ರಾಯಚೂರು

ಜಗಜೀವನರಾಂ ಯುವಕರಿಗೆ ಆದರ್ಶಪ್ರಾಯ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.5
ದೇಶದ ಯುವಕರಿಗೆ ಮಹಾನ್ ವ್ಯಕ್ತಿ ಡಾ. ಬಾಬು ಜಗಜೀವನರಾಂ ಅವರು ಆದರ್ಶಪ್ರಾಯರಾಗಿದ್ದು, ಯುವಕರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ನೆರವೇರಿಸಿ ಮಾತನಾಡಿ, ದೀನ ದಲಿತರು ಹಾಗೂ ಬಡವರ ಬದುಕಿನ ಸುಧಾರಣೆಗಾಗಿ ಜಗಜೀವನರಾಂ ಅವರು ಹಲವಾರು ರೀತಿಯ ಕಾರ್ಯಕ್ರಮ ಜಾರಿಗೆ ಯೋಜಿಸಿದ್ದರು. ಅದರಿಂದಾಗಿ ದೇಶವೇ ಅವರನ್ನು ಗೌರವದಿಂದ ಕಾಣುತ್ತಿದೆ ಎಂದು ಹೇಳಿದರು.
ಆದರ್ಶಗಳನ್ನು ಪಾಲಿಸಿ: ದೇಶದ ಉಪಪ್ರಧಾನಿಯಾಗಿ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಡಾ. ಜಗಜೀವನರಾಂ ಅವರು ಸಾಗಿದ ಮಾರ್ಗದಲ್ಲಿಯೇ ಎಲ್ಲರೂ ಮುನ್ನಡೆಯುವ ಪ್ರಯತ್ನ ಮಾಡಬೇಕಿದೆ. ಅವರ ಆದರ್ಶಗಳನ್ನು ಪಾಲಿಸುವುದು ಅವಶ್ಯ ಎಂದು ಅವರು ಸಲಹೆ ನೀಡಿದರು.
ಹಿರಿಯ ಸಾಹಿತಿ ವೀರ ಹನುಮಾನ್ ಉಪನ್ಯಾಸ ನೀಡಿ, ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಡಾ. ಜಗಜೀವನರಾಂ ಅವರನ್ನು ಎಲ್ಲರೂ ಅರಿಯಬೇಕಿದೆ. ದೇಶದ ಸಂವಿಧಾನ ರಚನೆ ಸೇರಿದಂತೆ ಪಾಕಿಸ್ತಾನದೊಂದಿಗಿನ ಯುದ್ಧ, ಆಹಾರ ಕೊರತೆ ನಿವಾರಣೆಗೆ ಅವರು ಕೈಗೊಂಡ ನಿರ್ಧಾರಗಳು ಪರಿಣಾಮಕಾರಿಯಾಗಿದ್ದವು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಪಂ ಸಿಇಒ ಟಿ.ಜ್ಞಾನಪ್ರಕಾಶ ವಹಿಸಿದ್ದರು. ಸಹಾಯಕ ಆಯುಕ್ತೆ ಮಂಜುಶ್ರೀ, ಡಿವೈಎಸ್ಪಿ ದಿವ್ಯಾ ಗೋಪಿನಾಥನ್, ಹೆಚ್ಚುವರಿ ಎಸ್ಪಿ ಬಿ.ಮಹಾಂತೇಶ, ಜಿಪಂ ಮುಖ್ಯ ಯೋಜನಾಕಾರಿ ಡಾ. ಟಿ.ರೋಣಿ, ನಗರಸಭೆ ಪೌರಾಯುಕ್ತ ಮಂಜುನಾಥ.ಎಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿರಸಗಿಕರ್ ನಾಗಣ್ಣ ಇದ್ದರು.
ಸನ್ಮಾನ: ಈ ವೇಳೆ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮುದಗಲ್‌ನ ಲಕ್ಷ್ಮಿ ಮತ್ತು ಶಕ್ತಿನಗರದ ಸ್ನೇಹಾ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಬೆಳಗ್ಗೆ ನಗರದ ರೇಲ್ವೆ ನಿಲ್ದಾಣದ ಸರ್ಕಲ್‌ನಲ್ಲಿ ಡಾ. ಬಾಬು ಜಗಜೀವನರಾಂ ವೃತ್ತದಲ್ಲಿರುವ ಡಾ. ಬಾಬು ಜಗಜೀವನರಾಂ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಘೋಷ್, ಸಹಾಯಕ ಆಯುಕ್ತೆ ಮಂಜುಶ್ರೀ ಸೇರಿದಂತೆ ಅನೇಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.