ರಾಜ್ಯ ಕಂಡ ಅತಿ ಭ್ರಷ್ಟ ಸರ್ಕಾರ ಬಿಜೆಪಿ: ವಿರೂಪಾಕ್ಷಪ್ಪ ಟೀಕೆ
ಮಸ್ಕಿ: ಇಲ್ಲಿಗೆ ಸಮೀಪದ ಹಾಲಾಪುರದಲ್ಲಿ ಸೋಮವಾರ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸೇರ್ಪಡೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾಜಿ ಸಂಸದ ಹಾಗೂ ಪಕ್ಷದ ಉಪಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಈ ವೇಳೆ ಮಾತನಾಡಿ, ರಾಜ್ಯ ಕಂಡ ಅತೀ ಭ್ರಷ್ಟ ಸರ್ಕಾರ ಬಿಜೆಪಿ ಸರ್ಕಾರವಾಗಿದೆ. ಅದೇ ರೀತಿ ಭ್ರಷ್ಟಾಚಾರದ ಆರೋಪ ಮೇಲೆ ಜೈಲು ಕಂಡ ರಾಜ್ಯದ ಮೊಟ್ಟ ಮೊದಲ ಸಿಎಂ ಯಡಿಯೂರಪ್ಪ ಅವರಾಗಿದ್ದಾರೆಂದು ಟೀಕಿಸಿದರು.
ಬಿಜೆಪಿ ಈ ಹಿಂದೆ ಕೈಗೊಂಡ ಆಪರೇಷನ್ ಕಮಲವೇ ಇಂದು ಆ ಪಕ್ಷಕ್ಕೆ ತಿರುಗುಬಾಣವಾಗಿದೆ. ಅನೇಕ ಶಾಸಕರು ಆ ಪಕ್ಷ ತೊರೆಯುತ್ತಿದ್ದಾರೆ. ಅದು ಆ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಿನ ಮೂಲಕ ಪಾಠ ಕಲಿಸಲಿದೆ ಎಂದು ಅವರು ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಅನುಭವಿಸಿ ಇದೀಗ ಬಿಜೆಪಿ ತೊರೆದಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಮತದಾರರು ಪಾಠ ಕಲಿಸುವಂತೆ ಮನವಿ ಮಾಡಿದರು.
ಬಿಎಸ್ಸಾಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೇಖರಪ್ಪ ತಳವಾರ್ ಅವರು ಜನಪರ ನಿಲುವುಗಳನ್ನು ಹೊಂದಿದ್ದು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ಶೇಖರಪ್ಪ ತಳವಾರ ಮಾತನಾಡಿದರು.
ಮುಖಂಡರಾದ ಬಿ.ಲಿಂಗಪ್ಪ, ಮಾಜಿ ತಾಪಂ ಸದಸ್ಯ ಬಸನಗೌಡ ಮುದಿಗೌಡರ್, ಕರಿಯಪ್ಪ ಹಾಲಾಪೂರು, ಸಂಜಯಕುಮಾರ್ ಜೈನ್ ಮತ್ತಿತರರು ಇದ್ದರು.
ಸೇರ್ಪಡೆ: ಕ್ಷೇತ್ರದ ಹಾಲಾಪೂರು, ತುಗ್ಗಲದಿನ್ನಿ, ಬಸವಣ್ಣ ಕ್ಯಾಂಪ್, ಯದ್ದಲದಿನ್ನಿ, ಜಿನ್ನಾಪೂರು, ನಾಗಲದಿನ್ನಿ, ಜಂಗಮರಹಳ್ಳಿ ಮುಂತಾದ ಗ್ರಾಮಗಳ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

