ಸೂಕ್ಷ್ಮ ಸಂಶೋಧನೆಗಳಿಗೆ ಒತ್ತು: ಡಾ. ಗಾಯತ್ರಿದೇವಿ
ಶಿಗ್ಗಾಂವಿ: ಅಂತರ್-ಬಹು ಶಿಸ್ತಿನ ನೆಲೆಯಲ್ಲಿ ಸೂಕ್ಷ್ಮ ಸಂಶೋಧನೆಗಳಿಗೆ ಒತ್ತು ನೀಡುವಂತೆ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಆಂಡ್ ಎಕನಾಮಿಕ್ ಚೇಂಜ್‌ನ ವಿಶ್ರಾಂತ ಪ್ರಾಧ್ಯಾಪಕ ಡಾ ಗಾಯತ್ರಿದೇವಿ ಸಂಶೋಧಕರಿಗೆ ಉತ್ತೇಜಿಸಿದರು.
ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಜರುಗಿದ ಉನ್ನತ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ಸೂಕ್ಷ್ಮ ಅಧ್ಯಯನಗಳು ಸರ್ಕಾರದ ಸಾಕಷ್ಟು ನೀತಿ ರೂಪಿಸುವಲ್ಲಿ ಪಾತ್ರ ವಹಿಸುತ್ತವೆ. ಸಂಶೋಧಕರು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಸಮಸ್ಯೆಯೊಳಗೆ ಇಳಿದು ಸಂಶೋಧನಾ ನೀತಿಗಳನ್ನು ಪಾಲಿಸುವ ಮೂಲಕ ನೈಜ ಮತ್ತು ವಸ್ತುನಿಷ್ಠ ಫಲಿತಾಂಶ ನೀಡಬೇಕು. ಸಮಾಜ ವಿಜ್ಞಾನ ಮತ್ತು ವಿಜ್ಞಾನ ಶಿಸ್ತಿನ ನೆಲೆಯಲ್ಲಿ ಪಾರಂಪರಿಕ ಜ್ಞಾನವನ್ನು ಒರೆಗೆ ಹಚ್ಚಿ ಗ್ರಾಮೀಣ ಅಭಿವೃದ್ಧಿಗೆ ಪುಷ್ಟಿ ನೀಡುವಂತಹ ಫಲಿತಾಂಶ ಪಡೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ ಸ.ಚಿ. ರಮೇಶ ಮಾತನಾಡಿ, ಜನಪದ ಮೌಖಿಕ ಸಾಹಿತ್ಯದಿಂದ ಸಾಕಷ್ಟು ನೀತಿ ಪಾಠಗಳು ದೊರೆಯುತ್ತವೆ. ಕ್ರಿಯಾಶೀಲತೆ ಮತ್ತು ಜೀವನ ಪಾಠ ಅನಾವರಣ ಮಾಡುವ ಅಂಶಗಳು ಜನಪದ ಕಥೆ, ಹಾಡು, ಗಾದೆ, ಒಗಟು ಇತ್ಯಾದಿಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲು ವೀರಣ್ಣ ಮತ್ತು ಅವರ ತಂಡದವರು 'ಬಾಪೂಜಿ' ಗೊಂಬೆಯಾಟ ಪ್ರದರ್ಶನ ನೀಡಿದರು. ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ, ಕುಲಸಚಿವ ಡಾ ಡಿ.ಬಿ. ನಾಯ್ಕ, ಹಿರಿಯ ಸಂಶೋಧನಾ ಅಧಿಕಾರಿ ಡಾ ಕೆ. ಪ್ರೇಮಕುಮಾರ, ಕನ್ನಡ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ ಸಿದ್ದಗಂಗಮ್ಮ, ಜನಶಕ್ತಿ ಸಂಘಟನೆಯ ರಾಜ್ಯ ಸಂಚಾಲಕ ಡಾ ವಾಸು, ಮಂಗಳೂರು ವಿವಿ ಅಭಿವೃದ್ಧಿ ವಿಭಾಗದ ಪ್ರೊ ಶ್ರೀಪತಿ ಭಟ್ ಮತ್ತು ಧಾರವಾಡದ ಡಾ ಪ್ರಕಾಶ ಭಟ್ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ ವೃಷಭಕುಮಾರ ಸ್ವಾಗತಿಸಿ, ನಿರೂಪಿಸಿದರು. ಪ್ರೊ ಎಂ. ಚಂದ್ರ ಪೂಜಾರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

