ಬಾಬೂಜಿ ಸಂವಿಧಾನದ ಆಶಯ ಸಾಕಾರಗೊಳಿಸಿದ ಶಿಲ್ಪಿ: ದುರುಗಪ್ಪ
ಸಿಂಧನೂರು: ಸ್ವತಂತ್ರ ಭಾರತಕ್ಕೆ ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸಿಕೊಟ್ಟರೂ ಅವರ ಆಶಯದಂತೆ ಅದನ್ನು ಸಾಕಾರಗೊಳಿಸಿದ ಕೀರ್ತಿ ಭಾರತದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ರಾಂ ಅವರಿಗೆ ಸಲ್ಲುತ್ತದೆ ಎಂದು ನಗರಸಭೆಯ ಯೋಜನಾಧಿಕಾರಿ ದುರುಗಪ್ಪ ಹಸಮಕಲ್ ಬಣ್ಣಿಸಿದರು.
ಡಾ. ಬಾಬು ಜಗಜೀವನ್ರಾಂ ಅವರ 106ನೇ ಜನ್ಮದಿನೋತ್ಸವ ನಿಮಿತ್ತ ಶುಕ್ರವಾರ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗಜೀವನರಾಂ ಅವರು ದಲಿತ, ಹಿಂದುಳಿದ, ಬಡವರಿಗಾಗಿ ಸಂವಿಧಾನದಲ್ಲಿರುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ತಲುಪುವಂತೆ ಮಾಡಿದರು. ಸಮಾನತೆಗಾಗಿ ಹೋರಾಟ ಮಾಡಿದ ಅವರು ಭಾರತ ಸರ್ಕಾರದಲ್ಲಿ ಹಲವಾರು ಬಾರಿ ಮಂತ್ರಿಗಳಾಗುವ ಮೂಲಕ ಪ್ರಗತಿ ನಾಂದಿ ಹಾಡಿದ್ದಾರೆ. ಆಹಾರ ಸಂಕಷ್ಟದಲ್ಲಿ ಸ್ಥಿತಿಯಲ್ಲಿ ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿದರು ಎಂದರು.
ಪೌರಾಯುಕ್ತ ನಾಸೀರ ಅಲಿ ಜಗಜೀವನರಾಂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಗುಂಡಪ್ಪ ಸಾಲಗುಂದಾ, ಕಚೇರಿ ವ್ಯವಸ್ಥಾಪಕ ಗುರುರಾಜ ಕುಲ್ಕರ್ಣಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

