'ದಲ್ಲಾಳಿ ಪಕ್ಷಗಳಿಗೆ ಪಾಠ ಕಲಿಸಿ'
ಸಿಂಧನೂರು: ಜನದ್ರೋಹಿ ದಲ್ಲಾಳಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್ಆರ್ ಪಕ್ಷಗಳನ್ನು ಜನಪರ ವಿಚಾರಗಳ ಬಿಚ್ಚುಗತ್ತಿಯನ್ನು ಎತ್ತಿ ಹಿಡಿದು ಹೋರಾಟ ಮಾಡುವ ಮೂಲಕ ಚುನಾವಣೆಯಲ್ಲಿ ಮಣ್ಣುಮುಕ್ಕಿಸುವಂತೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಕಿ ಕರೆ ನೀಡಿದರು.
ನಗರದ ಜನತಾ ಕಾಲೋನಿಯ ಕಲ್ಯಾಣ ಮಂಟಪದಲ್ಲಿ ಜರುಗಿದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ರಾಂತಿಕಾರಿ ಪಕ್ಷದ ಜನಪರ ಮೇಲೆಂಬುದನ್ನು ಚುನಾವಣೆಯಲ್ಲಿ ಸಾಬೀತುಪಡಿಸುವ ಮೂಲಕ ತಕ್ಕಪಾಠ ಕಲಿಸುವಂತೆ ಹೇಳಿದರು.
ಎಚ್.ಎನ್. ಬಡಿಗೇರ ಮಾತನಾಡಿ, ಲೂಟಿಕೋರ ಪಕ್ಷಗಳನ್ನು ಸದೆಬಡಿದು ನಿರ್ನಾಮ ಮಾಡಿ ಕ್ರಾಂತಿಕಾರಿ ಪಕ್ಷದ ಗೆಲುವಿಗೆ ಶ್ರಮ ವಹಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.
ನಾಗರಾಜ ಪೂಜಾರ್ ಮಾತನಾಡಿ, ಚುನಾವಣೆಯ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜನದ್ರೋಹಿ ಪಕ್ಷಗಳಿಗೆ ಪ್ರತಿ ಸವಾಲು ಎಸೆದು ಸಿಪಿಎಂ ಗೆಲವಿಗೆ ಹೆಗಲೊಡ್ಡಿ ಎಂದರು.
ಪ್ರತಿ ಜನರ ಮನೆಗೆ ಪಕ್ಷದ ಜನಪರ ವಿಷಯಗಳನ್ನು ತಲುಪಿಸಿ ಮತಯಾಚಿಸಿರಿ ಎಂದರು.
ಬಸವರಾಜ ಹೊಸಳ್ಳಿ, ತಾಲೂಕು ಕಾರ್ಯದರ್ಶಿ ಹಾಗೂ ಸಿಂಧನೂರು ಕ್ಷೇತ್ರದ ಅಭ್ಯರ್ಥಿ ಸಿಪಿಐಎಂಎಲ್ ಅಭ್ಯರ್ಥಿ ರಮೇಶ ಪಾಟೀಲ್ ಬೇರ್ಗಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

