೇಶ್ವರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.