ಹಾವೇರಿ

ಸಂಭ್ರಮದ ರೇವಣಸಿದ್ಧೇಶ್ವರ ಶ್ರೀಗಳ ಜಾತ್ರಾಮಹೋತ್ಸವ

Published On :

ಶಿಗ್ಗಾಂವಿ:  ತಾಲೂಕಿನ ಬಂಕಾಪುರ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಆದಿ ಜಗದ್ಗುರು ರೇವಣಸಿದ್ಧೇಶ್ವರ ಶ್ರೀಗಳವರ ಜಯಂತ್ಯುತ್ಸವ ಹಾಗೂ ಜಾತ್ರಾ ಮಹೋತ್ಸವ ಭಕ್ತ ಸಮೂಹದ ಮಧ್ಯೆ ಶ್ರದ್ಧಾ, ಭಕ್ತಿಯಿಂದ ಜರುಗಿತು.
ಉತ್ತರ ಕರ್ನಾಟಕದ ಸಂಚಾರಿ ಕುರುಬರ ಒಕ್ಕೂಟದ ಆಶ್ರಯದಲ್ಲಿ ನಡೆದ ಜಗದ್ಗುರು ರೇವಣಸಿದ್ಧೇಶ್ವರ ಶ್ರೀಗಳವರ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ ಕುರಿ ಹಾಲಿನಿಂದ ರೇವಣಸಿದ್ಧೇಶ್ವರ ಶ್ರೀಗಳ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಿದರು. ನಂತರ ಹೊನ್ನಾಪುರ ಕರಿಸಿದ್ಧೇಶ್ವರ, ಮಣ್ಣೂರ ಉಡಚಮ್ಮದೇವಿ ಮತ್ತು ತೆಗ್ಗಿಹಳ್ಳಿ ಗ್ರಾಪಂ ಹಾಗೂ ಸವಣೂರಿನ ಸಾಲಿ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಕುರಿ ಹಾಲಿನ ಕೊಡಗಳ ಭವ್ಯ ಮೆರವಣಿಗೆ ಡೊಳ್ಳಿನ ವಾದ್ಯದೊಂದಿಗೆ ನೆರವೇರಿತು.
ಮೆರವಣಿಗೆ ಉದ್ದಕ್ಕೂ ರೇವಣಸಿದ್ಧೇಶ್ವರರ ಜಯ ಘೋಷ ಮೊಳಗಿದವು. ರಾಜ್ಯ ಕುರಿ ಉಣ್ಣೆ ನಿಗಮ ಮಂಡಳಿ ಆಶ್ರಯದಲ್ಲಿ ಕುರಿಗಾರರಿಗೆ ಕುರಿ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು. ನಂತರ ನಡೆದ ಧರ್ಮ ಸಭೆ ಸಾನ್ನಿಧ್ಯವನ್ನು ಕೆಂಡದಮಠದ ಶಿವಪುತ್ರಯ್ಯ ಶ್ರೀಗಳು, ಬಸಯ್ಯ ಶ್ರೀಗಳು, ಶಿದ್ಧಯ್ಯ ಶ್ರೀಗಳು ವಹಿಸಿದ್ದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಾರೆಪ್ಪ ತಳ್ಳಿಹಳ್ಳಿ, ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಗೌಡ ಪಾಟೀಲ, ರಾಜ್ಯ ಭೂ-ಸೇನಾ ನಿಗಮ ಮಂಡಳಿ ಅಧ್ಯಕ್ಷ ಅರುಣ ಅಣ್ಣಿಗೇರಿ, ತೆಗ್ಗಿಹಳ್ಳಿ ಗ್ರಾಪಂ ಅಧ್ಯಕ್ಷ ಸುರೇಶಗೌಡ ಪಾಟೀಲ, ರಾಜ್ಯ ದುರ್ಗಾ ಸಂಚಾರಿ ಕುರಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ವಿಠ್ಠಲ ಮನಿಗೇನಿ ಬನ್ನೆ, ಮಾಳಪ್ಪ ಗಡ್ಡೆ, ಶಂಕರಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ರಾಣೋಜಿ, ಪುರಸಭೆ ಸದಸ್ಯರಾದ ಸತೀಶ ಆಲದಕಟ್ಟಿ, ಭೀರಪ್ಪ ಬನ್ನೆ, ಭೂ-ದಾನಿ ಮಹ್ಮದಹುಸೇನ ಮನಿಯಾರ ಸೇರಿದಂತೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.