ನಾಳೆಯಿಂದ ಸಿದ್ದೇಶ್ವರ ಜಾತ್ರೆ
ಹಿರೇಕೆರೂರು: ತಾಲೂಕಿನ ಕಣವಿ ಶಿದ್ಗೇರಿ ಗ್ರಾಮದ ಸಿದ್ದೇಶ್ವರ ದೇವರ ಜಾತ್ರೆಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ. 9ರಿಂದ 12ರ ವರೆಗೆ ಜರುಗಲಿವೆ. ಈ ದೇವಸ್ಥಾನ ಬೆಟ್ಟದ ಮೇಲಿದ್ದು ಹಸಿರು ಬೆಟ್ಟಗಳ ಶ್ರೇಣಿಯಲ್ಲಿ ಐತಿಹಾಸಿಕ ಮಹತ್ವ ಪಡೆದಿದೆ.
ಕ್ರಿಶ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನುವುದು ಇಲ್ಲಿನ ಶಿಲಾಶಾಸನದಿಂದ ತಿಳಿದು ಬರುತ್ತಿದೆ. ಎರಡು ಬೆಟ್ಟಗಳ ಮಧ್ಯೆ ದೇವಸ್ಥಾನ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಕಣವಿ ಶಿದ್ದೇಶ್ವರ ಎನ್ನುತ್ತಾರೆ. ದುರ್ಗಾದೇವಿ, ಭಜನೆ ಬಾವಿ, ಪ್ರಾಂಗಣದಲ್ಲಿ ವಿಶೇಷವಾಗಿ ನಿರ್ಮಿಸಿದ ಶಿವನ ಮೂರ್ತಿ, ಅಂತರಗಂಗೆ ಹಾಗೂ ಭಗವತಿ ಕರೆಗಳು ಇಲ್ಲಿನ ವಿಶೇಷಗಳಾಗಿವೆ. ಮಾ. 9ರಂದು ಹೂವಿನ ತೇರು, ಮಾ. 10ರಂದು ಎಡೆ ಕೊಡುವುದು, ಮಾ. 11ರಂದು ದೊಡ್ಡ ರಥೋತ್ಸವ, ಗುಗ್ಗಳ, ಮತ್ತು ಅನ್ನಸಂತರ್ಪಣೆ, ಮಾ. 12ರಂದು ಓಕುಳಿ ಬುಕುಟ್ಟಿನ ಸೇವೆ, ಎತ್ತಿನ ಮೆರವಣಿಗೆ ನಡೆಯಲಿದೆ. ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ದೇವಸ್ಥಾನದ ಕಮಿಟಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

