ಹಿಂದುಳಿದ ಪ್ರದೇಶಾಭಿವೃದ್ಧಿಗೆ ಬದ್ಧ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 3
ರಾಜ್ಯ ಸರ್ಕಾರ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬದ್ಧವಾಗಿದ್ದು, ಅವುಗಳ ಅನುಷ್ಠಾನಕ್ಕಾಗಿ ಕೋಟ್ಯಂತರ ರು.ಗಳ ಅನುದಾನವನ್ನು ಬಿಡುಗಡೆಗೊಳಿಸುತ್ತಿದೆ ಎಂದು ಶಾಸಕ ಮನೋಹರ ತಹಶೀಲ್ದಾರ ತಿಳಿಸಿದರು.
ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಆಡೂರ-ಕಂಚಿನೆಗಳೂರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಾಲೂಕಿಗೆ 50 ಸಾವಿರ ಲೀ. ಸಾಮರ್ಥ್ಯದ 18 ಮೇಲ್ಮಟ್ಟದ ಜಲಾಗಾರಗಳು ಮಂಜೂರಾಗಿವೆ. ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿವೆ ಎಂದರು.
ಹರವಿ-ಕಾಲ್ವೆಕಲ್ಲಾಪುರ ಗ್ರಾಮಗಳ ನಡುವೆ ರು. 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ವರ್ದಿ ನರೇಗಲ್ಲ ಗ್ರಾಮಗಳ ನಡುವೆ ಎರಡೂ ಬದಿ ಚರಂಡಿ ನಿರ್ಮಾಣಕ್ಕಾಗಿ ರು. 1.50 ಕೋಟಿ ಮಂಜೂರಾಗಿದೆ. ಆಡೂರು-ಕಂಚಿನೆಗಳೂರ ರಸ್ತೆಗೆ ರು. 1.50 ಕೋಟಿ, ಹರವಿ-ಮಾಸನಕಟ್ಟಿ ರಸ್ತೆಗೆ ರು. 1.50 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಾರಂಭಗೊಂಡಿವೆ ಎಂದು ವಿವರಿಸಿದರು. ಕೂಡಲ ಗುರುನಂಜೇಶ್ವರ ಮಠದ ಸಮೀಪ ರು. 10 ಕೋಟಿ ವೆಚ್ಚದಲ್ಲಿ ಬ್ಯಾರೇಜ್, ಹಾವಣಗಿ-ಸೋಮಾಪುರ ಮಧ್ಯೆ ವರದಾ ನದಿಗೆ ಬ್ರಿಡ್ಜ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ರು. 10 ಕೋಟಿ ವೆಚ್ಚದಲ್ಲಿ ತಾಲೂಕಿನ 65 ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು, ಇದಲ್ಲದೇ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರು. 100 ಕೋಟಿ ಯೋಜನೆ ರೂಪಿಸಿದ್ದು, ಹಿಂದುಳಿದ ಗ್ರಾಮಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.
ಇದೇ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ರು. 19.80 ಲಕ್ಷ ವೆಚ್ಚದ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ರು. 5 ಲಕ್ಷ ಸ್ತ್ರೀಶಕ್ತಿ ಭವನವನ್ನು ಶಾಸಕರು ಉದ್ಘಾಟಿಸಿದರು.
ನಂತರ ಹರವಿ-ಕಂಚಿನೆಗಳೂರು-ಕಾಲ್ವೆಕಲ್ಲಾಪುರ ರಸ್ತೆ, ವರ್ದಿ-ಬಂಕಾಪುರ- ಪಾಳಾ ರಸ್ತೆ ಕಾಮಗಾರಿಗಳಿಗೆ ಶಾಸಕ ಮನೋಹರ ತಹಶೀಲ್ದಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಮಹದೇವಪ್ಪ ಭಾಗಸರ, ತಾ.ಪಂ. ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯ ಸುರೇಶ ನೆರ್ಕಿಮನಿ, ಕೆಪಿಸಿಸಿ ಸದಸ್ಯ ರಾಜಶೇಖರ ಸಾಲಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಎ.ಎಂ.ಪಠಾಣ, ಗ್ರಾ.ಪಂ.ಅಧ್ಯಕ್ಷ ಶಕುಂತಲಾ ತಳವಾರ, ಉಪಾಧ್ಯಕ್ಷ ಮಾರ್ತಾಂಡಪ್ಪ ಕತ್ತಿ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಶಿವಲೀಲಾ ಕಮ್ಮಾರಮಠ, ಸರಸ್ವತೆವ್ವ ಕಮ್ಮಾರ, ಗೀತಾ ದಾಮೋದರ, ವಿಜಯಲಕ್ಷ್ಮಿ ಅಮ್ಮಿನಭಾವಿ, ಬಸಮ್ಮ ಕಮ್ಮಾರ, ಶಾಂತವ್ವ ಬಾರ್ಕಿ, ಶಾರದಾ ಬಡಿಗೇರ, ಬಸಮ್ಮ ಮಡಿವಾಳರ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ.ಬಂಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

