ವಂಚಿತರಿಗೆ ಶೀಘ್ರ ಪಡಿತರ ಚೀಟಿ ವ್ಯವಸ್ಥೆ
ಹಾನಗಲ್ಲ: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪಡಿತರ ಯೋಜನೆಯ ಫಲಾನುಭವಿಗಳಿಗೆ ತಾಲೂಕಿನಾದ್ಯಂತ ಪಡಿತರ ಚೀಟಿ ವಿತರಿಸಲಾಗುತ್ತಿದ್ದು, ಪಡಿತರಚೀಟಿ ವಂಚಿತರಾದ ಫಲಾನುಭವಿಗಳಿಗೆ ಸರ್ಕಾರ ಕೂಡಲೇ ವಿತರಣಾ ವ್ಯವಸ್ಥೆ ಕೈಗೊಳ್ಳಲಿದೆ ಎಂದು ಶಾಸಕ ಮನೋಹರ ತಹಶೀಲ್ದಾರ ತಿಳಿಸಿದರು.
ತಾಲೂಕಿನ ಹೊಸಆಲದಕಟ್ಟಿ ಹಾಗೂ ಬೆಳಗಾಲಪೇಟೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಯಲ್ಲಿ ರು. 13.75 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ರು. 4.20 ಲಕ್ಷ ಬಿಸಿಯೂಟದ ಕೊಠಡಿ ಕಾಮಗಾರಿಗೆ ಶಿಲಾನ್ಯಾಸ, ರು. 5 ಲಕ್ಷ ವೆಚ್ಚದ ವಿಠ್ಠಲ ರುಕುಮಾಯಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ, ಫಲಾನುಭವಿಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಿ ಮಾತನಾಡಿದರು.
ತಾಲೂಕಿನ 39 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತಲಾ ರು. 4.21 ಲಕ್ಷದಂತೆ ಮೂರನೇ ಕಂತಿನ ಹಣ ಬಿಡುಗಡೆಗೊಳಿಸಲಾಗಿದೆ. ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ವಿತರಿಸಲಾಗುತ್ತಿದೆ. ಆದಾಗ್ಯೂ ಅನರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದ್ದರೆ ತಿಳಿಸಿ ನಿರ್ದಾಕ್ಷಿಣ್ಯವಾಗಿ ರದ್ದುಪಡಿಸುತ್ತೇವೆ ಎಂದರು. ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿರುವ ಹೊಸಆಲದಕಟ್ಟಿ-ಹೊಂಕಣ ರಸ್ತೆಗೆ ರು. 17 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಇಂದಿನಿಂದಲೇ ಪ್ರಾರಂಭಗೊಳ್ಳಲಿದೆ. ಇದರೊಂದಿಗೆ ಬೆಳಗಾಲಪೇಟ-ಕಂಚಿನೆಗಳೂರ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೆನೆಗುದಿಗೆ ಬಿದ್ದಿರುವ ಶಿರಮಾಪುರ ಏತನೀರಾವರಿ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಎ.ಎಂ. ಪಠಾಣ, ಮಲ್ಲನಗೌಡ ಪಾಟೀಲ, ಅನಿತಾ ಶಿವೂರ, ಲಲಿತಾ ಹಿರೇಮಠ, ಅಜ್ಜಪ್ಪ ಪಾಟೀಲ, ಚನ್ನಬಸಪ್ಪ ಶಿಗ್ಗಾವಿ, ಬಸಣ್ಣ ಹುಗ್ಗಿಶೆಟ್ಟರ, ಎನ್.ಎಸ್. ಪಾಟೀಲ, ಇನಾಮದಾರ, ಬಾಬಜಿ, ಬಡಿಗೇರ, ಬಸವರಾಜ ಉರಣಕರ, ನಿಸ್ಸೀಮಗೌಡ್ರ ಪಾಟೀಲ, ಲಕ್ಷ್ಮೀ ಭಜಂತ್ರಿ, ಡಿಡಿಪಿಐ ಎಸ್.ಬಿ. ಕೊಡ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಮುಂತಾದವರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ರೇವಣ್ಣನವರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

