ಪತ್ರಕರ್ತಗೆ ಬೆದರಿಕೆ: ಸಚಿವ ಜೈನ್ ವಜಾಕ್ಕೆ ಆಗ್ರಹ
ಬ್ಯಾಡಗಿ: ಪತ್ರಕರ್ತನಿಗೆ ಜೀವ ಬೆದರಿಕೆ ಹಾಕಿದ ಸಚಿವ ಅಭಯಚಂದ್ರ ಜೈನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಪತ್ರಕರ್ತ ಬಸವಂತಪ್ಪ ಹುಲ್ಲತ್ತಿ ಮಾತನಾಡಿ, ಪತ್ರಕರ್ತರ ಮೇಲೆ ಜೀವ ಬೆದರಿಕೆ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕುತಂತ್ರವನ್ನು ಸಚಿವರು ನಡೆಸಿದ್ದಾರೆ ಎಂದು ಆರೋಪಿಸಿದರು. ನಾಗೇಶ ಗುತ್ತಲ ಪರಮೇಶ ಅಂಗಡಿ, ರಾಜು ಗುತ್ತಲ, ಸಂತೋಷ ಸೊನ್ನದ, ಸುರೇಶ ಗುತ್ತಲ, ಎಸ್.ಜಿ. ಕರ್ನೂಲ, ಪಾಂಡು ಸುತಾರ, ಶಿವಾನಂದ ಮಲ್ಲನಗೌಡರ, ಮಹ್ಮದ್ ಲಿಜಿನ್ನಾ ಹಲಗೇರಿ, ಜಿತೇಂದ್ರ ಸುಣಗಾರ, ಖಾದರ ಬಳಿಗಾರ ಸೇರಿದಂತೆ ಮತ್ತಿತರರು ಇದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 25 ಜೋಡಿ
ಶಿಗ್ಗಾಂವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಕಾಶೀಪೀಠದ ಶಾಖಾ ಮಠವಾದ ಕಂಬಾಳಿಮಠ ಮೂಲ ಪವಾಡಪುರುಷ ಕಂಬಾಳೇಶ್ವರ ಮಹಾರುದ್ರಾಭೀಷೇಕ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 25 ಜೋಡಿ ವಧು-ವರರು ನವಜೀವನಕ್ಕೆ ಕಾಲಿಟ್ಟರು. ಶುಕ್ರವಾರ ಬೆಳಗ್ಗೆ 6.30ಕ್ಕೆ ಗದ್ದುಗೆಗೆ ಮಹಾರುದ್ರಾಭೀಷೇಕ ಮಧ್ಯಾಹ್ನ 12.40ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದವು. ಜಿಪಂ ಸದಸ್ಯ ಬಿ.ಟಿ. ಇನಾಮತಿ ಮಾತನಾಡಿದರು. ರಾಜಶೇಖರ ಸ್ವಾಮೀಜಿ ಕಂಬಾಳಿಮಠ ಸಾನ್ನಿಧ್ಯ ವಹಿಸಿದ್ದರು. ಎಸ್.ಎಂ ಕುಲಕರ್ಣಿ, ಸುಶೀಲಾ ಕುಲಕರ್ಣಿ, ಸಾವಯವ ಕೃಷಿಕ ಜಯದೇವ ಅಗಡಿ, ಜಿಪಂ ಸದಸ್ಯೆ ಸರೋಜಾ ಆಡೀನ, ಶಿಗ್ಗಾಂವಿ ಪುರಸಭೆ ಸದಸ್ಯರಾದ ಶಿವಪ್ರಸಾದ ಸುರಗಿಮಠ, ಬಿ.ಎಸ್. ನವಲಗುಂದ, ಸುಭಾಸ ಚವ್ಹಾಣ, ಗ್ರಾಮಸ್ಥರು ಇದ್ದರು.
ನೆಮ್ಮದಿಗೆ ಆಧ್ಯಾತ್ಮಿಕ ಕಾರ್ಯ ಅಗತ್ಯ: ಶ್ರೀಗಳು
ಹಿರೇಕೆರೂರು: ಮನುಷ್ಯ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಅಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯರು ಹೇಳಿದರು. ತಾಲೂಕಿನ ಮಳಗಿ ಗ್ರಾಮದಲ್ಲಿ ಹನುಮಂತ ದೇವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ಶಾಸಕ ಬಿ.ಸಿ. ಪಾಟೀಲ, ಟಿ.ಬಿ. ಬಳಗಾವಿ, ಪ್ರಭುದೇವ ನಾಡಿಗೇರ, ರವೀಂದ್ರ ಮುದಿಯಪ್ಪನವರ, ಶಿವನಗೌಡ ಸಾಹುಕಾರ, ಶಂಭಣ್ಣಗೊಳ್ಪನವರ, ಸಂಕನಗೌಡ ಗೌಡ್ರ, ಶಿವನಗೌಡ ಪಾಟೀಲ, ಭರಮಗೌಡ ಗೌಡ್ರ, ಎಸ್.ಎಚ್.ಪಾಟೀಲ, ನಾಗನಗೌಡ ಗೌಡ್ರ, ರೇವಣಪ್ಪ ಗೌಡ್ರ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

